ಕರ್ನಾಟಕ

ರಾಹುಲ್ ಚಟುವಟಿಕೆಯಿಂದಿರುವುದು ಒಳ್ಳೆಯ ಬೆಳವಣಿಗೆ : ಎಸ್.ಎಂ. ಕೃಷ್ಣ

Pinterest LinkedIn Tumblr

krishna

ಬೆಂಗಳೂರು: ಸಕ್ರಿಯ ರಾಜಕಾರಣ ಪ್ರವೇಶದ ಬಗ್ಗೆ ಕಾಲವೇ ನಿರ್ಧರಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ  ಮತ್ತು ರಾಜ್ಯಸಭಾ ಸದಸ್ಯ ಎಸ್.ಎಂ. ಕೃಷ್ಣ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಬಿಬಿಎಂಪಿ ವಿಭಜನೆ ವಿಚಾರ ಕೋರ್ಟ್‌ನಲ್ಲಿದೆ. ಆದ್ದರಿಂದ ಅದರ ಬಗ್ಗೆ ಏನೂ ಹೇಳಲ್ಲ ಎಂದು ಕೃಷ್ಣ ಬಿಬಿಎಂಪಿ ವಿಭಜನೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಸರ್ಕಾರದ ಕಾರ್ಯವೈಖರಿ ಕುರಿತು ಕೇಳಿದ ಪ್ರಶ್ನೆಗೆ  ಸರ್ಕಾರಕ್ಕೆ 2 ವರ್ಷ ತುಂಬುತ್ತಿದೆ, ಪರಾಮರ್ಶಿಸಿಕೊಳ್ಳಬೇಕು. ಯಾವ ರೀತಿ ನಡೆಯುತ್ತಿದೆ ಎಂದು ಹೇಳಲಿಕ್ಕೆ ಆಗಲ್ಲ ಎಂದು ಅವರು ನುಡಿದರು.  ರಾಜ್ಯದ ಸಚಿವರ ಮೌಲ್ಯಮಾಪನದ ಬಗ್ಗೆ ಮಾತನಾಡುತ್ತಾ ಒಬ್ಬೊಬ್ಬ ಸಿಎಂ ಕಾರ್ಯವೈಖರಿ ಒಂದೊಂದು ರೀತಿಯಲ್ಲಿರುತ್ತದೆ ಎಂದು ಹೇಳಿದರು. ನನ್ನ ಕಾಲದಲ್ಲಿ ಸಚಿವರ ಮೌಲ್ಯಮಾಪನ ನಡೆದಿತ್ತು ಎಂದೂ ನೆನಪಿಸಿದರು.

ರಾಹುಲ್ ಇತ್ತೀಚೆಗೆ ಚಟುವಟಿಕೆಯಿಂದ ಇರುವುದು ಒಳ್ಳೆಯ ಬೆಳವಣಿಗೆ ಎಂದು ರಾಹುಲ್ ಗಾಂಧಿಯನ್ನು ಶ್ಲಾಘಿಸಿದರು. ರಾಹುಲ್ ದೇಶ ಸಂಚಾರ ಮಾಡುತ್ತಾ ವಿಷಯವನ್ನು ಅರಿಯುತ್ತಿದ್ದಾರೆ ಎಂದೂ ಹೇಳಿದರು. ಪ್ರಿಯಾಂಕ ಗಾಂಧಿ ರಾಜಕೀಯ ಪ್ರವೇಶಿಸುವ ಬಗ್ಗೆ ಹೇಳಿಕೊಂಡಿಲ್ಲ ಎಂದೂ ನುಡಿದರು.
-ಕೃಪೆ: ವೆಬ್ ದುನಿಯಾ

Write A Comment