ಕನ್ನಡ ವಾರ್ತೆಗಳು

ಗಂಡನ ಹಣದಾಸೆಗೆ ಬಲಿಯಾದಳೇ ಇಂದಿರಾ..?; ಬಾವಿಯಲ್ಲಿತ್ತು ಪತ್ನಿ ಡೆಡ್ ಬಾಡಿ; ಪತಿ ಅರೆಸ್ಟ್

Pinterest LinkedIn Tumblr

Jannadi_lady_death (26)

ಕುಂದಾಪುರ: ಅನ್ಯೊನ್ಯವಾಗಿರಬೇಕಿದ್ದ ಇವರ ಪುಟ್ಟ ಸಂಸಾರದಲ್ಲಿ ಇಂದು ಹಣದ ವಿಚಾರದಲ್ಲಿ ನಡೆಯಬಾರದ ಘಟನೆ ನಡೆದು ಹೊಗಿದೆ. ಗಂಡನ ಹಣದ ವ್ಯಾಮೋಹಕ್ಕೆ ಹೆಂಡತಿ ಸತ್ತಿದ್ದಾಳೆ, ಇವರಿಬ್ಬರ ಮಗುವಿಗೆ ದಾರಿ ಕಾಣದಾಗಿದೆ. ಅಷ್ಟಕ್ಕೂ ಗಂಡ ಹಣಕ್ಕಾಗಿ ಪೀಡಿಸಿ ಗಲಾಟೆ ಮಾಡಿದ್ದ, ಗುರುವಾರ ರಾತ್ರಿ ಅದೇನಾಯಿತೊ ಏನೊ ಶುಕ್ರವಾರ ಮುಂಜಾನೆ ಆ ಗ್ರಹಿಣಿಯ ಮ್ರತದೇಹ ಮನೆ ಸಮೀಪದ ತೋಟದಲಿರುವ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದೆ. ಮ್ರತ ಮಹಿಳೆಯ ಕುಟುಂಬಿಕರು ಹಣ ನೀಡದಿದ್ದಕ್ಕೆ ಗಂಡನೇ ಈಕೆಯನ್ನು ಕೊಂದು ಬಾವಿಗೆಸೆದಿದ್ದಾನೆಂದು ಆರೋಪಿಸಿದ್ದಾರೆ.

ಇಷ್ಟೇಲ್ಲಾ ಘಟನೆ ನಡೆದಿದ್ದು ಕುಂದಾಪುರ ತಾಲೂಕಿನ ಬಿದ್ಕಲಕಟ್ಟೆ ಸಮಿಪದ ಜನ್ನಾಡಿ ಎಂಬಲ್ಲಿ… ಅಷ್ಟಕ್ಕೂ ಅಲ್ಲಿ ನಡೆದಿದ್ದಾದರೂ ಏನು ಎಂಬ ಡಿಟೇಲ್ಸ್ ಇಲ್ಲಿದೆ.

Jannadi_lady_death (22)

Jannadi_lady_death (21) Jannadi_lady_death (14) Jannadi_lady_death (24) copy Jannadi_lady_death (29) Jannadi_lady_death (28) Jannadi_lady_death (31) Jannadi_lady_death (30) Jannadi_lady_death (20) Jannadi_lady_death (17) Jannadi_lady_death (19) Jannadi_lady_death (11) Jannadi_lady_death (12) Jannadi_lady_death (13) Jannadi_lady_death (15) Jannadi_lady_death (16) Jannadi_lady_death (8) Jannadi_lady_death (5) Jannadi_lady_death (6) Jannadi_lady_death (9) Jannadi_lady_death (10) Jannadi_lady_death (7) Jannadi_lady_death (2) Jannadi_lady_death (3) Jannadi_lady_death Jannadi_lady_death (1) Jannadi_lady_death (4) Jannadi_lady_death (25) copy Jannadi_lady_death (27) Jannadi_lady_death (18) Jannadi_lady_death (23) copy

ಆಕೆ ಇಂದಿರಾ..ಮೂಲತಃ ಹೊಸೂರಿನವಳು. ಕಳೆದ ಎಂಟು ವರ್ಷಗಳ ಹಿಂದೆ ಜನ್ನಾಡಿಯ ದೇವೇಂದ್ರ ಶೆಟ್ಟಿ ಎಂಬಾತನೊಂದಿಗೆ ವಿವಾಹವನ್ನು ಮಾಡಿಕೊಡಲಾಗಿತ್ತು. ಇಬ್ಬರಿಗೂ ಸದ್ಯ ಏಳು ವರ್ಷದ ಪ್ರಜ್ವಲ್ ಹೆಸರಿನ ಮಗನಿದ್ದಾನೆ. ಕೆಲವು ವರ್ಷಗಳ ಕಾಲ ಅನ್ಯೋನ್ಯವಾಗಿಯೇ ಇದ್ದರು. ದೇವೇಂದ್ರ ಶೆಟ್ಟಿ ಜನ್ನಾಡಿಯಲ್ಲಿಯೇ ಗೂಡ್ಸ್ ವಾಹನವೊಂದನ್ನು ಓಡಿಸುತ್ತಾರೆ. ಇತ್ತಿಚೆಗೆ ಸ್ವಂತ ವ್ಯವಾಹಾರ ಮಾಡಬೇಕು, ಅದಕ್ಕಾಗಿ ಹಣದ ಅಗತ್ಯವಿದೆಯೆಂದು ನಿತ್ಯ ಗಲಾಟೆ ಮಾಡುತ್ತಿದ್ದ ಆತ, ಪತ್ನಿ ಇಂದಿರಾ ಅವರ ಬಳಿ ಹಣಕ್ಕಾಗಿ ಪೀಡಿಸುತ್ತಿದ್ದನ್ನಲ್ಲದೇ, ಅವ್ಯಾಚವಾಗಿ ಬೈದು ಹೊಡೇಯುವುದನ್ನು ಮಾಡುತ್ತಿದ್ದನಂತೆ.

ಮಗ ಪ್ರಜ್ವಲನಿಗೆ ಶಾಲೆ ರಜೆಯಿದ್ದ ಕಾರಣ ಇತ್ತೀಚೆಗೆ ತನ್ನ ತವರುಮನೆ ಹೊಸೂರಿಗೆ ಮಗನೊಂದಿಗೆ ತೆರಳಿದ್ದ ಇಂದಿರಾ ಎಪ್ರಿಲ್ ೨೮ ರಂದು ಗಂಡನ ಮನೆ ಸಮೀಪದಲ್ಲಿರುವ ಸಂಬಂಧಿಕರ ಮನೆ ಯಕ್ಷಗಾನ ಕಾರ್ಯಕ್ರಮಕ್ಕೆ ವಾಪಾಸ್ಸಾಗಿದ್ದಳು. ಹೀಗೆ ಪುನಃ ಮರಳಿದ ದಿನವೂ ಹಣದ ವಿಚಾರದಲ್ಲಿ ಈತ ಇಂದಿರಾಗೆ ಬೈದು ಹಣಕ್ಕಾಗಿ ಪೀಡಿಸಿದ್ದನಂತೆ. ಗುರುವಾರ ರಾತ್ರಿಯೂ ಕೂಡ ಮನೆಯವರ ಬಳಿ ತಿಳಿಸಿ ಹಣ ನೀಡು ಎಂದು ತಗಾದೆ ತೆಗೆದಿದ್ದನಂತೆ. ಈ ವೇಳೆ ಮನೆಯಲ್ಲಿ ದೇವೇಂದ್ರ ಶೆಟ್ಟಿ ತಾಯಿ ರತ್ನಾವತಿ ಶೆಟ್ಟಿ, ತಂಗಿ ಪ್ರಪುಲ್ಲಾ ಹಾಗೂ ದೆವೇಂದ್ರನ ಮಗ ಪ್ರಜ್ವಲ್ ಹಾಗೂ ಇಂದಿರಾ ಇದ್ದರು.

ಶುಕ್ರವಾರ ಮುಂಜಾನೆ ವೇಳೆ ಮನೆ ಸಮೀಪದ ತೋಟದಲ್ಲಿರುವ ಆವರಣವಿಲ್ಲದ ಬಾವಿಯಲ್ಲಿ ಇಂದಿರಾ ಮ್ರತದೆಹವಿತ್ತು. ಬೆಳಿಗ್ಗೆ ಇಂದಿರಾ ನಾಪತ್ತೆಯಾಗಿದ್ದಾಳೆಂದು ಡ್ರಾಮಾ ಮಾಡಿದ ದೇವೇಂದ್ರ ಶೆಟ್ಟಿಯು ಮನೆಯ ಆಸು-ಪಾಸು ಹುಡುಕಾಟ ನಡೆಸುವ ನಾಟಕವಾಡಿ ಹೇಂಡತಿ ನಾಪತ್ತೆಯಾಗಿರುವ ಬಗ್ಗೆ ಸ್ಥಳೀಯರಲ್ಲಿ ಹೇಳಿದ್ದಾನೆ. ಬಳಿಕ ಸ್ಥಳಿಯರು ಬಂದು ನೋಡುವಾಗ ಆವರಣವಿಲ್ಲದ ಬಾವಿಯಲ್ಲಿ ನೀರಿನ ಕೆಳಭಾಗದಲಿ ಶವವಿತ್ತು. ಬಳಿಕ ಇಂದಿರಾ ಅವರ ಕುಟುಂಬಿಕರಿಗೆ ಹಾಗೂ ಪೊಲೀಸರಿಗೆ ಸುದ್ಧಿ ಮುಟ್ಟಿಸಲಾಗಿತ್ತು. ಇಂದಿರಾ ಕುಟುಂಬಿಕರು ಸ್ಥಳಕ್ಕಾಗಮಿಸಿ ಇದೊಂದು ವ್ಯವಸ್ಥಿತ ಕೊಲೆಯಾಗಿದ್ದು, ಹಣದ ವಿಚಾರವಾಗಿ ದೇವೇಂದ್ರ ಶೆಟ್ಟಿಯೇ ಇಂದಿರಾ ಅವರಿಗೆ ಹೊಡೆದು ಸಾಯಿಸಿ ಬಳಿಕ ಶವವನ್ನು ಬಾವಿಗೆ ಎತ್ತಿ ಹಾಕಿದ್ದಾನೆಂದು ಆರೋಪಿಸಿದ್ದಾರೆ.
ಮನೆ ಮಗಳ ಧಾರುಣ ಸಾವು ಇಂದಿರಾ ಕುಟುಂಬದವರನ್ನು ಆಕ್ರೋಷಕ್ಕೀಡು ಮಾಡಿದೆ. ಅವರ ರೋಧನ ಮುಗಿಲು ಮುಟ್ಟುವಂತಿತ್ತು. ಇಂದಿರಾ ಪುತ್ರ ಪ್ರಜ್ವಲ್ ಕೂಡ ತಾಯಿಯ ಸಾವಿನಿಂದಾಗಿ ದಿಘ್ಬ್ರಾಂತಗೊಂಡಿದ್ದ.

ಘಟನಾ ಸ್ಥಳಕ್ಕೆ ಬ್ರಹ್ಮಾವರ ಸರ್ಕಲ್ ಇನ್ಸ್‌ಪೆಕ್ಟರ್ ಅರುಣ್ ನಾಯಕ್, ಕೋಟ ಎಸ್ಸೈ ಕಮಲಾಕರ ನಾಯ್ಕ್ ಮೊದಲಾದವರು ಭೇಟಿ ನೀಡಿದ್ದಾರೆ.
ಸದ್ಯ ಆರೋಪಿ ದೇವೇಂದ್ರ ಶೆಟ್ಟಿ ಪೊಲೀಸರ ವಶದಲ್ಲಿದ್ದು ತನಿಖೆ ನಡೆಯುತ್ತಿದೆ. ಸಾವಿನ ಬಗ್ಗೆ ಅನುಮಾನಗಳಿರುವ ಕಾರಣ ಮೃತದೇಹವನ್ನು ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

ಕೋಟ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Write A Comment