ಕರ್ನಾಟಕ

ನೇಪಾಳ ಸಂತ್ರಸ್ಥರಿಗಾಗಿ ಹಣ ಸಂಗ್ರಹಕ್ಕೆ ಅನುಮತಿ ಕಡ್ಡಾಯ: ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್‌ ಕುಮಾರ್

Pinterest LinkedIn Tumblr

Save

ಬೆಂಗಳೂರು, ಏ.28: ನೇಪಾಳದಲ್ಲಿ ಸಂಭವಿಸಿರುವ ಭೂಕಂಪದ ಸಂತ್ರಸ್ತರಿಗಾಗಿ ಹಲವೆಡೆ ಹಣ ಸಂಗ್ರಹಿಸುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು, ಹಣ ಸಂಗ್ರಹಿಸುವವರು ಆಯಾ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್‌ಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣ ಸಂಗ್ರಹಿಸುವ ನೆಪದಲ್ಲಿ ದುರುಪಯೋಗವಾಗುತ್ತಿರುವುದು ಕಂಡು ಬಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದ್ದಾರೆ.

ಸಂಗ್ರಹಿಸಿದ ಹಣ ತಲುಪಿಸುವುದು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಅದಕ್ಕೊಂದು ಪದ್ಧತಿಯಿದೆ. ಆ ಪದ್ಧತಿ ಮೂಲಕವೇ ಹಣ ನೇಪಾಳಕ್ಕೆ ತಲುಪಿಸಬೇಕು. ಹಾಗಾಗಿ ಸ್ಥಳೀಯ ಜಿಲ್ಲಾಧಿಕಾರಿಗಳಿಂದ ಹಣ ಸಂಗ್ರಹಕ್ಕೆ ಅನುಮತಿ ಪಡೆಯುವುದರ ಜೊತೆಗೆ ಸಂಗ್ರಹಿಸಿದ ಹಣವನ್ನು ಜಿಲ್ಲಾಧಿಕಾರಿಗಳಿಗೆ ತಲುಪಿಸಬೇಕು. ತದನಂತರ ಜಿಲ್ಲಾಧಿಕಾರಿಗಳು ಚೀಫ್ ಸೆಕ್ರೆಟರಿ ಮೂಲಕ ಭಾರತ ಸರ್ಕಾರಕ್ಕೆ ಹಣ ತಲುಪಿಸಲಿದ್ದು ತದನಂತರ ನೇಪಾಳಕ್ಕೆ ತಲುಪಿಸಲಾಗುತ್ತದೆ ಎಂದು ವಿವರಿಸಿದರು.

Write A Comment