ಕರ್ನಾಟಕ

ಮೈತ್ರಿಯಾ ಅಭಿನಯದ ಅಕ್ಷತೆ ಚಿತ್ರದ ವಿರುದ್ಧ ಡಿವಿಎಸ್ ಪುತ್ರ ಕಾರ್ತಿಕ್ ಗರಂ! ಚಿತ್ರೀಕರಣ ಸ್ಥಗಿತಗೊಳಿಸುವಂತೆ ವಾಣಿಜ್ಯ ಮಂಡಳಿಗೆ ಪತ್ರ

Pinterest LinkedIn Tumblr

Mythriya-karthik

ಬೆಂಗಳೂರು: ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಪುತ್ರ ಕಾರ್ತಿಕ್ ಗೌಡ ವಿರುದ್ಧ ವಂಚನೆ ಆರೋಪ ಮಾಡಿ ದೊಡ್ಡ ಸುದ್ದಿ ಮಾಡಿದ್ದ ನಟಿ ಮೈತ್ರಿಯಾ ಗೌಡ ಇದೀಗ ತಮ್ಮ ಜೀವನಾಧಾರಿತ ಚಿತ್ರವನ್ನು ತೆರೆ ಮೇಲೆ ತರುತ್ತಿದ್ದು, ಇದರ ವಿರುದ್ಧ ಕಾರ್ತಿಕ್ ಗೌಡ ಗರಂ ಆಗಿದ್ದಾರೆ.

ಮೈತ್ರಿಯಾ ಗೌಡ ಅಭಿನಯದ ಅಕ್ಷತೆ ಚಿತ್ರ ತಮ್ಮ ವೈಯಕ್ತಿಕ ಬದುಕಿನ ಕಥೆಯನ್ನು ಆಧರಿಸಿರುವುದರಿಂದ ಈ ಕೂಡಲೇ ಚಿತ್ರದ ಚಿತ್ರೀಕರಣ ಸ್ಥಗಿತಗೊಳಿಸುವಂತೆ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.

ಅಕ್ಷತೆ ಸಿನಿಮಾದಲ್ಲಿ ಮೈತ್ರಿಯಾ ಮತ್ತು ಕಾರ್ತಿಕ್ ಗೌಡ ನಡುವಿನ ಪ್ರೇಮ ಕಥೆ ಹೊಂದಿದೆ ಎಂಬ ಸುದ್ದಿಗೆ ಕಾರ್ತಿಕ್ ಗರಂ ಆಗಿದ್ದಾರೆ. ಅಲ್ಲದೆ ಇದು ನಮ್ಮ ಕುಟುಂಬದ ಗೌರವಕ್ಕೆ ಮಸಿ ಬಳಿಯುವ ಕೆಲಸವಾಗಿದೆ ಎಂದು ಕಾರ್ತಿಕ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಅಕ್ಷತೆ ಚಿತ್ರವನ್ನು ನವ ನಿರ್ದೇಶಕ ರಾಜು ಎಂಬುವರು ನಿರ್ದೇಶಿಸುತ್ತಿದ್ದು, ನಾಯಕನಾಗಿ ಕಾರ್ತಿಕ್ ಶೆಟ್ಟಿ, ನಾಯಕಿಯಾಗಿ ಮೈತ್ರಿಯಾ ಗೌಡ ಅಭಿನಯಿಸುತ್ತಿದ್ದಾರೆ.
(ಕ ಪ್ರ)

Write A Comment