ಕರ್ನಾಟಕ

ಎಟಿಎಂನಿಂದ ಹೊರಬಂದವು ಹರಿದ ಹಾಗೂ ಸುಟ್ಟ ನೋಟುಗಳು..!

Pinterest LinkedIn Tumblr

Burnd-notes-in-ATM

ಮಧುಗಿರಿ, ಏ.22- ಎಟಿಎಂವೊಂದರಲ್ಲಿ ಖಾತೆಯಿಂದ ಹಣ ಡ್ರಾ ಮಾಡಿದಾಗ ನಕಲಿ ಹಾಗೂ ಹರಿದ, ಸುಟ್ಟ ನೋಟುಗಳು ಬಂದಿದ್ದು, ಗ್ರಾಹಕರಿಬ್ಬರು ಆತಂಕಕ್ಕೆ ಒಳಗಾದ ಘಟನೆ ಪಟ್ಟಣದಲ್ಲಿ ನಡೆದಿದೆ. ನಿನ್ನೆ ಬೆಳಿಗ್ಗೆ 11 ಘಂಟೆ ಸುಮಾರಿನಲ್ಲಿ ಬಂದ್ರೆಹಳ್ಳಿ ವಾಸಿಗಳಾದ ಸುನೀಲ್ ಮತ್ತು ಮನೋಹರ ಬಾಬು ಎಂಬ ಯುವಕರು  ಕೆಹೆಚ್ ರಸ್ತೆಯಲ್ಲಿರುವ ಕರ್ನಾಟಕ ಬ್ಯಾಂಕ್‌ನ ಎಟಿಎಂನಲ್ಲಿ ಹಣ ಪಡೆಯಲು ಬಂದು 10,000ರೂ. ನಗದನ್ನು ಡ್ರಾ ಮಾಡಿದ್ದಾರೆ. ಎಟಿಎಂ ಯಂತ್ರದಿಂದ ಬಂದ ಕೆಲ 500 ರೂ. ಮುಖ ಬೆಲೆಯ  ಹರಿದ ಮತ್ತೆರಡು ಸುಟ್ಟ,

ಹಳೆಯ ನೋಟುಗಳ ಜತೆ ನಕಲಿ ನೋಟುಗಳು ಬಂದಿದ್ದು,ಗಾಬರಿಗೊಂಡ ಯುವಕರು ಈ ವಿಷಯವಾಗಿ ದೂರು ನೀಡಲು ಮುಂದಾದರು. ಆದರೆ, ಬಸವ ಜಯಂತಿ ಪ್ರಯುಕ್ತ ಬ್ಯಾಂಕ್‌ಗೆ ರಜೆಯಿದ್ದ ಕಾರಣ ಮತ್ತು ಎಟಿಎಂನ ಭದ್ರತಾ ಸಿಬ್ಬಂದಿಯೂ ಕಂಡುಬರಲಿಲ್ಲವಾದ್ದರಿಂದ ಯುವಕರು ಮಾಧ್ಯಮದವರ  ಮೊರೆ ಹೋದರು.

ನಂತರ  ದೂರವಾಣಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬ್ಯಾಂಕ್‌ನ ವ್ಯವಸ್ಥಾಪಕ ಶ್ಯಾಂಪ್ರಸಾದ್ ಆ ಯುವಕರನ್ನು ನಾಳೆ ಭೇಟಿ ಮಾಡಲು ಹೇಳಿದ್ದು, ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸುವುದಾಗಿ ತಿಳಿಸಿದರು. ಸಾರ್ವಜನಿಕರು 1000 ಹಾಗೂ 500 ರೂ. ಮುಖಬೆಲೆಯ ನೋಟುಗಳನ್ನು ತೆಗೆದುಕೊಳ್ಳಲು ಅನುಮಾನ ಪಡುವಂತಹ ವಾತವಾರಣ ನಿರ್ಮಾಣವಾಗಿದೆ. ಮತ್ತೆ  ಕೆಲ ತಿಂಗಳ ಹಿಂದೆಯೇ ನಕಲಿ ನೋಟುಗಳ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿ ಬಿಂಬಿತವಾಗಿದ್ದು, ಇತ್ತೀಚೆಗೆ ಪಟ್ಟಣದ ಎಟಿಎಂಗಳ ಬಗ್ಗೆ  ಇಂತಹ ದೂರುಗಳು ಸರ್ವೆ ಸಾಮಾನ್ಯವಾಗಿದ್ದು, ಕೆಲ ಬ್ಯಾಂಕ್‌ನ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗದವರು ಗ್ರಾಹಕರು ಸಮಸ್ಯೆಗಳ ಬಗ್ಗೆ ಸ್ಪಂದಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಇನ್ನಾದರೂ ಎಚ್ಚೆತ್ತುಕೂಂಡು  ಎಟಿಎಂಗಳಿಗೆ ಹಣ ತುಂಬುವ  ಖಾಸಗಿ ಕಂಪೆನಿ ವಿರುದ್ಧ ಸೂಕ್ತ ಕ್ರಮ ತೆಗೆದುಕೂಂಡು ಗ್ರಾಹಕರಿಗೆ ಯಾವ ರೀತಿ ನ್ಯಾಯ ಒದಗಿಸಿಕೊಡುತ್ತಾರೋ ಎಂದು ಕಾದು ನೋಡಬೇಕಿದೆ.

Write A Comment