ಕರ್ನಾಟಕ

ರಾಜೀನಾಮೆ ವಾಪಸ್ ಪಡೆದ ಆನಂದ್‌ಸಿಂಗ್

Pinterest LinkedIn Tumblr

Anand-Singh

ಬೆಂಗಳೂರು, ಏ.20-ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಪತ್ರವನ್ನು ಬಿಜೆಪಿ ಶಾಸಕ ಆನಂದ್‌ಸಿಂಗ್ ವಾಪಸ್ ಪಡೆದಿದ್ದಾರೆ. ಇಂದು ಬೆಳಗ್ಗೆ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿ ಮಾಡಿದ ಆನಂದ್‌ಸಿಂಗ್ ರಾಜೀನಾಮೆ ಪತ್ರ ವಾಪಸ್ ಪಡೆದರು.

ಸಭಾಧ್ಯಕ್ಷರನ್ನು ಈ ಹಿಂದೆ ಖುದ್ದಾಗಿ ಭೇಟಿ ಮಾಡದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಪತ್ರವನ್ನು ಸಭಾಧ್ಯಕ್ಷರ ಕಚೇರಿಗೆ ಕಳುಹಿಸಿಕೊಟ್ಟಿದ್ದರು. ಆದರೆ ಸಭಾಧ್ಯಕ್ಷ ಕಾಗೋಡುತಿಮ್ಮಪ್ಪ ಅವರು ಖುದ್ದಾಗಿ ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಲು ಸೂಚಿಸಿದ್ದರು.

ಇದಾದ ಬಳಿಕ ಖುದ್ದು ಭೇಟಿಗೆ ಸಮಯವೂ ನಿಗದಿಯಾಗಿತ್ತು. ಆದರೆ ಖುದ್ದು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಇಂದು ಬೆಳಗ್ಗೆ ರಾಜೀನಾಮೆ ಪತ್ರ ವಾಪಸ್ ಪಡೆದ ನಂತರ ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಂಡರು.

Write A Comment