ಅಂತರಾಷ್ಟ್ರೀಯ

ಅಮೆರಿಕದಲ್ಲಿ ಮತ್ತೊಂದು ಹಿಂದೂ ದೇವಾಲಯದ ಮೇಲೆ ದಾಳಿ

Pinterest LinkedIn Tumblr

Attack-On-hindu-Temple

ಹೂಸ್ಟನ್, ಏ.20-ಅಮೆರಿಕದಲ್ಲಿ ಹಿಂದೂ ದೇವಾಲಯಗಳ ಮೇಲಿನ ದಾಳಿ ಪ್ರಕರಣಗಳು ಅಬಾಧಿತವಾಗಿ ಮುಂದುವರೆದಿದ್ದು, ದುಷ್ಕರ್ಮಿಗಳು ಇಂದು ಮತ್ತೊಂದು ಹಿಂದೂ ದೇವಸ್ಥಾನದಲ್ಲಿ ದಾಂಧಲೆ ನಡೆಸಿರುವ ಘಟನೆ ನಡೆದಿದೆ. ದೇವಸ್ಥಾನಕ್ಕೆ ನುಗ್ಗಿದ ದುಷ್ಕರ್ಮಿಗಳು ಅಲ್ಲಿನ ವಿಗ್ರಹಗಳನ್ನು ವಿರೂಪಗೊಳಿಸಿ, ಗೋಡೆಗಳಿಗೆಲ್ಲ ಬಣ್ಣ ಬಳಿದು ಅವಮಾನಕರ ರೀತಿಯಲ್ಲಿ ದಾಂಧಲೆ ಮಾಡಿದ್ದಾರೆ. ಉತ್ತರ ಟೆಕ್ಸಾಸ್‌ನ ಲೇಕ್ ಐಲ್ಯಾಂಡ್ ನಲ್ಲಿರುವ ಈ ದೇವಸ್ಥಾನದ ಬಾಗಿಲುಗಳಿಗೆಲ್ಲ ವಿವಿಧ ಬಣ್ಣ ಹೊಡೆದು, ದೊಡ್ಡದಾಗಿ 666 ಸಂಖ್ಯೆಯನ್ನು ನಾನಾ ರೀತಿಯಲ್ಲಿ ಬರೆಯಲಾಗಿದೆ.

ಇಂದು ನಿರ್ದಿಷ್ಟ ಸಮುದಾಯಕ್ಕೆ ಭಾರೀ ಅವಮಾನವಾದಂತಾಗಿದೆ. ಅವರ ಭಾವನೆಗಳಿಗೆ ನೀಡಿರುವ ಪೆಟ್ಟು ಇದಾಗಿದೆ ಎಂದು ದೇವಸ್ಥಾನಕ್ಕೆ ಸಂಬಂಧಪಟ್ಟ ಕೃಷ್ಣಸಿಂಗ್ ಹೇಳಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ಈಗಾಗಲೇ ಡಲ್ಲಾಸ್ ಪೊಲೀಸರನ್ನು ನಿಯೋಜಿಸಿದ್ದು ಹುಡುಕಾಟ ನಡೆಸಿದ್ದಾರೆ. ಈ ವರ್ಷದಲ್ಲಿ ಅಮೆರಿಕದಲ್ಲಿ ಹಿಂದೂ ದೇವಾಲಯಗಳ ಮೇಲೆ ನಡೆದಿರುವ ಮೂರನೇ ದಾಳಿ ಇದಾಗಿದೆ.ಈ ಮೊದಲು ಎರಡು ದೇವಾಲಯಗಳ ಗೋಡೆಗಳ ಮೇಲೆ ಇದೇ ರೀತಿ ಮಾಡಲಾಗಿತ್ತು. ಒಂದು ಗೋಡೆ ಮೇಲೆ ಗೆಟ್‌ಔಟ್ ಎಂದು ಬರೆದರೆ, ಇನ್ನೊಂದು ಗೋಡೆ ಮೇಲೆ ಫಿಯರ್ ಎಂದು ಬರೆಯಲಾಗಿತ್ತು.

Write A Comment