ಕರ್ನಾಟಕ

ಅನಾಮಧೇಯ ಸಂದೇಶಕ್ಕೆ ಬೇಸತ್ತು ಮೈಸೂರಿನಲ್ಲಿ ಯುವತಿ ಆತ್ಮಹತ್ಯೆ

Pinterest LinkedIn Tumblr

suic

ಮೈಸೂರು: ಅನಾಮಧೇಯ ಮೊಬೈಲ್ ನಂಬರಿನಿಂದ ಬಂದ ಅಸಭ್ಯ ಮೆಸೇಜ್‍ನಿಂದ ಬೇಸತ್ತು ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಜೆಎಸ್‍ಎಸ್ ವಿದ್ಯಾರ್ಥಿನಿಲಯದಲ್ಲಿದ್ದ 22 ವರ್ಷದ ಸ್ವಾತಿ ಗುರುವಾರ ಆತ್ಮಹತ್ಯೆಗೆ ಶರಣಾಗಿದ್ದಾಳೆ. ತನ್ನ ಸಾವಿನ ಕಾರಣವನ್ನು ಡೆತ್‍ನೋಟ್‍ನಲ್ಲಿ ಬರೆದಿಟ್ಟು, ಗುರುವಾರ ಮುಂಜಾನೆ 7 ಗಂಟೆ ಸಮಯಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಡೆತ್‍ನೋಟ್‍ನಲ್ಲೇನಿದೆ?: ಅಮ್ಮ ನನಗೆ ಈ ಊರು, ಕಾಲೇಜು, ಗೆಳತಿಯರು ಯಾರು ಇಷ್ಟವಿಲ್ಲ. ಯಾವುದಕ್ಕೂ ಹೊಂದಿಕೊಳ್ಳಲು ಆಗುತ್ತಿಲ್ಲ. ಇಲ್ಲಿರುವುದಕ್ಕೆ ನನಗೆ ತುಂಬಾ ಕಷ್ಟ ಆಗುತ್ತಿದೆ. ಇಲ್ಲಿ ಬಂದಾಗಿನಿಂದ ಒಂದು ದಿನವೂ ನೆಮ್ಮದಿಯಿಂದಿಲ್ಲ. ನಿಮ್ಮ ಜೊತೆ ಸಂತಸದಿಂದ ಇರೋಣವೆಂದರೆ ಅದು ಕೂಡ ಸಾಧ್ಯವಾಗುತ್ತಿಲ್ಲ.

ಅಮ್ಮ ದಿನವೂ ನನಗೆ ಯಾವುದು ಆಗಂತುಕ ನಂಬರ್‍ನಿಂದ ಕೆಟ್ಟ ಸಂದೇಶ ಬರುತ್ತಿತ್ತು. ಯಾರು ಎಂದು ನನಗೆ ತಿಳಿದಿಲ್ಲ. ಅವನನ್ನು ಹುಡುಕಿ ಶಿಕ್ಷೆ ಕೊಡಿಸುವಂತೆ ಅಪ್ಪನಿಗೆ ಹೇಳು. ಅಣ್ಣ ಮಿಸ್ ಯೂ. ನನಗೆ ಸಾಯಲು ಇಷ್ಟವಿಲ್ಲ. ಹಾಗಂತ ಒಂದು ನಿಮಿಷವೂ ಇರುವುದಕ್ಕೆ ಆಗುತ್ತಿಲ್ಲ. ಅಮ್ಮ ಇಲ್ಲಿ ನರಕ ಇದೆ. ಅಮ್ಮ, ಅಪ್ಪ, ಅಣ್ಣ ನನ್ನನ್ನು ಕ್ಷಮಿಸಿ, ನನ್ನನ್ನು ಇಷ್ಟಪಡುವ ಒಬ್ಬ ಹುಡಗನಿದ್ದಾನೆ. ಆದರೆ ಈಗ ಅವನು ಕಷ್ಟದಲ್ಲಿದ್ದಾನೆ ಸಾಧ್ಯವಾದರೆ ಆತನಿಗೆ ಸಹಾಯ ಮಾಡಿ ಅಪ್ಪ. ಈಗಲೂ ನನಗೆ ಸಾಯಲೂ ಇಷ್ಟವಿಲ್ಲ. ಆದರೆ ನನ್ನ ಬಳಿ ಬೇರೆ ಆಯ್ಕೆಯಿಲ್ಲ ಸ್ವಾತಿ.

ಮೂಲತಃ ಬಳ್ಳಾರಿ ಜಿಲ್ಲೆ ಕೂಡ್ಲಗಿ ಸ್ವಾತಿ ಜೆಎಸ್‍ಎಸ್ ಕಾಲೇಜಿನಲ್ಲಿ 3 ವರ್ಷದ ಫಾರ್ಮಸಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಸ್ವಾತಿ ಆತ್ಮಹತ್ಯೆ ಮಾಡಿಕೊಂಡಿರುವುದು 10 ಗಂಟೆಗೆ ಬೆಳಕಿಗೆ ಬಂದಿದ್ದು, ಈ ಸಂಬಂಧ ನರಸಿಂಹರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment