ಕರ್ನಾಟಕ

ಗುಜರಿ ವ್ಯಾಪಾರಿಗೆ 22 ಲಕ್ಷಕ್ಕೆ ಮಾರಾಟವಾಯ್ತು ವಿಜಯ್ ಮಲ್ಯ ಜೆಟ್

Pinterest LinkedIn Tumblr

909

ಮುಂಬೈ: ಕಿಂಗ್‌ಫಿಶರ್ ಏರ್‌ಲೈನ್ಸ್ ಪ್ರವರ್ತಕ ವಿಜಯ್ ಮಲ್ಯ ಖಾಸಗಿ ಅವರ 11 ಸೀಟುಗಳನ್ನೊಳಗೊಂಡ ಜೆಟ್ ಗುಜರಿ ವ್ಯಾಪಾರಿಗೆ ಮಾರಾಟವಾಗಿದೆ. ಕಿಂಗ್ ಫಿಶರ್ ಏರ್ ಲೈನ್ಸ್ ಮೇಲಿರುವ ಸಾಲವನ್ನು ತೀರಿಸಲೆಂದು ವಿಜಯ್ ಮಲ್ಯ ತನ್ನ ಜೆಟ್ ನ್ನು 22 ಲಕ್ಷಕ್ಕೆ ಗುಜರಿ ವ್ಯಾಪಾರಿಗೆ ಮಾರಿದ್ದಾರೆ ಎಂದು ಮೂಲಗಳು ಹೇಳಿವೆ.

00

ಜೆಟ್ ಭಾಗಗಳನ್ನು ಬಿಡಿ ಬಿಡಿಯಾಗಿ ಮಾರಾಟ ಮಾಡಿ ಲಾಭ ಪಡೆಯುವ ಉದ್ದೇಶದಿಂದ ಜೆಟ್ ಖರೀದಿಸಲಾಗಿದೆ ಎಂದು ಗುಜರಿ ವ್ಯಾಪಾರಿ ಸೈಲೆಂಟ್ ಎಂಟರ್ ಪ್ರೈಸಸ್ ಮಾಲೀಕ ತಿಳಿಸಿದ್ದಾರೆ.

ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟವು ಕಿಂಗ್‌ಫಿಶರ್ ಏರ್‌ಲೈನ್ಸ್‌ಗೆ ಒಟ್ಟು 7 ಸಾವಿರ ಕೋಟಿ ರೂ. ಸಾಲ ನೀಡಿವೆ. ಈ ಸಾಲ ಮರುಪಾವತಿ ಮಾಡಬೇಕಾಗಿದ್ದು, ಜೆಟ್ ಅನ್ನು ಮಲ್ಯ ಮಾರಾಟ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Write A Comment