ಕರ್ನಾಟಕ

ಭಾರತ, ಪಾಕಿಸ್ತಾನ, ಇರಾನ್‌ನಲ್ಲಿ ಹೆಚ್ಚಾಗಿ ಇರುವ ಪ್ರಭೇದ; ಬುಕ್ಕಾಪಟ್ಟಣ ಅರಣ್ಯದಲ್ಲಿ ಚಿಂಕಾರ ಪತ್ತೆ

Pinterest LinkedIn Tumblr

pvec14tm82

ತುಮಕೂರು: ‘ಇಂಡಿಯನ್‌ ಗಜೆಲ್’ ಎಂದು ಕರೆಯುವ ಚಿಂಕಾರ (ಸಣ್ಣ ಹುಲ್ಲೆ) ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ‘ನೇಚರ್‌ ಕನ್ಸರ್ವೇಶನ್‌ ಫೌಂಡೇ ಷನ್‌’ ಮುಖ್ಯಸ್ಥ ಸಂಜಯ್‌ಗುಬ್ಬಿ ನೇತ ೃತ್ವದ ತಂಡ ಚಿರತೆಗಳ ಅಧ್ಯಯನ ನಡೆಸುತ್ತಿದ್ದ ವೇಳೆ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಚಿಂಕಾರ ಸೆರೆಯಾಗಿದೆ.

ಉತ್ತರ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶದ ಗಡಿ ಪ್ರದೇಶಗಳಲ್ಲಿ ಮಾತ್ರ ಚಿಂಕಾರ ಕಂಡುಬರುತ್ತಿತ್ತು. ಈಗ ದಕ್ಷಿಣ ಕರ್ನಾಟಕದಲ್ಲೂ ಚಿಂಕಾರ ಪತ್ತೆಯಾಗಿದೆ. ಸಾಮಾನ್ಯವಾಗಿ ಶುಷ್ಕ ಹವಾಮಾನ, ಮರುಭೂಮಿ, ಹುಲ್ಲು ಗಾವಲು ಪ್ರದೇಶದ ಲಘು ಅರಣ್ಯಗಳಲ್ಲಿ ಚಿಂಕಾರ ಕಾಣಸಿಗುತ್ತದೆ.

ಗುಬ್ಬಿ ತಾಲ್ಲೂಕಿಗೆ ಹೊಂದಿ ಕೊಂಡಿರುವ ಬುಕ್ಕಾಪಟ್ಟಣ ಅರಣ್ಯ ಪ್ರದೇಶದಲ್ಲಿ ಈ ಪ್ರಬೇಧ ಕಂಡು ಬಂದಿದ್ದು, ಗುಬ್ಬಿ ವ್ಯಾಪ್ತಿಯಲ್ಲೂ ಇರುವ ಸಾಧ್ಯತೆ ಇದೆ. ಬುಕ್ಕಾಪಟ್ಟಣ ಅರಣ್ಯ ಅಂಚಿನಲ್ಲಿರುವ ಚಿತ್ರದುರ್ಗ ಜಿಲ್ಲೆಗೆ ಸೇರಿದ ಸುವರ್ಣಮುಖಿ ಮೀಸಲು ಅರಣ್ಯದಲ್ಲೂ ಚಿಂಕಾರ ಇರುವುದು ದೃಢಪಟ್ಟಿದೆ ಎಂದು ಸಂಜಯ್ ತಿಳಿಸಿದ್ದಾರೆ.

ಭಾರತ, ಪಾಕಿಸ್ತಾನ, ಇರಾನ್‌ನಲ್ಲಿ ಹೆಚ್ಚಾಗಿ ಚಿಂಕಾರ ಪ್ರಬೇಧ ಕಾಣಸಿ ಗುತ್ತದೆ. ಅತಿಯಾದ ಬೇಟೆಯಿಂದ ಪಾಕಿ ಸ್ತಾನ, ಇರಾನ್‌ ದೇಶದಲ್ಲಿ ಚಿಂಕಾರಗಳು ಬಹುತೇಕ ಕಾಣೆಯಾಗಿವೆ. ಆದರೆ ಭಾರತದಲ್ಲಿ ಚಿಂಕಾರ ಸಂರಕ್ಷಣೆಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಾಧಾನ್ಯತೆ ನೀಡಿದೆ ಎಂಬುದು ಪ್ರಕೃತಿ ಮತ್ತು ಪ್ರಕೃತಿ ಸಂಪನ್ಮೂಲಗಳ ಸಂರಕ್ಷಣೆಗಾಗಿ ಅಂತರ ರಾಷ್ಟ್ರೀಯ ಒಕ್ಕೂಟ (ಐಯುಸಿಎನ್‌) ಅಭಿಪ್ರಾಯಪಟ್ಟಿದೆ.

ದೇಶದಲ್ಲಿ ಆರು ಪ್ರಬೇಧ: ಭಾರತದಲ್ಲಿ ಕಾಣಸಿಗುವ ಆರು ಎರಳೆ ಪ್ರಭೇದಗಳಲ್ಲಿ ಚಿಂಕಾರ, ಕೃಷ್ಣಮೃಗ ಮತ್ತು ಕೊಂಡು ಕುರಿ ರಾಜ್ಯದಲ್ಲಿ ಕಾಣಸಿಗುತ್ತವೆ. ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಅರಣ್ಯ ಪ್ರದೇಶ ಒಂದರಲ್ಲೇ ಈ ಮೂರೂ ಎರಳೆ ಪ್ರಭೇದಗಳಿವೆ. ರಾಜ್ಯದಲ್ಲಿ ಮೂರು ಎರಳೆ ಪ್ರಭೇದಗಳು ಇರುವ ಏಕೈಕ ಸ್ಥಳ ಎಂಬ ಖ್ಯಾತಿಗೂ ಬುಕ್ಕಾಪಟ್ಟಣ ಭಾಜನ ವಾಗಿದೆ. ಮಾಹಿತಿಗೆ ಅಪರ್ಣಾ ಕೊಳೇ ಕರ್, ಮೊ: 9740364680 ಸಂಪರ್ಕಿಸಿ.

ಮಾಂಸಕ್ಕಾಗಿ ಬೇಟೆ
ಚಿಂಕಾರವನ್ನು ಮಾಂಸಕ್ಕಾಗಿ ಬೇಟೆಯಾಡುವುರಿಂದ ಸಂತತಿ ನಾಶವಾಗುತ್ತಿದೆ. ಕೃಷಿ, ಕಾರ್ಖಾನೆ ಅಭಿವೃದ್ಧಿಗೆ ಹುಲ್ಲುಗಾವಲು ಬಳಕೆ, ನಾಯಿಗಳ ಭಕ್ಷಣೆಯಿಂದಾಗಿ ಇವು ನೆಲೆ ಕಳೆದುಕೊಳ್ಳುತ್ತಿವೆ. ಬುಕ್ಕಾಪಟ್ಟಣದಲ್ಲಿ ಪವನ ಶಕ್ತಿ ಯೋಜನೆ ಕೈಗೆತ್ತಿಕೊಂಡಿರುವ ಕಾರಣ ಚಿಂಕಾರ ಸಂತತಿ ಇನ್ನಷ್ಟು ಅಪಾಯಕ್ಕೊಳಗಾಗಲಿದೆ ಎಂಬುದು ಪ್ರಾಣಿಪ್ರಿಯರ ಆತಂಕವಾಗಿದೆ.

Write A Comment