ಕರ್ನಾಟಕ

ಬೇಗೆ ತಂಪಾಗಿಸುವ ಬಗೆ

Pinterest LinkedIn Tumblr

bhec11swim

ಚಿತ್ರ: ಸತೀಶ ಬಡಿಗೇರ
ಅಂಗಿ ಚಡ್ಡಿ ತಗಿ, ಭಾಂವ್ಯಾಗ ಜಿಗಿ ಅಂತ ಚೀರುತ್ತ, ತೆರೆದ ಬಾವಿಯೊಳು ಹಾರಿದರೆ ಆಹಹಾ… ಬಿಸಿಲು, ಸೂರ್ಯ, ಬೆವರು,ಬೇಸಿಗೆ ರಜಾ ಎಲ್ಲವೂ ಉತ್ಸಾಹದ ಚಿಲುಮೆಯಾಗಿ ಚಿಮ್ಮುತ್ತವೆ. ಬೆವರ ಹನಿಯೊಂದಿಗೆ ಜುಗಲ್‌ಬಂದಿಗಿಳಿಯುವ ನೀರ ಸಿಂಚನ… ಮತ್ತೆ ಮತ್ತೆ ನೀರೊಳಗೆ ಜಿಗಿಜಿಗಿಯುವಂತೆ ಮಾಡುತ್ತವೆ. ಊರಿಗೊಂದು ಕೆರೆ ಇರುತ್ತಿತ್ತು ಆಗ.

ಈಗ ಇರುವ ಕೆರೆಯನ್ನೂ ಒತ್ತುವರಿ ಮಾಡಿಕೊಂಡು ಊರು ಬೆಳೆಯುತ್ತಿವೆ. ಇರುವ ಕೆರೆಗಳಿಗೆ ಬೇಲಿಯ ಕಾವಲು. ಆದರೆ ರಜಾ ಮಜಾ ಬೇಕೆನ್ನುವ ಮಕ್ಕಳಿಗೆ ಇದೂ ಒಂದು ಸವಾಲು? ಬೆಂಗಳೂರಿನ ಹೆಬ್ಬಾಳ ಕೆರೆಯ ಬೇಲಿಗಳನ್ನೆಲ್ಲ ದಾಟಿ  ನಮ್ಮ ಉತ್ಸಾಹಕ್ಕೆ ಎಲ್ಲೆ ಎಲ್ಲಿದೆ ಎಂಬಂತೆ ಖುಷಿಯಿಂದ ಈಜುತ್ತಿದ್ದ ಘಳಿಗೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ ಸತೀಶ ಬಡಿಗೇರ.

Write A Comment