ಕರ್ನಾಟಕ

ಪ್ರತ್ಯೇಕತಾವಾದಿಗಳು ಕಡುಮೂರ್ಖರು:ಸಿಎಂ ಸಿದ್ದರಾಮಯ್ಯ ತಿರುಗೇಟು

Pinterest LinkedIn Tumblr

540x370-Siddaramaya

ಹುಬ್ಬಳ್ಳಿ, ಏ.11- ರಾಜ್ಯದಲ್ಲಿ ಪ್ರತ್ಯೇಕತೆಯ ಕೂಗು ಎಬ್ಬಿಸುವುದು ಸಮಂಜಸವಲ್ಲ. ಪ್ರತ್ಯೇಕ ರಾಜ್ಯಕ್ಕಾಗಿ ಬೇಡಿಕೆ ಇಡುವುದು ಮೂರ್ಖತನದ ಪರಮಾವಧಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿಲ್ಲಿ ಪ್ರತ್ಯೇಕತಾವಾದಿಗಳಿಗೆ ತಿರುಗೇಟು ನೀಡಿದರು. ಹುಬ್ಬಳ್ಳಿಯಲ್ಲಿ ಇಂದು ಆಯೋಜಿಸಿದ್ದ ಸಾಂಸ್ಕೃತಿಕ ಭವನ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕವು ಯಾವತ್ತಿಗೂ ಅಖಂಡ ಕರ್ನಾಟಕವಾಗಿಯೇ ಇರುತ್ತದೆ. ರಾಜ್ಯ ಪ್ರತ್ಯೇಕತೆಯ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಕರ್ನಾಟಕವನ್ನು ವಿಭಜಿಸಬೇಕೆಂಬ ಮಾತುಗಳು ತೀರ ಬಾಲಿಷ ಮತ್ತು ಮೂರ್ಖತನದ ಹೇಳಿಕೆಗಳು.

ಯಾವ ಕಾರಣಕ್ಕೂ ಕರ್ನಾಟಕ ರಾಜ್ಯವನ್ನು ವಿಭಜಿಸುವುದಿಲ್ಲ. ಕರ್ನಾಟಕ ಅಖಂಡವಾಗಿಯೇ ಇರುತ್ತದೆ. ಪ್ರತ್ಯೇಕತಾವಾದಿಗಳಿಗೆ ಅವರು ಯಾರೇ ಆಗಿದ್ದರೂ ಯಾವ ರೀತಿಯ ಪ್ರೋತ್ಸಾಹವನ್ನೂ ಅಂಥವರಿಗೆ ನೀಡುವುದಿಲ್ಲ ಮತ್ತು ಇಂತಹ ಮಾತುಗಳ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದೂ ಇಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟೋಕ್ತಿಯಲ್ಲಿ ಹೇಳಿದರು.

ಪ್ರತ್ಯೇಕ ರಾಜ್ಯದ ಗುಲ್ಲೆಬ್ಬಿಸುವವರು ಅವರ ಸ್ವಾರ್ಥಕ್ಕೆ ಈ ರೀತಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಪ್ರತ್ಯೇಕ ರಾಜ್ಯದ ಗುಲ್ಲೆಬ್ಬಿಸುವವರು ಸ್ವಾರ್ಥಿಗಳು ಮತ್ತು ಮೂರ್ಖರು. ಅವರ ಈ ವಾದದಲ್ಲಿ ಯಾವುದೇ ಜನಹಿತವೂ ಇಲ್ಲ. ಕೇವಲ ಅವರ ಸ್ವಾರ್ಥಕ್ಕಾಗಿ ಇಂತಹ ಪ್ರಸ್ತಾಪಗಳನ್ನು ಜನರ ಮುಂದಿಡುತ್ತಾರೆ ಮತ್ತು ಜನರನ್ನು ಹುಚ್ಚೆಬ್ಬಿಸುತ್ತಾರೆ. ಅಂತಹವರ ಮಾತಿಗೆ ಯಾರೂ ಬೆಲೆ ಕೊಡಬಾರದು. ನಮ್ಮೆಲ್ಲರ ಉದ್ದೇಶ ಅಖಂಡ ಕರ್ನಾಟಕ ಎಂದು ಮುಖ್ಯಮಂತ್ರಿ ತಿಳಿಸಿದರು.  ನನ್ನ ಸರ್ಕಾರ ಇಂತಹ ಯಾವುದೇ ವಿಷಯಗಳ ಬಗ್ಗೆ ಗೊಂದಲಕ್ಕೆ ಸಿಲುಕುವುದಿಲ್ಲ ಮತ್ತು ಇಂಥದ್ದಕ್ಕೆಲ್ಲ ಪ್ರೋತ್ಸಾಹವನ್ನೂ ಕೊಡುವುದಿಲ್ಲ ಎಂದು ಅವರು ಹೇಳಿದರು.

Write A Comment