ಕರ್ನಾಟಕ

ಬೈಕ್ ಡಿಕ್ಕಿ ಹೊಡೆಸಿ 14.50 ಲಕ್ಷ ರೂ. ದರೋಡೆ

Pinterest LinkedIn Tumblr

theft

ಬೆಂಗಳೂರು, ಏ.8: ಕಂಪನಿಯ ಹಣವನ್ನು ಬ್ಯಾಂಕ್‌ಗೆ ಕಟ್ಟಲು ಹೋಗುತ್ತಿದ್ದ ನೌಕರನ ಬೈಕ್‌ಗೆ ಡಿಕ್ಕಿ ಹೊಡೆಸಿದ ದರೋಡೆಕೋರರು 14.50 ಲಕ್ಷ ಹಣವಿದ್ದ ಬ್ಯಾಗ್‌ನೊಂದಿಗೆ ಪರಾರಿಯಾಗಿರುವ ಘಟನೆ ಹುಳಿಮಾವು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶ್ರೀನಗರ ನಿವಾಸಿ ರಾಜಶೇಖರ ಎಂಬುವರು ಖಾಸಗಿ ಕಂಪನಿ ನೌಕರನಾಗಿದ್ದು , ಈ ಕಂಪನಿಗೆ ಸೇರಿದ ಹಣವನ್ನು ಸಂಗ್ರಹಿಸಿ ಅದನ್ನು ಬ್ಯಾಂಕ್‌ಗೆ ಕಟ್ಟುತ್ತಿದ್ದರು. ಅದರಂತೆ ನಿನ್ನೆ ಬೆಳಗ್ಗೆ 11.20ರಲ್ಲಿ ರಾಜಶೇಖರ್ ಜೆ.ಪಿ.ನಗರ ಕಂಪನಿಯಿಂದ 5.30 ಲಕ್ಷ ರೂ. ಸಂಗ್ರಹಿಸಿ ನಂತರ ಬನ್ನೇರುಘಟ್ಟ ರಸ್ತೆಯ ಅರಕೆರೆಯಲ್ಲಿನ ಕಂಪನಿಯಿಂದ ಹಣ ಸಂಗ್ರಹಿಸಿ ಒಟ್ಟು 14.50 ಲಕ್ಷ ರೂ. ಹಗಣವನ್ನು ಬ್ಯಾಗ್‌ನಲ್ಲಿ ಹಾಕಿಕೊಂಡು ಬೈಕ್‌ನ ಟ್ಯಾಂಕ್ ಮೇಲೆ ಇಟ್ಟುಕೊಂಡು ರಿಚರ್ಡ್ ಸರ್ಕಲ್‌ನಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಕಟ್ಟಲು ಹೋಗುತ್ತಿದ್ದರು.

ಓಂಕಾರನಗರದ , 2ನೆ ಮುಖ್ಯರಸ್ತೆ , 3ನೆ ಕ್ರಾಸ್ ಬಳಿ ಬರುತ್ತಿದ್ದಂತೆ ಅಪಾಚಿ ಬೈಕ್‌ನಲ್ಲಿ ಬಂದ ದರೋಡೆಕೋರರು ರಾಜಶೇಖರ್ ಅವರ ಬೈಕ್‌ಗೆ ಗುದ್ದಿಸಿ ಕೆಳಗೆ ಬೀಳಿಸಿದ್ದಾರೆ. ಆ ವೇಳೆ ಟ್ಯಾಂಕ್ ಮೇಲಿದ್ದ ಹಣದ ಬ್ಯಾಗ್ ಸಹ ಬಿದ್ದಾಗ ದರೋಡೆಕೋರರು ಬ್ಯಾಗ್‌ನೊಂದಿಗೆ ಪರಾರಿಯಾಗಿದ್ದಾರೆ. ಸಹಾಯಕ್ಕಾಗಿ ಕೂಗಿಕೊಂಡರೂ ಪ್ರಯೋಜನವಾಗಿಲ್ಲ. ಈ ಸಂಬಂಧ ಹುಳಿಮಾವು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Write A Comment