ಕರ್ನಾಟಕ

ಮೋದಿ ಜನಪ್ರಿಯತೆ ಕುಗ್ಗುತ್ತಿದೆ : ಎಚ್.ಆಂಜನೇಯ

Pinterest LinkedIn Tumblr

h.anjaneya-1

ಬೆಂಗಳೂರು, ಏ.5- ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಡಳಿತ ಗೊತ್ತಿಲ್ಲ. ಹೀಗಾಗಿ ಅವರ ಜನಪ್ರಿಯತೆ ಕುಗ್ಗುತ್ತಿದೆ. ಅಧಿಕಾರಕ್ಕೆ ಬಂದು ಒಂದು ವರ್ಷ ಸಮೀಪಿಸುತ್ತಿದ್ದರೂ ಯಾವುದೇ ದಿನ ನಿತ್ಯ ಬಳಕೆ ವಸ್ತುಗಳ ಬೆಲೆ ಇಳಿಕೆಯಾಗಿಲ್ಲ.  ಹೀಗಾಗಿ ಜನರ ಗಮನವನ್ನು ಬೇರೆಡೆ ಸೆಳೆಯಲು ಕಾಂಗ್ರೆಸ್ ಮುಕ್ತ ಭಾರತದ ಚರ್ಚೆಯನ್ನು  ಮತ್ತೆ ಹುಟ್ಟುಹಾಕಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಲೇವಡಿ ಮಾಡಿದರು. ಕೆಪಿಸಿಸಿ ಕಚೇರಿಯಲ್ಲಿ ಬಾಬುಜಗಜೀವನರಾಮ್ ಅವರ 108ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಬಾಬುಜಗಜೀವನರಾಮ್

ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ನಂತರ ಅವರು ಮಾತನಾಡಿದರು. ಜನತಾ ಪರಿವಾರ ಕಟ್ಟಿದ ನಾಯಕರನ್ನು ಮೂಲೆಗುಂಪು ಮಾಡಿದ ಮೋದಿ ಅವರು, ಜನಪ್ರಿಯತೆ ಕುಗ್ಗುತ್ತಿದ್ದರೂ ಕಾಂಗ್ರೆಸ್ ಮುಕ್ತ ಭಾರತದ ಮಾತುಗಳನ್ನಾಡುತ್ತಿದ್ದಾರೆ. ಕಾರ್ಪೊರೇಟ್ ಲಾಬಿಗಳ ಕೈಯಲ್ಲಿ ಬಿಜೆಪಿ ಸರ್ಕಾರ ಸಿಲುಕಿದೆ. ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಯಾವುದೇ ಬೆಲೆಗಳು ಇಳಿಕೆಯಾಗುತ್ತಿಲ್ಲ ಎಂದು ಹೇಳಿದರು.

ಕಪ್ಪು  ಹಣವನ್ನು  ವಾಪಸ್ ತರುತ್ತೇವೆ ಎಂದು ಮೋದಿ ಹೇಳಿದ್ದರು. ಬೆಲೆ ಏರಿಕೆ ತಡೆಗೆ ಬಿಜಿಪಿ ಅಧಿಕಾರಕ್ಕೆ ಬರಬೇಕು ಎಂದಿದ್ದರು. ಅವರ ಎಲ್ಲಾ ಸುಳ್ಳು ಭರವಸೆಗಳು ಇನ್ನು ಹಾಗೆಯೇ ಇವೆ. ಸ್ವಚ್ಛ ಭಾರತದ ಫೋಸುಕೊಡುವ ಮೋದಿ ಆ ಯೋಜನೆಗೆ  ಮಹಾತ್ಮಾಗಾಂಧಿಜೀ ಅವರ ಹೆಸರಿಟ್ಟಿರುವುದು ಸರಿಯಲ್ಲ. ಮಹಾತ್ಮಗಾಂಧೀಜಿಯವರು ದಲಿತ ಕೇರಿಗೆ ಹೋಗಿ ಸ್ವಚ್ಛತಾ ಕಾರ್ಯ ಕೈಗೊಂಡು ಅವರ ನಡುವೆ ಬದುಕಿದ್ದರು. ಮೋದಿ ಅವರು ಶೂಟು-ಬೂಟು, ಗ್ಲಾಸ್, ಗ್ಲೌಸ್ ಹಾಕಿಕೊಂಡು ಮಹಾತ್ಮಾಗಾಂಧಿ ರಸಯನ್ನು ಸ್ವಚ್ಛಗೊಳಿಸಿ ಸ್ವಚ್ಛ ಭಾರತ ಅಭಿಯಾನ ಮಾಡುತ್ತಿದ್ದಾರೆ ಎಂದು ಆಂಜನೇಯ ಲೇವಡಿ ಮಾಡಿದರು. ಬಡ ಹೆಣ್ಣು ಮಗಳು ಒಂದು ಸೀರೆಯ ಅರ್ಧ ಭಾಗವನ್ನು ಹುಟ್ಟು ಸ್ನಾನ ಮಾಡುವುದನ್ನು ಕಂಡಿದ್ದ ಗಾಂಧೀಜಿ ಅಂದಿನಿಂದ ವಸ್ತ್ರವನ್ನು ತ್ಯಾಗ ಮಾಡಿದ ಮಹಾತ್ಮರು. ಗಾಂಧೀಜಿ ಅವರ ಹೆಸರೇಳುವ ನೈತಿಕತೆಯೂ ಬಿಜೆಪಿಯವರಿಗೆ ಇಲ್ಲ ಎಂದು ಆಂಜನೇಯ ಕಿಡಿಕಾರಿದರು.

ಬಾಬು ಜಗಜೀವನರಾಮ್ ಅವರು ಹಸಿರುಕ್ರಾಂತಿ ಹರಿಕಾರರಾಗಿದ್ದರು. ಉತ್ತಮ ಆಡಳಿತಗಾರರು. ಅವರ ಅಧಿಕಾರ ತಪ್ಪಿಸಲು ಬಿಜೆಪಿಯವರೇ ಕಾರಣ. ದಲಿತರಿಗೆ ಅಧಿಕಾರ ಸಿಗಲಿಲ್ಲ ಎಂಬ ನೋವು ಇಂದಿಗೂ ಕಾಡುತ್ತಿದೆ. ಸಮಾಜದ  ಕೊಳೆಯನ್ನು ತೊಳೆಯುವ ದಲಿತರು ಎಷ್ಟು ದಿನ ತಾಳ್ಮೆಯಿಂದ ಇರುತ್ತಾರೆ  ಎಂಬುದನ್ನು ಹೇಳಲಿಕ್ಕೆ ಆಗುವುದಿಲ್ಲ ಎಂದರು. ಬಾಬು ಜಗಜೀವನರಾಮ್ ಅವರ ಹೆಸರಿನಲ್ಲಿ ಇದೇ ಮೊದಲ ಬಾರಿಗೆ ಪ್ರಶಸ್ತಿ ನೀಡಲಾಗುತ್ತಿದ್ದು, ಹಿರಿಯ ಸಾಹಿತಿ  ಮರುಳಸಿದ್ದಪ್ಪ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿ ಶಿಫಾರಸು ಮಾಡಿದವರಿಗೆ ಇದೇ 8ರಂದು ವಿಧಾನಸೌಧದ ಬ್ಯಾಂಕ್‌ವೆಟ್‌ಹಾಲನ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಆಂಜನೇಯ ತಿಳಿಸಿದರು.

ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ.ಚಂದ್ರಶೇಖರ್, ವಿವಿಧ ನಿಗಮ ಮಂಡಳಿ ಅಧ್ಯಕ್ಷರಾದ ಜಲಜಾನಾಯಕ್, ರಾಣಿ ಸತೀಶ್,  ಎಸ್.ಎಸ್.ಪ್ರಕಾಶಂ, ಕೆಪಿಸಿಸಿ ಕಾನೂನು ಎಸ್ಸಿ ಘಟಕದ ಅಧ್ಯಕ್ಷ ಎನ್.ಮಂಜುನಾಥ್, ಬಿಬಿಎಂಪಿ ಸದಸ್ಯ ಲೋಕೇಶ್,  ಕಾಂಗ್ರೆಸ್ ನಾಯಕರಾದ ನಿರಂಜನ್, ಮಾರುತಿ, ಜಿ.ಎ.ಭಾವ, ಸುಧೀಂದ್ರ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

1 Comment

  1. Manya mantri sri H Anjineya . .sar bere paksha davara mele .levadi maduva badalu.samaja kalyana elake .yalliruva murarji Desai .shaleyalli .Kali eruva .chittra kala(drawing) shikshakaru .5 varshadinda kayouttiruva kelasakkagi .adannu tumdikollodakkagi solpa tale kedisikondidre .nimma hesaru helikondu baduktevi sir

Write A Comment