ಕರ್ನಾಟಕ

‘ಕಾಮ’ದ ಅಡ್ಡೆಯಾಯ್ತಾ ಹುಬ್ಬಳ್ಳಿ …?

Pinterest LinkedIn Tumblr

1309lodge

ರಾಜ್ಯದ ಪ್ರಮುಖ ನಗರಗಳಲ್ಲಿ ವೇಶ್ಯಾವಾಟಿಕೆ ದಂಧೆ ವ್ಯಾಪಕವಾಗಿ ಹೆಚ್ಚುತ್ತಿದ್ದು, ಇದಕ್ಕೆ ಸಾಕ್ಷಿಯೆಂಬಂತೆ ಮೇಲೆ ಹುಬ್ಬಳ್ಳಿ  ಲಾಡ್ಜ್  ಒಂದರಲ್ಲಿ ಮಾಂಸ ದಂಧೆ ನಡೆಸುತ್ತಿದ್ದ 13 ಯುವತಿಯರು ಹಾಗೂ 5 ಮಂದಿ ಪುರುಷರನ್ನು ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

ಗುರುವಾರ ರಾತ್ರಿ ಜನತಾ ಬಜಾರ್ ಪ್ರದೇಶದ ಆದರ್ಶ ಲಾಡ್ಜ್ ಮೇಲೆ ಏಕಾಏಕಿ ದಾಳಿ ನಡೆಸಿದ  ಹುಬ್ಬಳ್ಳಿಯ ಉಪನಗರ ಠಾಣೆಯ ಪೊಲೀಸರು ಈ ಕಾಮದ ಅಡ್ಡೆಯನ್ನು ಪತ್ತೆ ಹಚ್ಚಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಅಲ್ಲದೇ ದಾಳಿ ಸಮಯದಲ್ಲಿ ಸಿಕ್ಕಿಬಿದ್ದ 13 ಯುವತಿಯರು ಪಶ್ಚಿಮ ಬಂಗಾಳ ಮೂಲದವರಾಗಿದ್ದು ಲಾಡ್ಜ್ ಮಾಲೀಕ ಹೊರ ರಾಜ್ಯದಿಂದ ಯುವತಿಯರನ್ನು ಕರೆತಂದು ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ. ಇದೀಗ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಲಾಡ್ಜ್ ಮಾಲಿಕನ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.

1 Comment

Write A Comment