ಕರ್ನಾಟಕ

ಸಾವಿನ ರಹಸ್ಯ ಬಯಲಿಗೆಳೆಯಲು ಸಿಐಡಿ ತೆಗೆದುಕೊಂಡಿರುವ ಮಾದರಿಗಳೇನು..?

Pinterest LinkedIn Tumblr

1020Ravi-Probe

ದಕ್ಷ ಅಧಿಕಾರಿ ಡಿ. ಕೆ ರವಿ ಅವರ ಸಾವಿನ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಸಿಐಡಿ ತಂಡ ತನಿಖೆಯ ಸಮಯದಲ್ಲಿ ಯಾವ ಯಾವ ಪರೀಕ್ಷೆ ನಡೆಸಿದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದ್ದು, ನಾಳೆ ಈ ಕುರಿತು ವರದಿ ನೀಡಲು ಎಲ್ಲಾ ಸಿದ್ದತೆ ನಡೆಸಿದೆ ಎಂಬ ಮಾಹಿತಿ ಲಭಿಸಿದೆ.

ಮೂಲಗಳ ಪ್ರಕಾರ ರವಿ ಅವರು ಸಾವನ್ನಪ್ಪಿದ ಅಪಾರ್ಟ್ ಮೆಂಟ್ ಗೆ ತೆರಳಿದ ತಜ್ಞರ ತಂಡ ರವಿ ಅವರ ದೇಹದ ಮೂರು ಕಡೆಗಳಲ್ಲಿನ ಕೂದಲನ್ನು ಸಂಗ್ರಹಿಸಿದೆ . ತಲೆ , ದೇಹ , ಹಾಗೂ ಗಡ್ಡದ ಕೂದಲನ್ನು ಸಂಗ್ರಹಿಸಿದ್ದು ಈ ಕುರಿತು ತನಿಖೆ ನಡೆಸಿದೆ . ಅಲ್ಲದೇ ಹೃದಯದಿಂದ ಮೆದುಳಿಗೆ ತಲುಪುವ ರಕ್ತನಾಳಗಳ ರಕ್ತದ ಮಾದರಿ ಸಂಗ್ರಹಿಸಿದ್ದು, ವಿಷದ ಪದಾರ್ಥ ಸೇರ್ಪಡೆಯಾಗಿದೆಯಾ ಎಂಬ ಪರೀಕ್ಷೆಯನ್ನೂ ನಡೆಸಿದೆ.

ಇದರ ಜತೆಗೆ ರವಿ ಅವರ ಎಂಜಲಿನ ಮಾದರಿ, ನೇಣು ಹಾಕಿದ್ದ  ಕುತ್ತಿಗೆಯ ಮೇಲ್ಭಾಗದ ಚರ್ಮ, ವೀರ್ಯದ  ಮಾದರಿಯನ್ನು ಸಂಗ್ರಹಿಸಿದೆ. ಅಲ್ಲದೇ ದೇಹದಲ್ಲಿ ವಿಷದ ಅಂಶವನ್ನು ಪತ್ತೆ ಹಚ್ಚಲು ಆರ್ಗ್ಯಾನಿಕ್ ಹಾಗೂ ಇನ್ ಆರ್ಗ್ಯಾನಿಕ್ ಪರೀಕ್ಷೆಯನ್ನೂ ಸಹ ನಡೆಸಿದೆ ಎನ್ನಲಾಗಿದೆ . ಇದರ ಜತೆಗೆ ನೈಟ್ರೋಜನ್ ಟೆಸ್ಟ್ ಅನ್ನೂ ಮಾಡಿದ್ದು ಇದು ಸೈನೈಡ್ ಪತ್ತೆಗೆ ಸಹಕಾರಿಯಾಗಲಿದೆ.

ಒಟ್ಟಿನಲ್ಲಿ ಈಗಾಗಲೇ ದೇಹದಲ್ಲಿರುವ ಹಲವು ಅಂಶಗಳನ್ನು ಗಣನೆಗೆ ತೆಗೆದುಕೊಂಡು ಸಿಐಡಿ ಅಧಿಕಾರಿಗಳು ಮಧ್ಯಂತರ ವರದಿ ಸಿದ್ದಪಡಿಸಿದ್ದಾರೆ ಎನ್ನಲಾಗುತ್ತಿದ್ದು ಈ ಕುರಿತು ಎದ್ದಿರುವ ಕುತೂಹಲಕ್ಕೆ ಸೋಮವಾರ ತೆರೆ ಬೀಳಲಿದೆ.

Write A Comment