ಬೆಂಗಳೂರು, ಮಾ.22: ರವಿ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಜನ ಸಾಮಾನ್ಯರ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಉಳಿದಿವೆ. ಅವುಗಳನ್ನು ವಾಟ್ಸ್‌ಅಪ್‌ನಲ್ಲಿ ಬರೆದು ಹರಿಯ ಬಿಡಲಾಗಿದೆ. ಜನ ಸಾಮಾನ್ಯರು ಕೇಳುತ್ತಿರುವ ಉತ್ತರ ಸಿಗದ ಪ್ರಶ್ನೆಗಳು ಇವು….
1. ರವಿ ಕುರಿತ ಬ್ಲಾಕ್‌ಮೇಲ್ ಸಿಡಿ ಇದೆ ಎಂಬ ವದಂತಿ ಇದೆ. ಆದರೆ ಆ ಸಿಡಿಯಲ್ಲಿರುವ ರಹಸ್ಯ ಅಂಶಗಳ ಬಗ್ಗೆ ಯಾರೊಬ್ಬರು ಬಹಿರಂಗವಾಗಿ ಹೇಳುತ್ತಿಲ್ಲ ಏಕೆ.
2. ರವಿ ಅವರು ಬೆಳಗ್ಗೆ 11.30ಕ್ಕೆ ಕಚೇರಿಯಿಂದ ಮನೆಗೆ ಬಂದಿದ್ದು ಏಕೆ, ಯಾರನ್ನಾದರೂ ಭೇಟಿ ಮಾಡುವ ಉದ್ದೇಶವಿದ್ದರೆ, ಅವರನ್ನು ಕಚೇರಿಯಲ್ಲೇ ಭೇಟಿ ಮಾಡ ಬಹುದಿತ್ತಲ್ಲವೆ ?
3. ಸೆಂಟ್ ಜಾನ್ಸ್‌ವುಡ್‌ಅರ್ಪಾಟ್‌ಮೆಂಟ್ಸ್‌ಗೆ ಮಧ್ಯಾಹ್ನ 12.30ಕ್ಕೆ ಭೇಟಿ ನೀಡಿದ ಮೂವರು ಅನಾಮಿಕರು ಯಾರು ?
4. ಅನಾಮಿಕರು ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಲು ಬರುವಾಗ ಕಾರ್‌ನಲ್ಲಿ ಬರದಿರುವುದು ಏಕೆ ?
5. ಸುಕ್ಷಿತ ಬಟ್ಟೆ ಹಾಗೂ ಟೈ ತೊಟ್ಟು ಮೂರು ಸೂಟ್‌ಕೇಸ್‌ಗಳೊಂದಿಗೆ ಅಪಾರ್ಟ್‌ಮೆಂಟ್‌ಗೆ ಬಂದಿದ್ದ ಅನಾಮಿಕರು ಸಂದರ್ಶಕರ ಪುಸ್ತಕದಲ್ಲಿ ತಮ್ಮ ನಿಜವಾದ ಹೆಸರು ಹಾಗೂ ಮೊಬೈಲ್ ಸಂಖ್ಯೆ ಬರೆಸದಿರಲು ಕಾರಣವೇನು ?
6. ಅಪಾರ್ಟ್‌ಮೆಂಟ್‌ನಲ್ಲಿ ಮೊದಲೇ ಮೂವರು ಬಂದಿದ್ದರೇ ಅವರನ್ನು ತಪಾಸಣೆ ಮಾಡಲಾಗಿತ್ತೆ ?
7. ಅದೇ ದಿನ ರವಿ ಅವರ ಪ್ಲಾಟ್‌ನಿಂದ ಹೊರಗಡೆ ಎಸೆದಿದ್ದ ಸ್ಥಿರ ದೂರವಾಣಿ ಸೆಟ್‌ನ್ನು ಸ್ಥಳೀಯರು ಸೆಕ್ಯೂರಿಟಿ ಸಿಬ್ಬಂದಿಗೆ ಕೊಟ್ಟಿದ್ದಾರೆ ಎಂದ ಮೇಲೆ ದೂರವಾಣಿ ಕಡಿತಗೊಳಿಸಿದ್ದು ಯಾರು ಮತ್ತು ಸೆಕ್ಯೂರಿಟಿ ಆ ಸ್ಥಿರ ದೂರವಾಣಿ ಸೆಟ್‌ನ್ನು ಏನು ಮಾಡಿದ್ದಾರೆ ?
8. ರವಿ ಪತ್ನಿ ತಮ್ಮ ಬಳಿ ಇದ್ದ ಬೀಗದ ಕೈನಿಂದ ಬಾಗಿಲು ತೆರೆದಿದ್ದಾರೆ. ಆದರೆ, ಮೂಲ ಬೀಗದ ಕೈ ಎಲ್ಲಿ ?
9. ಇದೇ ತಿಂಗಳು ನಗರದ ಹೋಟೆಲ್‌ನಲ್ಲಿ ರವಿ ಸೇರಿದಂತೆ ಈಎಎಸ್ ಅಧಿಕಾರಿಗಳ ತಂಡ ಊಟಕ್ಕೆ ಸೇರಿದ್ದರು. ಅಲ್ಲಿ ರೋಹಿಣಿ ಅವರೂ ಇದ್ದರೂ ಎಂದ ಮೇಲೆ ಎರಡು ತಿಂಗಳ ಹಿಂದೆ ರೋಹಿಣಿ ಅವರು ರವಿ ದೂರು ನೀಡಲು ಸಾಧ್ಯವೇ ?
10. ರವಿ ಅವರ ಪತ್ನಿ ಕುಸುಮಾ ತಮ್ಮ ಬಳಿ ಬೀಗದ ಕೈ ಬಳಸಿ ಅರ್ಪಾಟ್‌ಮೆಂಟ್ ಪ್ಲಾಟ್‌ನ ಬಾಗಿಲು ತೆಗೆಯುತ್ತಿದ್ದಂತೆ ಬೇರೆಯವರೆಲ್ಲಾ ಒಳನುಗ್ಗಲು ಪೊಲೀಸರು ಅವಕಾಶ ನೀಡಿದ್ದೇಕೆ. ಇದು ಸಾಕ್ಷ್ಯ ನಾಶ ಪಡಿಸುವ ಪೂರ್ವನಿಯೋಜಿತ ಸಂಚಲ್ಲವೇ ?
11. ಆತ್ಮಹತ್ಯೆಗೆ ಒಳಗಾದ ವ್ಯಕ್ತಿಯ ಒದ್ದಾಟದಿಂದ ಬಟ್ಟೆ ಹಾಳಾಗುವುದು ಸಾಮಾನ್ಯ. ರವಿ ಧರಿಸಿದ್ದ ಷರ್ಟ್‌ನ ಇನ್‌ಶರ್ಟ್ ಕೂಡ ಸುಕ್ಕಾಗದಿರುವುದು ಆಶ್ಚರ್ಯವಲ್ಲವೇ ?
12. ಆರಂಭದಲ್ಲಿ ಡೆತ್ ನೋಟ್ ಸಿಕ್ಕಿದೆ ಎಂದು ಹೇಳಿದ ಪೊಲೀಸ್ ಅಧಿಕಾರಿಗಳು ನಂತರ ಯಾವ ನೋಟ್ ಸಿಕ್ಕಿಲ್ಲ ಎಂದು ಹೇಳಿದ್ದು ಏಕೆ ?
13. ನೇಣು ಹಾಕಿಕೊಂಡಿದ್ದರೆ ಸೀಲಿಂಗ್ ಫ್ಯಾನ್ ಒಂದುಚೂರು ಹಾನಿಯಾಗದಿರುವುದು ಏಕೆ ?
14.ರವಿ ಕುತ್ತಿಗೆಯ ಎಡ ಭಾಗಕ್ಕೆ ಹಗ್ಗ ಬಿಗಿದಿದ್ದು ಏಕೆ, ಬಲ ಭಾಗಕ್ಕೆ ಏಕಿಲ್ಲ ?
15. ದೊಮ್ಮಲೂರು ಬಳಿ ರಕ್ಷಣಾ ಇಲಾಖೆಯ 36,633 ಚದುರ ಅಡಿ ಜಾಗವನ್ನು ಎಂಬೆಸಿ ಗ್ರೂಪ್ ಒತ್ತುವರಿ ಮಾಡಿದೆ ಎಂಬ ಸಮಗ್ರ ಮಾಹಿತಿ ಸಂಗ್ರಹಿಸಿದ್ದ ಕಡತ ಕಾಣೆಯಾಗಿರುವುದು ಎಲ್ಲಿ ? ರವಿ ಸಾಯದಿದ್ದರೇ ಮಾರನೇಯ ದಿನವೇ ಎಂಬೆಸಿ ಗ್ರೂಪ್ ಮೇಲೆ ದಾಳಿ ನಡೆಯುತ್ತಿತ್ತು ಎಂಬುದು ನಿಜವೇ ?
16. ರವಿ ಸಾವನ್ನಪ್ಪಿರುವುದನ್ನು ನೋಡಲು ಗೃಹ ಸಚಿವ ಕೆ.ಜೆ.ಜಾರ್ಜ್ ಮತ್ತು ಅವರ ಪುತ್ರ ರಾಣಾ ಜಾರ್ಜ್ ಎಲ್ಲರಿಗಿಂತಲೂ ಮುಂಚಿತವಾಗಿ ಧಾವಿಸಿ ಬರಲು ಕಾರಣವೇನು ?
17. ತನಿಖೆಗೂ ಮೊದಲೇ ರವಿ ಅವರದು ಆತ್ಮಹತ್ಯೆ ಎಂದು ನಗರ ಪೊಲೀಸ್ ಆಯುಕ್ತರು ಹಾಗೂ ಗೃಹ ಸಚಿವರು ಘೋಷಣೆ ಮಾಡಲು ಕಾರಣವೇ ?
18. ಸಾಯುವ ಕೊನೆ ಕ್ಷಣದಲ್ಲಿ ರವಿ ಮಾತನಾಡಿರುವ ಕರೆ ಯಾರದು ?
19. ಕೊಲಾರ ಜಿಲ್ಲಾಧಿಕಾರಿಯಾಗಿದ್ದಾ ರವಿ ವರ್ಗಾವಣೆಯಾದ ಸುದ್ದಿ ಕೇಳಿ ಕೋಲಾರದ ಶಾಸಕ ವರ್ತೂರು ಪ್ರಕಾಶ್ ಮತ್ತು ಬಂಗಾರಪೇಟೆ ಶಾಸಕ ನಾರಾಯಣ ಸ್ವಾಮಿ ಸಿಹಿ ಹಂಚಿದ್ದು ಏಕೆ ?
20. ಡಿ.ಕೆ.ರವಿ ಅವರ ಎರಡು ಸ್ಮಾರ್ಟ್‌ಫೋನ್‌ಗಳು, ಒಂದು ಲ್ಯಾಪ್‌ಟ್ಯಾಪ್ ಹಾಗೂ ಒಂದು ಐಪ್ಯಾಡ್‌ನ್ನು ಸೈಬರ ಕ್ರೈಮ್ ಪೊಲೀಸರ ಪರಿಶೀಲನೆಗೆ ಈವರೆಗೂ ಒಪ್ಪಿಸದಿರುವುದು ಏಕೆ ?
21. ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಎದರುತ್ತಿರುವುದು ಏಕೆ ?
22. ಆರು ದಿನಗಳಾದರೂ ಮರಣೋತ್ತರ ಪರೀಕ್ಷೆಯ ವರದಿ ಇನ್ನೂ ಹೊರ ಬರದಿರುವುದು ಏಕೆ ?
23. ಅರ್ಪಾಟ್‌ಮೆಂಟ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಸರಿಯಾಗಿ ವಿಶ್ಲೇಷಿಸದಿರಲು ಕಾರಣವೇನು ?
24. ರವಿ ಅವರ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದ ಆಸ್ಪತ್ರೆಯ ಶವಾಗಾರದ ಬಳಿ ವೈದ್ಯರು ಹಾಗೂ ವಿಭಾಗಾಧಿಕಾರಿಗೆ ಮಾತ್ರ ಅಲ್ಲಿ ಹಾಜರಿರಲು ಸಾಧ್ಯ. ಆದರೆ ಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರು ಅಲ್ಲಿ ಹಾಜರಿದ್ದದ್ದು ಏಕೆ ? ಸಚಿವರ ಭೇಟಿ ರವಿ ಅವರ ಪ್ರಾರ್ಥಿವ ಶರೀರಕ್ಕೆ ಶ್ರದ್ಧಾಂಜಲಿ ಸಲ್ಲಿಸಲೋ ಅಥವಾ ಮನೆಯವರಿಗೆ ಸಾಂತ್ವಾನ ಹೇಳಲೋ ?