ಕರ್ನಾಟಕ

68 ಸಂಸ್ಥೆಗಳ ಮೇಲೆ ಏಕಕಾಲಕ್ಕೆ ದಾಳಿಗೆ ಸಜ್ಜಾಗಿದ್ದ ಡಿಕೆಆರ್ ?

Pinterest LinkedIn Tumblr

DKRavi

ಬೆಂಗಳೂರು, ಮಾ.22- ದಕ್ಷ, ಪ್ರಾಮಾಣಿಕ ಐಎಎಸ್ ಅಧಿಕಾರಿ ರವಿ ಅವರು ಅಸಹಜ ಸಾವಿಗೆ ಒಳಗಾಗದೇ ಹೋಗಿದ್ದರೆ ಬುಧವಾರ ಸುಮಾರು 68 ಸಂಸ್ಥೆಗಳ ಮೇಲೆ ಏಕ ಕಾಲಕ್ಕೆ ವಾಣಿಜ್ಯ ತೆರಿಗೆ ಸಂಬಂಧ ದಾಳಿ ನಡೆಸಲು ಸಜ್ಜಾಗಿದ್ದರೇ?

ಈ ಅನುಮಾನ ಇದೀಗ ಪೊಲೀಸ್ ವಲಯದಲ್ಲೂ ಹಬ್ಬಿದ್ದು ಅವರು ಸಾವಿಗೂ ಮುನ್ನ 68 ಉನ್ನತ ಸಂಸ್ಥೆಗಳ ಮೇಲೆ ದಾಳಿ ನಡೆಸಲು ಪಟ್ಟಿ ಸಿದ್ಧಮಾಡಿಕೊಂಡಿದ್ದರು ಎಂಬುದು ಇದೀಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಸೋಮವಾರ 3 ಗಂಟೆಗೆ ಈ ಸಂಬಂಧ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದಿದ್ದ ರವಿ ಅವರು ಚರ್ಚೆ ನಂತರ ದಾಳಿ ನಡೆಸಲು ಸಿದ್ಧತೆ ಕೈಗೊಂಡಿದ್ದರಂತೆ.

ಸೋಮವಾರದ ನಂತರ ಊರಿನಿಂದ ತಂದೆ-ತಾಯಿಯನ್ನು ಜಾನ್‌ವುಡ್ ನಿವಾಸಕ್ಕೆ ಕರೆಸಿಕೊಂಡು ಹಾಲು ಉಕ್ಕಿಸಿ ಗೃಹಪ್ರವೇಶ ಮಾಡುತ್ತೇನೆ ಎಂದು ಅವರು ತಮ್ಮ ಸ್ನೇಹಿತರಲ್ಲಿ ಹೇಳಿಕೊಂಡಿದ್ದರಂತೆ. ಒಟ್ಟಾರೆ ಈ ಪ್ರಕರಣದಲ್ಲಿ ಘಟಾನುಘಟಿಗಳ ಕೈವಾಡ ಅಡಗಿದ್ದು , ಅದು ಬಯಲಾಗಲಿದೆ ಎಂಬ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಚ್ಚಿ ಹಾಕುವ ಎಲ್ಲಾ ಪ್ರಯತ್ನಗಳು ಸಾಗಿವೆ ಎಂಬುದು ಉನ್ನತ ಮೂಲಗಳ ಗುಸು ಗುಸು.

Write A Comment