ಡಿ ಕೆ ರವಿ ಅವರ ಪ್ರಕರಣವನ್ನು ಸಿಬಿಐ ಗೆ ವಹಿಸಲು ಹಿಂದೇಟು ಹಾಕುತ್ತಿರುವ ನಡುವೆಯೇ ಜೆ ಡಿ ಎಸ್ ಮುಖಂಡ ಕುಮಾರಸ್ವಾಮಿ ಆಡಿಯೋ ಸಿಡಿ ಒಂದನ್ನು ಬಿಡುಗಡೆ ಮಾಡಿದ್ದು ಶಾಸಕರೊಬ್ಬರ ದಬ್ಬಾಳಿಕೆಯನ್ನು ಬಿಚ್ಚಿಟ್ಟಿದ್ದಾರೆ.
ಕೋಲಾರದ ಶಾಸಕರಾದ ವರ್ತೂರು ಪ್ರಕಾಶ್ ಕೆಳ ಹಂತದ ಅಧಿಕಾರಿಯೊಬ್ಬರಿಗೆ ಕರೆ ಮಾಡಿ ಧಮಕಿ ಹಾಕಿರುವ ಧ್ವನಿ ಇದರಲ್ಲಿದ್ದು ವರ್ತೂರು ಅವರಿಗೆ ಸಂಬಂಧಿಸಿದ ಅಕ್ರಮ ಮರಳು ಲಾರಿಗಳನ್ನು ಬಿಡುವಂತೆ ಎಚ್ಚರಿಕೆ ನೀಡಿದ್ದಾರೆ.
ಈ ಕೆಳಹಂತದ ಅಧಿಕಾರಿ ಡಿ ಸಿ ಅವರ ಆದೇಶದಂತೆ ತಾನು ಕಂಪ್ಲೇಂಟ್ ನೀಡಿದ್ದೇನೆ ಎಂದು ಹೇಳಿದ್ದು, ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ವರ್ತೂರು ನನ್ನ ಮಾತು ಕೇಳದಿದ್ದರೆ ಸಸ್ಪೆಂಡ್ ಆಗ್ತೀಯಾ ಮೊದಲು ಕಂಪ್ಲೇಂಟ್ ಮರಳಿ ಪಡೆದು ಲಾರಿಯನ್ನು ವಾಪಾಸ್ ಕಳುಹಿಸು ಡಿ.ಸಿ ಬಗೆಗೆ ತಲೆ ಕೆಡಿಸಿಕೊಳ್ಳಬೇಡ ಎಂದಿದ್ದಾರೆ. ಅಲ್ಲದೇ ತನ್ನ ಮಾತು ಕೇಳದಿದ್ದರೆ 5ಲಕ್ಷ ಹಣ ನೀಡಿ ಲೋಕಾಯುಕ್ತಕ್ಕೆ ಹಿಡಿಸಿ ಕೊಡುತ್ತೇನೆ. ನಿನ್ನ ಜೀವನ ಪರ್ಯಂತ ಅನ್ನವಿಲ್ಲದಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.
ಒಟ್ಟಿನಲ್ಲಿ ರವಿ ಅವರ ವರ್ಗಾವಣೆಗೆ ವರ್ತೂರು ಪ್ರಕಾಶ್ ಅವರ ಒತ್ತಡ ಇತ್ತು ಎಂಬುದು ಸ್ಪಷ್ಟವಾಗಿದ್ದು ರವಿ ಅವರ ಸಾವಿನ ಹಿಂದೆ ಯಾರ್ಯಾರ ಕೈವಾಡವಿದೆ ಎಂಬ ರಹಸ್ಯ ಹೊರಬೀಳಬೇಕಿದೆ.
