ಕರ್ನಾಟಕ

ಭಗವದ್ಗೀತೆ ಕುರಿತ ನೀಡಿದ ಹೇಳಿಕೆಗೆ ಈಗಲೂ ಬದ್ಧ; ಸರ್ವಜನ ವೇದಿಕೆ: ಭಗವಾನ್‌ ಪ್ರಸ್ತಾಪ

Pinterest LinkedIn Tumblr

bhag

– ಪ್ರೊ.ಕೆ.ಎಸ್‌ಭಗವಾನ್‌, ಸಾಹಿತಿ

ಮೈಸೂರು: ‘ವಿಶ್ವ ಹಿಂದೂ ಪರಿಷತ್ತಿನವರು ವಿರಾಟ್‌ ಹಿಂದೂ ಸಮಾವೇಶ ನಡೆಸಿ ಭಗವದ್ಗೀತೆ ಕುರಿತು ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಇದರ ವಿರುದ್ಧ ನಾವು ಸರ್ವಜನ ವೇದಿಕೆ ಸ್ಥಾಪಿಸಿ, ರಾಜ್ಯದಾದ್ಯಂತ ಕಾರ್ಯಕ್ರಮ ನಡೆಸಿ ಸತ್ಯವನ್ನು ಹೇಳುತ್ತೇವೆ’ ಎಂದು ಸಾಹಿತಿ ಪ್ರೊ.ಕೆ.ಎಸ್‌. ಭಗವಾನ್‌ ತಿಳಿಸಿದರು.

‘ಭಗವದ್ಗೀತೆಯ 9ನೇ ಅಧ್ಯಾಯ, 32 ಮತ್ತು -33ನೇ ಶ್ಲೋಕಗಳು ಮಹಿಳೆಯರು, ವೈಶ್ಯರು, ಶೂದ್ರರು ಪಾಪಿಗಳು ಎನ್ನುತ್ತದೆ. ಈ ಭಾಗವನ್ನು ಸುಟ್ಟು ಹಾಕಬೇಕು ಎಂಬ ಹೇಳಿಕೆಗೆ ನಾನು ಬದ್ಧನಿದ್ದೇನೆ. ಇಡೀ ದೇಶದಲ್ಲಿ ಶೇ 2ರಷ್ಟು ಬ್ರಾಹ್ಮಣರಿದ್ದರೆ, ಉಳಿದ ಶೇ 98ರಷ್ಟು ಮಂದಿ ಮಹಿಳೆಯರು, ಶೂದ್ರರು, ವೈಶ್ಯರಿದ್ದಾರೆ. ಹಾಗಾದರೆ ಇವರೆಲ್ಲರೂ ಪಾಪಿಗಳಾ? ಬ್ರಾಹ್ಮಣ ಮಹಿಳೆಯರೂ ಸೇರಿದಂತೆ ಈ ಎಲ್ಲ ವರ್ಗದವರು ಭಗವದ್ಗೀತೆಯನ್ನು ತಿರಸ್ಕರಿಸಬೇಕು’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಭಗವದ್ಗೀತೆಗೆ ನಮಸ್ಕಾರ’ ಪುಸ್ತಕ ಬಿಡುಗಡೆ: ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಮಾತನಾಡಿ, ‘ಭಗವದ್ಗೀತೆ ಕುರಿತು ನೀಡಿದ ನನ್ನ ಹೇಳಿಕೆಗೆ ಕೆಲವರು ಪ್ರಶ್ನೆ ಎತ್ತಿದ್ದಾರೆ. ಅದಕ್ಕೆ ಉತ್ತರ ನೀಡಲೆಂದೇ `‘ಭಗವದ್ಗೀತೆಗೆ ನಮಸ್ಕಾರ’ ಎಂಬ ಪುಸ್ತಕ ಬರೆದಿದ್ದು, ಮುದ್ರಣಕ್ಕೆ ಸಿದ್ಧವಾಗುತ್ತಿದೆ. ಸದ್ಯದಲ್ಲಿಯೇ ಅದು ಎಲ್ಲರ ಪ್ರಶ್ನೆಗಳಿಗೂ ಉತ್ತರ ನೀಡಲಿದೆ. ನಾನು ಓದಿಕೊಳ್ಳದೇ ಯಾವ ವಿಚಾರವನ್ನು ಮಾತನಾ­ಡುವುದಿಲ್ಲ. ಹಾಗೆಯೇ, ಭಗವದ್ಗೀತೆ­ಯಲ್ಲಿನ ತಪ್ಪುಗಳನ್ನು ಹೇಳಿದ್ದೇನೆ. ಭಗವದ್ಗೀತೆಯಲ್ಲಿನ ಕೆಲವು ಶ್ಲೋಕಗಳನ್ನು ಇನ್ಯಾರೋ ಬರೆದು ವ್ಯಾಸರ ಹೆಸರಿನಲ್ಲಿ ಬರುವಂತೆ ಮಾಡಿದ್ದಾರೆ’ ಎಂದು ಅನುಮಾನ ವ್ಯಕ್ತಪಡಿಸಿದರು.

*ಪೇಜಾವರ ಶ್ರೀಗಳು ಅಂತರ್ಜಾತಿ ಬೇಡ ಎಂದರೆ, ಎಸ್.ಎಲ್. ಭೈರಪ್ಪ ಬೇಕು ಎಂದಿದ್ದಾರೆ. ಅವರ ನಿಲುವು ನೋಡಿದರೆ ಭೈರಪ್ಪ ಈಗ ಸ್ವಲ್ಪಮಟ್ಟಿಗೆ ಅಂತರ್ಜಾತಿ ವಿಚಾರದಲ್ಲಿ ಬದಲಾಗಿದ್ದಾರೆ ಎಂದೆನಿಸುತ್ತದೆ.
– ಪ್ರೊ.ಅರವಿಂದ ಮಾಲಗತ್ತಿ, ಸಾಹಿತಿ

*‘ಘರ್‌ ವಾಪಸಿ ಎಂದರೆ ಎಲ್ಲಿಗೆ ಬರಬೇಕು ಎಂಬುದೇ ಗೊತ್ತಿಲ್ಲ. ಹಿಂದೂ ಧರ್ಮದಲ್ಲಿನ ಹಿಂಸೆ ತಾಳಲಾರದೆ ಬೇರೆ ಧರ್ಮಕ್ಕೆ ಹೋದವರಿದ್ದಾರೆ. ಅವರನ್ನು ಪುನಃ ಹಿಂಸೆಗೆ ಕರೆತರುವುದು ಬೇಡ.
– ಪ್ರೊ.ಕೆ.ಎಸ್‌ಭಗವಾನ್‌, ಸಾಹಿತಿ

ಮುಖ್ಯಾಂಶಗಳು
32-33 ಅಧ್ಯಾಯ, ಭಗವದ್ಗೀತೆ  ಶ್ಲೋಕ ಮಹಿಳೆಯರು ವೈಶ್ಯರು, ಶೂದ್ರರು ಪಾಪಿಗಳು ಎನ್ನುತ್ತದೆ

98% ಮಹಿಳೆಯರು, ಶೂದ್ರರು, ವೈಶ್ಯರಿದ್ದಾರೆ. ಹಾಗಾದರೆ ಇವರೆಲ್ಲರೂ ಪಾಪಿಗಳಾ?

Write A Comment