ಕರ್ನಾಟಕ

ರಾಷ್ಟ್ರಗೀತೆ ವೇಳೆ ವೇದಿಕೆ ಬಿಟ್ಟು ನಡೆದ ರಾಜ್ಯಪಾಲ

Pinterest LinkedIn Tumblr

vajಬೆಂಗಳೂರು: ನ್ಯಾಯಮೂರ್ತಿ ರಾಘ­ವೇಂದ್ರ ಸಿಂಗ್ ಚೌಹಾಣ್‌ ಅವರ ಪ್ರಮಾಣ­ವಚನ ಸ್ವೀಕಾರ ಸಮಾ­ರಂಭ­ದಲ್ಲಿ ರಾಷ್ಟ್ರಗೀತೆ ನುಡಿಸುವ ವೇಳೆ ರಾಜ್ಯ­ಪಾಲ ವಜುಭಾಯಿ ವಾಲಾ ಅವರು ವೇದಿಕೆಯಿಂದ ಕೆಳಗಿಳಿದು ಹೋದ ಪ್ರಸಂಗ ಮಂಗಳವಾರ ನಡೆಯಿತು.

ರಾಜಸ್ತಾನದಿಂದ ರಾಜ್ಯ ಹೈಕೋ­ರ್ಟ್‌ಗೆ ವರ್ಗವಾಗಿ ಬಂದಿರುವ ಚೌಹಾಣ್‌ ಅವರಿಗೆ ರಾಜಭವನದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಬೆಳಿಗ್ಗೆ 9.30ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ಏರ್ಪಡಿಸಲಾಗಿತ್ತು. ಪ್ರತಿಜ್ಞಾವಿಧಿ ಬೋಧನೆ ನಂತರ ಪೊಲೀಸ್‌ ಬ್ಯಾಂಡ್‌ ರಾಷ್ಟ್ರಗೀತೆ ನುಡಿ­ಸಲು ಆರಂಭಿಸಿತು. ಆಗ ರಾಜ್ಯಪಾಲರು ವೇದಿಕೆ ಬಿಟ್ಟು ಕೆಳಗಿಳಿದು ಹೊರಟರು.

ಕೆಲ ಹೆಜ್ಜೆ ಹಾಕಿ ಮುಂದೆ ಹೋಗಿದ್ದ ಅವರು ತಕ್ಷಣವೇ ಮರಳಿ ವೇದಿಕೆಯೇರಿ ತಮ್ಮ ಸ್ಥಾನಕ್ಕೆ ಬಂದು ನಿಂತರು. ಆದರೆ ಅಷ್ಟ­ರಲ್ಲಾ­ಗಲೇ ರಾಷ್ಟ್ರಗೀತೆಯ ಕೊನೆಯ ಸಾಲು ಕೇಳಿ ಬರುತ್ತಿತ್ತು. ಮುಖ್ಯ ನ್ಯಾಯ­ಮೂರ್ತಿ ಡಿ.ಎಚ್‌.­ವಘೇಲಾ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ ಹಾಜರಿದ್ದರು.

Write A Comment