ಹಾಸನ: ನಮ್ ಮಾಜಿ ಪ್ರಧಾನಿ ದೇವೇಗೌಡ್ರುನಾ ಕಂಡ್ರೆ ಭಯನೂ ಆಗುತ್ತೇ…ಹೆಮ್ಮೆಯೂ ಆಗುತ್ತೆ… ಹೀಗೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರನ್ನು ಹೊಗಳಿದವರು ವಸತಿ ಸಚಿವ ಅಂಬರೀಷ್.
ಶುಕ್ರವಾರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ವಸತಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಬ್ಬರೂ ಒಟ್ಟಿಗೆ ವೇದಿಕೆ ಹಂಚಿಕೊಂಡರು. ಸಭೆ ಆರಂಭದಲ್ಲಿ ಮಾತನಾಡಿದ ಸಚಿವರು, ಕನ್ನಡಕ್ಕೆ ಹಿರಿಮೆ ತಂದುಕೊಟ್ಟ ದೇವೇಗೌಡರ ಪಕ್ಕ ಕುಳಿತು ಸಭೆ ನಡೆಸಲು ಹೆಮ್ಮೆ ಆಗುತ್ತಿದೆ, ಭಯವೂ ಆಗುತ್ತಿದೆ. ನನ್ನ ಮೆಚ್ಚಿನ ನಾಯಕರು ಅವರು ಎಂದು ಹೊಗಳಿದರು.
ಗೌಡರ ಶ್ಲಾಘನೆ
ಜಿಲ್ಲೆಗೆ ಬಂದ ಬೇರೆ ಇಲಾಖೆಗಳ ಸಚಿವರು ತಮ್ಮ ಇಲಾಖೆಗೆ ಸಂಬಂಧಿಸಿ ಪ್ರತ್ಯೇಕವಾಗಿ ಸಭೆ ನಡೆಸಿಲ್ಲ. ಅಂಬರೀಷ್ ಸಭೆಗೆ ಬರುವ ಮೊದಲೇ ವಸತಿ ಇಲಾಖೆಗೆ ಸಂಬಂಧಿಸಿದಂತೆ ಅಗತ್ಯವಾದ ಮಾಹಿತಿ ಸಂಗ್ರಹಿಸಿಕೊಂಡು ಅಧಿಕೃತವಾಗಿ ಮಾತನಾಡುತ್ತಿದ್ದಾರೆ. ಅವರ ಕಾರ್ಯವೈಖರಿ ನನಗೆ ಹಿಡಿಸಿತು ಎಂದು ಗೌಡರು ಅಂಬರೀಷ್ ಅವರನ್ನು ಹೊಗಳಿದರು.
ಜಾತಿ ಆಧಾರದ ಮೇಲೆ ಮುಖ್ಯಮಂತ್ರಿ ಸ್ಥಾನ ನೀಡುವುದಾದರೆ 10ಕ್ಕೂ ಹೆಚ್ಚು ಮಂದಿಗೆ ಸಿಎಂ ಹುದ್ದೆ ನೀಡಬೇಕಾಗುತ್ತದೆ. ಹಾಲಿ ಮುಖ್ಯಮಂತ್ರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಚೆನ್ನಾಗಿಯೇ ನಡೆಯುತ್ತಿದೆ. ಈಗ ಬದಲಾವಣೆ ಮಾತೇಕೆ?
-ಅಂಬರೀಷ್