ಕರ್ನಾಟಕ

ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರೈತನ ಶವವಿಟ್ಟು ಪ್ರತಿಭಟನೆ

Pinterest LinkedIn Tumblr

rai

ಚಿತ್ರದುರ್ಗ: ‘ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಹಿರಿಯೂರು ತಾಲ್ಲೂಕಿನ ಗಂಜಲಗುಂಟೆ (ಗಾಂಧಿ ನಗರದ) ಓಬಳಗಿರಿಯಪ್ಪ ಅವರ ಕುಟುಂಬಕ್ಕೆ ರೂ. 10 ಲಕ್ಷ ಪರಿಹಾರ ನೀಡಬೇಕು, ಸಾಲ ಮರುಪಾವತಿಗೆ ಒತ್ತಾಯಿಸಿದ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ ಬಣ) ಕಾರ್ಯಕರ್ತರು ಸೋಮವಾರ ಇಲ್ಲಿ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ರೈತನ ಶವವಿಟ್ಟು ಪ್ರತಿಭಟನೆ ನಡೆಸಿದರು.

ರೈತ ಮಹಿಳಾ ಸಮಾವೇಶಕ್ಕಾಗಿ ಬಂದಿದ್ದ ರೈತ ಸಂಘದ ಕಾರ್ಯಕರ್ತರು, ಶವವಿಟ್ಟು ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ ಎಂಬುದನ್ನು ಮನಗಂಡು, ಶವವನ್ನು ರಹಸ್ಯವಾಗಿ ವಾಹನ ದಲ್ಲಿಟ್ಟುಕೊಂಡು ಜಿಲ್ಲಾಧಿಕಾರಿ ವೃತ್ತದಲ್ಲಿ ದಿಢೀರನೆ ಪ್ರತಿಭಟನೆ ನಡೆಸಿ ದರು. ಇದರಿಂದ ಕ್ಷಣಕಾಲ ವಿಚಲಿತ ರಾದ ಪೊಲೀಸರು ಮತ್ತು ಜಿಲ್ಲಾಡಳಿತ, ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು.

ಸ್ಥಳಕ್ಕೆ ಧಾವಿಸಿದ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ, ಪ್ರತಿಭಟನಾ ನಿರತರೊಂದಿಗೆ ಮಾತನಾಡಿ, ‘ರೈತನ ಕುಟುಂಬಕ್ಕೆ ತುರ್ತಾಗಿ ರೂ. 1 ಲಕ್ಷ ಪರಿಹಾರ ನೀಡುತ್ತೇವೆ. ಹೆಚ್ಚುವರಿ ಪರಿಹಾರಕ್ಕಾಗಿ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ’ ಎಂದು ಭರವಸೆ ನೀಡಿದರು. ರೈತರ ಸಾವಿಗೆ ಕಾರಣರಾದವರ ವರುದ್ಧ ವಿರುದ್ಧ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿಯೂ ಭರವಸೆ ನೀಡಿದರು. ಈ ಘಟನೆ ಕುರಿತು ಹತ್ತು ದಿನಗಳ ಒಳಗೆ ವರದಿ ಸಲ್ಲಿಸುವಂತೆ ಉಪವಿಭಾಗಾಧಿಕಾರಿ, ತಹಶೀಲ್ದಾರ್‌ಗೆ ಸೂಚಿಸುವುದಾಗಿಯೂ ಹೇಳಿದರು.

ಹಿನ್ನೆಲೆ: ಬ್ಯಾಂಕಿನ ಸಾಲ ತೀರಿಸದಿದ್ದರೆ, ಕೋರ್ಟ್‌ಗೆ ಅಲೆಯಬೇಕಾಗುತ್ತದೆ ಎಂದು ಬ್ಯಾಂಕ್‌ ಅಧಿಕಾರಿಗಳು ನೀಡಿದ ಎಚ್ಚರಿಕೆಯಿಂದ ಹೆದರಿದ ಹಿರಿಯೂರು ತಾಲ್ಲೂಕಿನ ಗಂಜಲಗುಂಟೆ (ಗಾಂಧಿನಗರದ) ರೈತ ಓಬಳಗಿರಿಯಪ್ಪ ಭಾನುವಾರ ಆತ್ಮಹತ್ಯೆ ಮಾಡಿದ್ದರು.
ಓಬಳಗಿರಿಯಪ್ಪ, ಹಿರಿಯೂರಿನ ವಿಜಯ ಬ್ಯಾಂಕ್‌ನಲ್ಲಿ ಸುಮಾರು ರೂ. 7 ಲಕ್ಷ ಸಾಲ ಪಡೆದಿದ್ದರು ಎನ್ನಲಾಗಿದೆ. ಸಾಲ ಮರುಪಾವತಿಸದ ಕಾರಣ ಬಡ್ಡಿ ಸೇರಿ ಸುಮಾರು ರೂ.  ೧೩ ಲಕ್ಷದಷ್ಟಾಗಿತ್ತು. ಸಾಲ ಮರುಪಾವತಿಸದಿದ್ದರೆ ಜಮೀನು ಹಾಗೂ ಮನೆ ಜಪ್ತಿ ಮಾಡುವುದಾಗಿ ಬ್ಯಾಂಕ್‌ ಅಧಿಕಾರಿಗಳು ನೋಟಿಸ್ ನೀಡಿದ್ದರು.

ಇದರಿಂದ ಕಳವಳಗೊಂಡ ಓಬಳಗಿರಿ ಯಪ್ಪ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ರೈತ ಮುಖಂಡ ಶಿವುಕುಮಾರ್‌ ತಿಳಿಸಿದ್ದಾರೆ.

Write A Comment