ಕರ್ನಾಟಕ

ಪಲ್ಸ್‌ ಪೋಲಿಯೊ ಎರಡನೇ ಹಂತದ ಕಾರ್ಯಕ್ರಮ: 5.46 ಲಕ್ಷ ಮಕ್ಕಳಿಗೆ ಲಸಿಕೆ

Pinterest LinkedIn Tumblr

pvec23febmPPolio-2

ಬೆಂಗಳೂರು: ಪಲ್ಸ್‌ ಪೋಲಿಯೊ ಎರ­ಡನೇ ಹಂತದ ಲಸಿಕೆ ಕಾರ್ಯಕ್ರಮದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ 83.96 ಮಕ್ಕಳಿಗೆ ಲಸಿಕೆ ಹಾಕಲಾಗಿದೆ.

ಅಭಿಯಾನದಡಿ 6.5 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿಹೊಂದಲಾಗಿತ್ತು. ಭಾನುವಾರ 5.46 ಲಕ್ಷ ಮಕ್ಕಳಿಗೆ ಲಸಿಕೆ ಹಾಕಲಾಗಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಆರೋಗ್ಯ ಕೇಂದ್ರ, ಕುಟುಂಬ ಕಲ್ಯಾಣ ಕೇಂದ್ರ, ಔಷಧಾಲಯ, ಪ್ರಾಥ­ಮಿಕ ಆರೋಗ್ಯ ಕೇಂದ್ರ, ಅಂಗನ­ವಾಡಿ ಕೇಂದ್ರ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಆಸ್ಪತ್ರೆ, ಮಾಲ್‌ಗಳು, ಖಾಸಗಿ ನರ್ಸಿಂಗ್ ಹೋಂಗಳು, ವೈದ್ಯಕೀಯ ಮಹಾವಿದ್ಯಾಲಯ, ಪ್ರಮುಖ ಉದ್ಯಾ­ನವನ ಸೇರಿ ಜನನಿಬಿಡ ಪ್ರದೇಶ­ಗಳಲ್ಲಿ ಬೂತ್‌ಗಳ ವ್ಯವಸ್ಥೆ ಮಾಡ­ಲಾಗಿತ್ತು.

ಪ್ರತಿ 1.5 ಕಿ.ಮೀ ಅಂತರಕ್ಕೆ ಒಂದ­ರಂತೆ ಬೂತ್‌ಗಳನ್ನು ತೆರೆಯಲಾಗಿದ್ದು, ವೈದ್ಯರು, ನರ್ಸ್‌ಗಳು, ಆಶಾ ಕಾರ್ಯ­ಕರ್ತೆಯರು ಸೇರಿದಂತೆ ಪದವಿ ಹಾಗೂ ಪದವಿಪೂರ್ವ ಕಾಲೇಜುಗಳ ಎನ್‍ಎಸ್‍­­ಎಸ್, ಎನ್ಸ್‌ಸಿಸಿ ವಿದ್ಯಾರ್ಥಿ­ಗಳು ಲಸಿಕೆ ಕಾರ್ಯಕ್ರಮದಲ್ಲಿ ಭಾಗವಹಿ­ಸಿದ್ದರು.

ರೋಟರಿ ಬೆಂಗಳೂರು ಇಂದಿರಾ­ನಗರ: ಈ ಸಂಸ್ಥೆ ಪಲ್ಸ್‌ ಪೋಲಿಯೊ ಕುರಿತು ಜಾಗೃತಿ ಮೂಡಿಸಲು ಸಂಚಾರಿ ತೊಗಲು ಗೊಂಬೆ­ಯಾಟದ ಪ್ರದರ್ಶನ­ವನ್ನು ಆಯೋಜಿಸಿತ್ತು.

‘ನನ್ನ ಅನುಮತಿ ಕೇಳಿಲ್ಲ’
ಪಲ್ಸ್‌ ಪೋಲಿಯೊ ಎರಡನೇ ಹಂತದ ಕಾರ್ಯಕ್ರಮದಲ್ಲಿ ಬಾಲ­ಭವನ­ದೊಳಗೆ ಲಸಿಕೆ ಹಾಕಲು ಅವಕಾಶ ನೀಡಿರಲಿಲ್ಲ. ಹೀಗಾಗಿ, ಬಾಲಭವನದ ಗೇಟ್‌ನ ಮುಂದೆಯೇ ಲಸಿಕೆ ಹಾಕಲಾಯಿತು. ಈ ಕುರಿತು ಬಾಲಭವನದ ಅಧ್ಯಕ್ಷೆ ಭಾವನಾ ಅವರು, ‘ಬಾಲಭವನ­ದೊಳಗೆ ಲಸಿಕೆ ಹಾಕಲು ಯಾರೂ ನನ್ನ ಅನುಮತಿ ಕೇಳಿಲ್ಲ. ಅಲ್ಲಿಗೆ ಪ್ರವೇಶಿಸಲು ನನ್ನ ಅನುಮತಿ ಪಡೆಯಲೇಬೇಕು. ಮೊದಲು ವ್ಯವಸ್ಥೆ ಹೇಗಿತ್ತು ಎನ್ನುವುದು ತಿಳಿದಿಲ್ಲ. ಆದರೆ, ಈಗ ಆ ವ್ಯವಸ್ಥೆಯಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ.ಖಾದರ್‌, ‘ಪಲ್ಸ್‌ ಪೋಲಿಯೊ ಹಾಕಲು ಎಲ್ಲಾ ಕಡೆಯೂ ಅವಕಾಶ ಕಲ್ಪಿಸಲಾಗಿದೆ. ಬಾಲಭವನದಲ್ಲಿ ಅವಕಾಶ ನೀಡದೆ ಇರುವುದು ಸರಿಯಲ್ಲ. ಈ ಕುರಿತು ಪರಿಶೀಲಿಸಲಾಗುವುದು’ ಎಂದರು.

Write A Comment