ಕರ್ನಾಟಕ

ಬೆಂಗಳೂರು: ಆನ್‌ಲೈನ್‌ ಕ್ರಿಕೆಟ್ ಬೆಟ್ಟಿಂಗ್: ಇಬ್ಬರ ಬಂಧನ

Pinterest LinkedIn Tumblr

pvec23febmbetting

ಬೆಂಗಳೂರು: ಆನ್‌ಲೈನ್‌ ಮೂಲಕ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರು,  ₨ 34 ಸಾವಿರ , ಏಳು ಮೊಬೈಲ್‌ಗಳು ಹಾಗೂ ಲ್ಯಾಪ್‌ಟಾಪ್‌ ಜಪ್ತಿ ಮಾಡಿದ್ದಾರೆ.

ದೇವರಜೀವನಹಳ್ಳಿಯ ಮುನೀರ್ ಪಾಷಾ ಮತ್ತು ಸಾದಿಕ್ ಪಾಷಾ ಎಂಬು­ವರನ್ನು ಬಂಧಿಸಲಾಗಿದೆ. ಆರೋಪಿಗಳು ರಾಜಸ್ತಾನದಲ್ಲಿರುವ ಪ್ರಮುಖ ಬುಕ್ಕಿ ಯೋಗೇಶ್‌ನ ಸೂಚನೆಯಂತೆ ಈ ದಂಧೆ­ಯಲ್ಲಿ ತೊಡಗಿದ್ದರು. ಆತನ ಪತ್ತೆಗೆ ಒಂದು ತಂಡವನ್ನು ರಾಜಸ್ತಾನಕ್ಕೆ ಕಳು­ಹಿಸಲಾಗಿದೆ. ಈಗಾಗಲೇ ಸಿಬ್ಬಂದಿ, ಸ್ಥಳೀಯ ಪೊಲೀಸರ ನೆರವಿನಿಂದ ಯೋಗೇಶ್‌ನ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತನಿಖಾಧಿಕಾರಿ­ಗಳು ಹೇಳಿದರು.

‘ಬೆಟ್ಟಿಂಗ್ ದಂಧೆಯಲ್ಲಿ ಸಕ್ರಿಯರಾ­ಗಿ­ರು­ವವರನ್ನು ‘www.betfair.com’ ವೆಬ್‌ಸೈಟ್‌ ಮೂಲಕ ಸಂಪರ್ಕಿಸುತ್ತಿದ್ದ ಆರೋಪಿಗಳು, ವಿಶ್ವಕಪ್‌ ಟೂರ್ನಿಯ ಪ್ರತಿ ಪಂದ್ಯಕ್ಕೂ ಬೆಟ್ಟಿಂಗ್ ಕಟ್ಟಿಸಿ­ಕೊಳ್ಳು­ತ್ತಿದ್ದರು. ಪಂದ್ಯ ಮುಗಿದ ಬಳಿಕ ಪರಸ್ಪ­ರರು ಬ್ಯಾಂಕ್‌ ಮೂಲಕ ಹಣ ವರ್ಗಾ­ವಣೆ ಮಾಡಿಕೊಳ್ಳುತ್ತಿದ್ದರು’ ಎಂದು ಮಾಹಿತಿ ನೀಡಿದರು.

‘ಭಾನುವಾರ ನಡೆದ ಭಾರತ–ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಪಂದ್ಯಕ್ಕೂ ಇವರು ಬೆಟ್ಟಿಂಗ್ ಕಟ್ಟಿಕೊಂಡಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿಯಿಂದ ಮನೆ ಮೇಲೆ ದಾಳಿ ನಡೆಸಿ ಅವರನ್ನು ಬಂಧಿ­ಸಲಾಗಿದೆ’ ಎಂದರು.

ತೀವ್ರ ನಿಗಾ: ‘ವಿಶ್ವಕಪ್ ಟೂರ್ನಿ ನಡೆಯುತ್ತಿರುವುದರಿಂದ ಬೆಟ್ಟಿಂಗ್ ದಂಧೆ­­ಯಲ್ಲಿ ತೊಡುಗುವವರ ಪತ್ತೆ­ಗಾಗಿಯೇ ವಿಶೇಷ ತನಿಖಾ ತಂಡ ರಚಿಸಲಾಗಿದೆ’ ಎಂದು ಅಪರಾಧ ವಿಭಾ­ಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಪಿ.ಹರಿಶೇಖರನ್ ತಿಳಿಸಿದ್ದಾರೆ.
‘ಇಂಥ ಪ್ರಕರಣದಲ್ಲಿ ಈ ಹಿಂದೆ ಬಂಧಿತರಾಗಿ, ಬಿಡುಗಡೆಯಾಗಿರುವ ಆರೋಪಿಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳ ಮೊಬೈಲ್‌ ಕರೆಗಳನ್ನು ಕಾಲ ಕಾಲಕ್ಕೆ ಪರಿಶೀಲಿಸಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

Write A Comment