ಕರ್ನಾಟಕ

ನಾನೂ ದಲಿತ: ಸಿದ್ದರಾಮಯ್ಯ ಪ್ರತಿಪಾದನೆ

Pinterest LinkedIn Tumblr

ddd

ನಂಜನಗೂಡು (ಮೈಸೂರು): ‘ಪರಿಶಿಷ್ಟ ಜಾತಿ  ಮತ್ತು ಪಂಗಡ­ದವರು ಮಾತ್ರ ದಲಿತರಲ್ಲ. ಸಮಾಜದ ಎಲ್ಲ ವರ್ಗ, ಜಾತಿಗಳಲ್ಲಿ ಇರುವ ಆರ್ಥಿಕ, ಸಾಮಾ ಜಿಕ, ಶೈಕ್ಷಣಿಕ ಹಿಂದುಳಿ ದವರೂ ದಲಿತರು. ನಾನು ಕೂಡ ದಲಿತ ಸಮುದಾಯದ ವ್ಯಕ್ತಿ ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.

ನಂಜನಗೂಡಿನಲ್ಲಿ ಡಾ. ಬಾಬಾ ಸಾಹೇಬ ಅಂಬೇ ಡ್ಕರ್ ಸಮುದಾಯ ಭವನದ ಉದ್ಘಾಟನೆ, ಅಂಬೇ ಡ್ಕರ್ ಪುತ್ಥಳಿ ಅನಾವರಣ ಮತ್ತು ‘ಕಪಿಲಾ ಸಸ್ಯಕಾಶಿ’ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯಕ್ಕೆ ದಲಿತ ಸಮುದಾಯದ ನಾಯಕನನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿರುವಾಗ ಅವರು ಪರೋಕ್ಷವಾಗಿ ಈ ಮಾತು ಹೇಳಿದರು.

‘ನಾನು ಹಿಂದುಳಿದ, ಶೋಷಿತ ವರ್ಗದ ಪ್ರತಿನಿಧಿ. ಅದಕ್ಕಾಗಿಯೇ ಸಮಾಜದ ಕೆಳಸ್ತರದ ಜನರನ್ನು ಮೇಲೆ ತಂದು ಸುಧಾರಣೆಗೆ ಶ್ರಮಿಸಿದ್ದ ಮಹಾಮಾ ನವತಾವಾದಿ ಬಸವಣ್ಣ­ನವರ ಜಯಂತಿಯಂದೇ ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕ ರಿಸಿದ್ದೆ.
ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ  ಪ್ರತ್ಯೇಕ ಸೌಲಭ್ಯ ಯೋಜನೆ (ಎಸ್‌ಸಿಪಿ) ಮತ್ತು ಆದಿವಾಸಿ ಉಪಯೋಜನೆ (ಟಿಎಸ್‌ಪಿ) ಕಾಯ್ದೆ­ಯನ್ನು ಪ್ರಕಟಿಸಲಾಯಿತು. ರಾಜ್ಯದ ಜನಸಂಖ್ಯೆಯ ಶೇ 24.1ರಷ್ಟು ಇರುವ ದಲಿತ ಸಮುದಯಕ್ಕೆ ಅನುಗು ಣವಾಗಿ ಈ ಕಾಯ್ದೆಯಡಿಯಲ್ಲಿ ರೂ 15,830 ಕೋಟಿ ಮೀಸಲಾಗಿಟ್ಟಿದ್ದೇವೆ. ಈ ಹಿಂದಿನ ಸರ್ಕಾರಗಳು ದಲಿತರ ಕಲ್ಯಾ ಣಕ್ಕಾಗಿ ಕೇವಲ 8.600 ಕೋಟಿ ರೂಪಾಯಿ ಮೀಸಲಾಗಿಟ್ಟಿದ್ದವು’ ಎಂದರು.

‘ನಾನು 2013ರ ಮೇ 13ರಂದು ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭ ದಲ್ಲಿ ನೀಡಿದ್ದ 165 ಅಭಿವೃದ್ಧಿ ಕಾರ್ಯಗಳ ಭರವ ಸೆಯಲ್ಲಿ 95 ಈಡೇರಿವೆ ಎಂದರು.

Write A Comment