ಬೆಂಗಳೂರು: ಆಸ್ಟಿನ್‌ಟೌನ್‌ನ ಬಿಡಿಎ ವಸತಿ ಸಮುಚ್ಛಯದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾ-ರ್ಥಿನಿ ಶ್ರೀಹರಿತಾ (14) ಶುಕ್ರವಾರ ರಾತ್ರಿ ನೇಣು ಹಾಕಿಕೊಂಡು ಆತ್ಮ-ಹತ್ಯೆ ಮಾಡಿಕೊಂಡಿದ್ದಾಳೆ. ಬಿಇಎಂಎಲ್ ಉದ್ಯೋಗಿ ಪಿ.ಗಣೇಶ್ ಹಾಗೂ ಎನ್.ಪರಮೇಶ್ವರಿ ದಂಪತಿಯ ಮಗಳಾದ ಶ್ರೀಹರಿತಾ, ಮ್ಯೂಸಿ-ಯಂ ರಸ್ತೆಯ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಳು.
ರಾತ್ರಿ 11 ಗಂಟೆಗೆ ಪೋಷಕರ ಜತೆ ಊಟ ಮುಗಿಸಿದ ಆಕೆ, ಮಲಗುವು-ದಾಗಿ ತಾಯಿಯ ಮೊಬೈಲ್ ತೆಗೆದು-ಕೊಂಡು ಕೋಣೆಗೆ ಹೋಗಿದ್ದಳು ಎಂದು ಪೊಲೀಸರು ಹೇಳಿದರು. ಬೆಳಿಗ್ಗೆ ಆರು ಗಂಟೆಗೆ ಎಚ್ಚರಗೊಂಡ ಪೋಷಕರು, ಆಕೆಯ ಕೋಣೆಯ ಬಾಗಿ-ಲನ್ನು ಬಡಿದಿದ್ದಾರೆ. ಆದರೆ, ಒಳಗಿ-ನಿಂದ ಪ್ರತಿ-ಕ್ರಿಯೆ ಬಾರದಿದ್ದಾಗ ಮಗಳು ಇನ್ನೂ ಮಲಗಿರಬೇಕು ಎಂದು ಸುಮ್ಮ-ನಾಗಿ-ದ್ದಾರೆ. 9 ಗಂಟೆಯಾದರೂ ಎಚ್ಚರ-ವಾಗದಿದ್ದಾಗ ಅನುಮಾನ-ಗೊಂಡ ಪೋಷ-ಕರು, ಸ್ಥಳೀಯರ ನೆರವಿ-ನಿಂದ ಬಾಗಿಲು ಮುರಿದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.
‘ಮಗಳು ಚೆನ್ನಾಗಿ ಓದುತ್ತಿರಲಿಲ್ಲ. ಆಂತರಿಕ ಪರೀಕ್ಷೆಯಲ್ಲೂ ಕಡಿಮೆ ಅಂಕ ಬಂದಿದ್ದವು. ಮುಂಬರುವ ಅಂತಿಮ ಪರೀಕ್ಷೆಯಲ್ಲೂ ಅನುತ್ತೀರ್ಣಳಾಗು-ತ್ತೇನೆ ಎಂಬ ಭಯ ಆಕೆಯಲ್ಲಿತ್ತು. ಇದ-ರಿಂದ ಕೆಲ ದಿನಗಳಿಂದ ಖಿನ್ನತೆಗೆ ಒಳ-ಗಾಗಿದ್ದ ಆಕೆ, ರಾತ್ರಿ ಆತ್ಮಹತ್ಯೆ ಮಾಡಿ-ಕೊಂಡಿದ್ದಾಳೆ’ ಎಂದು ಗಣೇಶ್ ಅವರು ದೂರಿನಲ್ಲಿ ತಿಳಿಸಿರುವುದಾಗಿ ಅಶೋಕ-ನಗರ ಪೊಲೀಸರು ಮಾಹಿತಿ ನೀಡಿದರು.
‘ಮೊಬೈಲ್‌ನಲ್ಲಿದ್ದ ಎಲ್ಲ ಸಂದೇಶ-ಗಳು ಹಾಗೂ ಕರೆಗಳ ವಿವರಗಳನ್ನು ಶ್ರೀಹರಿತಾ ಅಳಿಸಿ ಹಾಕಿದ್ದಾಳೆ. ತಾಂತ್ರಿಕ ವಿಭಾಗದ ನೆರವು ಪಡೆದು ಆ ವಿವರ-ಗಳನ್ನು ಪುನಃ ಪಡೆಯುವ ಕಾರ್ಯ ನಡೆ-ಯುತ್ತಿದೆ. ಸದ್ಯ ಅಸಹಜ ಸಾವು ಪ್ರಕ-ರಣ ದಾಖಲಿಸಿಕೊಳ್ಳಲಾಗಿದೆ. ಸಂದೇಶ–-ಕರೆ ವಿವರಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.
ಇಟ್ಟಿಗೆ ಬಿದ್ದು ಕಾರ್ಮಿಕ ಸಾವು: ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ತಲೆ ಮೇಲೆ ಸಿಮೆಂಟ್ ಇಟ್ಟಿಗೆ (ಹಾಲೋಬ್ರಿಕ್ಸ್) ಬಿದ್ದು ಸರವಣ (26) ಎಂಬುವರು ಮೃತಪಟ್ಟಿರುವ ಘಟನೆ ಕಮ್ಮನಹಳ್ಳಿ ಮುಖ್ಯರಸ್ತೆಯ ಸೇಂಟ್ ಚಾರ್ಲ್ಸ್ ಶಾಲೆ ಆವರಣದಲ್ಲಿ ಶುಕ್ರವಾರ ನಡೆದಿದೆ.
ಶಾಲೆ ಆವರಣದಲ್ಲಿ ಐದು ಅಂತಸ್ತಿನ ಮತ್ತೊಂದು ಕಟ್ಟಡ ನಿರ್ಮಾಣವಾಗು-ತ್ತಿದೆ. ಬಳ್ಳಾರಿಯ ಸರವಣ ಅವರು ಮೂರು ತಿಂಗಳಿಂದ ಆ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ 1.30ರ ಸುಮಾರಿಗೆ ಇಟ್ಟಿಗೆಗಳನ್ನು ನಾಲ್ಕನೇ ಮಹಡಿಗೆ ಸಾಗಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ನೆಲ ಅಂತಸ್ತಿನಲ್ಲಿದ್ದ ಸರವಣ ಅವರು, ಇಟ್ಟಿಗೆಗೆ ಹಗ್ಗ ಕಟ್ಟಿ ಮೇಲಕ್ಕೆ ಸಾಗಿಸಿ-ದರು. 4ನೇ ಮಹಡಿಯಲ್ಲಿದ್ದ ಮತ್ತೊಬ್ಬ ಕಾರ್ಮಿಕ ಆ ಇಟ್ಟಿಗೆಯನ್ನು ಹಗ್ಗದಿಂದ ಬಿಡಿಸಿಕೊಳ್ಳುತ್ತಿದ್ದ. ಈ ವೇಳೆ ಆ ಕಾರ್ಮಿ-ಕನ ಕೈಯಿಂದ ಜಾರಿದ ಇಟ್ಟಿಗೆ, ಕೆಳಗಿದ್ದ ಸರವಣ ಅವರ ತಲೆ ಮೇಲೆ ಬಿದ್ದಿತು.
ಗಾಯಗೊಂಡ ಅವರನ್ನು ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸ-ಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಸ್ವಲ್ಪ ಸಮಯದಲ್ಲೇ ಅವರು ಮೃತ-ಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆ ಸಂಬಂಧ ಕಟ್ಟಡದ ಎಂಜಿ-ನಿಯರ್‌ಗಳಾದ ಸುನೀಲ್ ಹಾಗೂ ಕುಮಾರ್ ಅವರ ವಿರುದ್ಧ ಬಾಣಸ-ವಾಡಿ ಠಾಣೆಯಲ್ಲಿ ನಿರ್ಲಕ್ಷ್ಯ ಆರೋಪ–ದಡಿ ಪ್ರಕರಣ ದಾಖಲಾಗಿದೆ.