ಕರ್ನಾಟಕ

ನರಸಿಂಹ­ರಾಜಪುರದ ಜೈನರ ಪವಿತ್ರ ಪುಣ್ಯಕ್ಷೇತ್ರ ಜ್ವಾಲಾಮಾಲಿನಿ ದೇವಿಯ ಅತಿಶಯ ಕ್ಷೇತ್ರ ಸಿಂಹನಗದ್ದೆ ಬಸ್ತಿಮಠ ನೂತನ ಪೀಠಾಧಿಪತಿ ಪಟ್ಟಾಭಿಷೇಕ

Pinterest LinkedIn Tumblr

jai

ನರಸಿಂಹರಾಜಪುರ: ಚಿಕ್ಕಮಗಳೂರು ಜಿಲ್ಲೆ ನರಸಿಂಹ­ರಾಜಪುರ ತಾಲ್ಲೂಕಿನಲ್ಲಿರುವ ಜೈನರ ಪವಿತ್ರ ಪುಣ್ಯಕ್ಷೇತ್ರ ಜ್ವಾಲಾಮಾಲಿನಿ ದೇವಿಯ ಅತಿಶಯ ಕ್ಷೇತ್ರ ಸಿಂಹನಗದ್ದೆ ಬಸ್ತಿಮಠದಲ್ಲಿ ಬುಧವಾರ ನೂತನ ಉತ್ತರಾಧಿಕಾರಿ ಕ್ಷುಲ್ಲಕ ಶ್ರೀ ಚಂದ್ರಸೇನ ಸ್ವಾಮೀಜಿ ಪಟ್ಟಾಭಿಷೇಕ ಮಹೋತ್ಸವ ಬುಧವಾರ ವಿಜೃಂಭಣೆಯಿಂದ ನಡೆಯಿತು.

ಮಹೋತ್ಸವದ ಅಂಗವಾಗಿ ಬೆಳಿಗ್ಗೆಯಿಂದ  ಕೊಲ್ಹಾಪು­ರದ ಲಕ್ಷ್ಮೀಸೇನ ಭಟ್ಟಾರಕರ ನೇತೃತ್ವದಲ್ಲಿ ಮಠದಲ್ಲಿ ಚಂದ್ರಸೇನ ಸ್ವಾಮೀಜಿ ಅವರಿಗೆ ಮಂಗಲ ಸ್ನಾನ, ಜಿನ ಮಂದಿರ ದರ್ಶನ, ಪಟ್ಟಬಂಧ, ಮಂಗಲ ಕಲಶ ಸ್ಥಾಪನೆ, ಜಪ, ಧ್ಯಾನ, ನವ ಕಲಶಾಭಿಷೇಕ, ಶಾಂತಿಧಾರಾ, ಮಹಾ ಶಾಂತಿ ಮಂತ್ರ ಪಠಣ ನೆರವೇರಿತು. ಬಳಿಕ ಚಂದ್ರಸೇನ ಸ್ವಾಮಿಗೆ ಪೀಠದ ಪರಂಪರಾಗತ ಬಿರುದಾದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಎಂದು ನಾಮಕರಣ ಮಾಡಿ ಪಟ್ಟಾ­ಭಿಷೇಕದ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.

ಜೈನ ಮಠಗಳ ಸ್ವಾಮೀಜಿಗಳು, ಧರ್ಮಸ್ಥಳದ ಧರ್ಮಾ­ಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಪತ್ನಿ ಹೇಮಾವತಿ ಹೆಗ್ಗಡೆ, ಶಾಸಕ ಡಿ.ಎನ್.ಜೀವರಾಜ್, ಸಾಹಿತಿ ಹಂ.ಪ.­ನಾಗ­ರಾಜಯ್ಯ, ಪಟ್ಟಾಭಿಷೇಕ ಮಹೋತ್ಸವದ ಕಾರ್ಯಾಧ್ಯಕ್ಷ ಬಿ.ಪ್ರಸನ್ನಯ್ಯ, ಮಠದ ವ್ಯವಸ್ಥಾಪಕ ಪ್ರಭಾಕರ್್ ರೈ ಮತ್ತಿತರರು ಭಾಗವಹಿಸಿದ್ದರು.

Write A Comment