ಕರ್ನಾಟಕ

ಚೀಲನಾಯ್ಕನಹಳ್ಳಿ: ಆಳೆತ್ತರ ಬೆಳೆದ ಕೊತ್ತಂಬರಿ!

Pinterest LinkedIn Tumblr

ko

ಹಳೇಬೀಡು: ಇಲ್ಲಿನ ಚೀಲನಾಯ್ಕನ-ಹಳ್ಳಿಯ ರೈತರೊಬ್ಬರ ಹೊಲದಲ್ಲಿ ಕೊತ್ತಂಬರಿ ಬೆಳೆ ಐದರಿಂದ ಆರಡಿ ಎತ್ತರ ಬೆಳೆದು ಅಚ್ಚರಿ ಮೂಡಿಸಿದೆ.

ಒಂದೆರಡು ಗಿಡಗಳಲ್ಲ, ಒಂದು ಎಕರೆ ಹೊಲದಲ್ಲಿ ಬಿತ್ತಿದ್ದ ಎಲ್ಲ ಗಿಡ-ಗಳೂ ಇದೇ ಎತ್ತರಕ್ಕೆ ಬೆಳೆದಿರು­ವುದು ಅಚ್ಚರಿಗೆ ಕಾರಣವಾಗಿದೆ.
ಕಾಳು ಉತ್ಪಾದನೆಯ ಉದ್ದೇಶ-ದಿಂದ ಬಿತ್ತನೆ ಮಾಡಿದ್ದರೆ ರೈತರು ಗಿಡ-ಗಳನ್ನು ಹಾಗೆಯೇ ಬಿಡುತ್ತಾರೆ. ಅಂಥ ಸಂದರ್ಭದಲ್ಲಿ ಸಾಮಾನ್ಯವಾಗಿ ಗಿಡ-ಗಳು ಎರಡು ಅಡಿ ಬೆಳೆಯುತ್ತವೆ.

ಸೊಪ್ಪನ್ನೇ ಮಾರಾಟ ಮಾಡುವವರು 3ರಿಂದ 4 ಇಂಚು ಬೆಳೆದಾಗ ಕತ್ತರಿಸಿ ಮಾರಾಟ ಮಾಡುತ್ತಾರೆ. ಆದರೆ, ಚೀಲನಾಯ್ಕನಹಳ್ಳಿ ಗ್ರಾಮದ ರೈತ ಯಲ್ಲಪ್ಪ ತಮ್ಮ 1 ಎಕರೆ ಜಮೀನಿನಲ್ಲಿ ಬೆಳೆದಿರುವ ಕೊತ್ತಂಬರಿ ಬೆಳೆ ಹುಲು-ಸಾಗಿ ಅತಿ ಎತ್ತರವಾಗಿ ಬೆಳೆದಿರುವುದು ಜನರಲ್ಲಿ ಅಶ್ಚರ್ಯ ಉಂಟು ಮಾಡಿದೆ.

‘ಆರಂಭದಲ್ಲಿ ಗಿಡಗಳು ಸಾಮಾನ್ಯ­ವಾಗಿಯೇ ಇದ್ದವು, ಆದರೆ, ಆಗ ಸೊಪ್ಪಿನ ಬೆಲೆ ಕುಸಿದ ಕಾರಣ ಬೆಳೆ-ಯನ್ನು ಹೊಲದಲ್ಲೇ ಬಿಟ್ಟೆವು. ಬೆಳ-ವಣಿಗೆ ಹೆಚ್ಚಾದಂತೆ ಕಾಂಡ ದಿಂಡಿ-ನಂತಾಗಿ ಎತ್ತರ ಬೆಳೆಯ­ಲಾರಂಭಿಸಿತು. ಬೆಳೆಗೆ ರೋಗ ಬಂದಿರಬೇಕು ಎಂದು ಭಾವಿಸಿ ಅದನ್ನು ಕಿತ್ತೊಗೆಯಲು ತೀರ್ಮಾನಿಸಿದ್ದೆ. ಗಿಡ ಚೆನ್ನಾಗಿದೆ, ಬೆಳೆದರೆ ಸಾಕಷ್ಟು ಕೊತ್ತಂಬರಿ ಕಾಳು ಬರುತ್ತದೆ ಎಂದು ಸ್ನೇಹಿತರು ಸಲಹೆ ನೀಡಿದರು. ಅದರಂತೆ ಗಿಡಗಳನ್ನು ಹಾಗೆಯೇ ಬಿಟ್ಟಿದ್ದೆ’ ಎಂದು ರೈತ ಯಲ್ಲಪ್ಪ ತಿಳಿಸಿದರು.

5 ಅಡಿಗಿಂತ ಎತ್ತರ ಬೆಳೆದಿರುವ ಕೊತ್ತಂಬರಿ ಗಿಡದ ತುಂಬ ಬಿಳಿ ಬಣ್ಣದ ಹೂವುಗಳು ಕಂಗೊಳಿಸುತ್ತಿವೆ. ಸಮೃದ್ಧ ಹೂವು ಬಂದಿರುವುದರಿಂದ ಉತ್ತಮ ಫಸಲೂ ಬರಬಹುದೆಂಬ ನಿರೀಕ್ಷೆಯಲ್ಲಿ ರೈತ ಯಲ್ಲಪ್ಪ ಇದ್ದಾರೆ. ‘ಬೆಳೆಗೆ ವಿಶೇಷ ಆರೈಕೆ ಮಾಡಿಲ್ಲ, ಫ್ಯಾಕ್ಟ್‌ 20–20 ಹಾಗೂ ಯೂರಿಯ ಕೊಟ್ಟಿದ್ದೇವೆ. ಚಿಕ್ಕಮಗಳೂರಿನ ಅಂಗಡಿ­ಯೊಂದರಿಂದ ಬಿತ್ತನೆಬೀಜ ತಂದು ಬಿತ್ತನೆ ಮಾಡಿದ್ದೆವು’ ಎಂದು ಯಲ್ಲಪ್ಪ ಹೇಳಿದ್ದಾರೆ. ಆದರೆ ಯಾವ ಕಂಪೆನಿ-ಯ ಬೀಜ ಎಂಬುದು ಅವರಿಗೂ ಗೊತ್ತಿಲ್ಲ.
–ಎಚ್‌.ಎಸ್‌.ಅನಿಲ್‌ಕುಮಾರ್‌

Write A Comment