ಕರ್ನಾಟಕ

‘ಮುತ್ತಿನ ಗಂಟು ಮೂರಾದೀತಲೇ ಪರಾಕ್‌…’: ಗೊರವಪ್ಪ ನುಡಿದ ಕಾರಣೀಕ ಅಶುಭ­ದಾಯಕ ಸಂದೇಶ

Pinterest LinkedIn Tumblr

go

ಮೈಲಾರ (ಬಳ್ಳಾರಿ ಜಿಲ್ಲೆ): ‘ಮುತ್ತಿನ ಗಂಟು ಮೂರಾದೀತಲೇ ಪರಾಕ್‌….’
ಇದು ಮೈಲಾರದಲ್ಲಿ ಗುರುವಾರ ಸಂಜೆ ಮೈಲಾರ ಲಿಂಗೇಶ್ವರ ದೇವ­ಸ್ಥಾನದ ಗೊರವಪ್ಪ ನುಡಿದ ಪ್ರಸಕ್ತ ಸಾಲಿನ ಕಾರಣೀಕ.

ಶ್ರೀ ಕ್ಷೇತ್ರದ ಪರಂಪರೆಯ ಸಂಕೇತ­ವಾಗಿರುವ 15 ಅಡಿ ಎತ್ತರದ ಬಿಲ್ಲನ್ನೇರಿ, ಆಕಾಶದತ್ತ ನೋಡಿ ‘ಸದ್ದಲೇ….’ ಎಂದು ಕಾರಣೀಕ ನುಡಿದ ಗೊರವಪ್ಪ, ಅಲ್ಲಿಂದ ಕೆಳಕ್ಕೆ ಧುಮುಕುತ್ತಿದ್ದಂತೆಯೇ ಜಯ­ಘೋಷ­ಗಳು ಮೊಳಗಿದವು.

ಪ್ರಸಕ್ತ ವರ್ಷದ ಮುಂಗಾರು ಮತ್ತು ಹಿಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಈ ಭವಿಷ್ಯವು ಆಶಾದಾಯಕವಲ್ಲ. ರಾಜ­ಕೀಯ ಹಾಗೂ ಸಾಮಾಜಿಕ­ವಾ­ಗಿಯೂ ಈ ಭವಿಷ್ಯವು ಅಶುಭ­ದಾಯಕ ಸಂದೇಶ ಸಾರಿದೆ ಎಂಬುದು ‘ಮುತ್ತಿನ ಗಂಟು ಮೂರಾದೀತಲೇ ಪರಾಕ್‌’ನ ಅರ್ಥ­ವಾ­ಗಿದೆ ಎಂದು ಹಿರಿಯರು ವ್ಯಾಖ್ಯಾನಿ­ಸಿದ್ದಾರೆ.

11 ದಿನಗಳವರೆಗೆ ಉಪ­ವಾಸ ವ್ರತ ಆಚರಿಸಿದ ಗೊರವಪ್ಪ ಅವ­ರೊಂದಿಗೆ ದೇವ­ಸ್ಥಾನದ ಧರ್ಮ­ಕರ್ತ ವೆಂಕಪ್ಪಯ್ಯ ಒಡೆಯರ್‌ ಅವರು ಇದಕ್ಕೂ ಮೊದಲು ದೇವಸ್ಥಾನದಿಂದ ಅಶ್ವಾ­ರೂಢ­ರಾಗಿ ಮೈಲಾ­­ರದ ಡೆಂಕನ ಮರ­ಡಿಗೆ ಬರು­ತ್ತಿ­ದ್ದಂ­ತೆಯೇ ‘ಏಳು ಕೋಟಿ ಏಳು ಕೋಟಿಗೋ…ಚಾಂಗ್‌ಬಲೋ…’ ಎಂಬ ಹರ್ಷೋದ್ಘಾರ ಮುಗಿಲು ಮುಟ್ಟಿತು.

‘ಮುತ್ತಿನ ಬೆಟ್ಟ ಹೋಳಾದೀತಲೇ …’
ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಪ್ರತಿ ವರ್ಷ ಗೊರವಪ್ಪನ ಬಿಲ್ಲಿಗೆ ಮೈಕ್‌ ಅಳವಡಿಸಿ, ಗೊರವಪ್ಪ ಹೇಳಿದ್ದನ್ನು ರೆಕಾರ್ಡ್‌ ಮಾಡಿಕೊಳ್ಳಲು ಟೇಪ್‌ ರೆಕಾರ್ಡರ್‌ ಕಟ್ಟಲಾಗುತ್ತಿತ್ತು. ಆದರೆ ಈ ಸಾರಿ ಟೇಪ್‌ ರೆಕಾರ್ಡರ್‌ ಕಟ್ಟಿರ­ಲಿಲ್ಲ. ಹೀಗಾಗಿ  ‘ಮುತ್ತಿನ ಬೆಟ್ಟ ಹೋಳಾದೀತಲೇ ಪರಾಕ್…’ ಎಂದು ಗೊರವಪ್ಪ ಹೇಳಿದ್ದಾರೆ ಎಂದು ಭಕ್ತರು ವಾದಿಸುತ್ತಿದ್ದುದು ಸಾಮಾನ್ಯವಾಗಿತ್ತು. ಹಾಗಾಗಿ, ಕಾರಣೀಕ ಕುರಿತು  ಗೊಂದಲ ಉಂಟಾಗಿದೆ.

Write A Comment