ಕರ್ನಾಟಕ

ನಕ್ಸಲ್‌ ಚಳವಳಿ ತೊರೆದ ನೂರ್ ಜುಲ್ಫಿಕರ್ ಬಿಡುಗಡೆ

Pinterest LinkedIn Tumblr

noor

ಚಿಕ್ಕಮಗಳೂರು: ‘ಸಶಸ್ತ್ರ ಹೋರಾಟಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಜನ ಮತ್ತು ಸಮಾಜ ಸಿದ್ಧರಾಗಿಲ್ಲ. ಜನರು ಪಾಲ್ಗೊಳ್ಳಬಹುದಾದ ಹೋರಾಟ ಅಗತ್ಯವಾಗಿದೆ’ ಎಂದು ನಕ್ಸಲೀಯ ಚಳವಳಿ ತೊರೆದು ಸಮಾಜದ ಮುಖ್ಯವಾಹಿನಿಗೆ ಬಂದಿರುವ ನೂರ್ ಜುಲ್ಫಿಕರ್ ತಿಳಿಸಿದರು.

ನಗರದ ಉಪ ಕಾರಾಗೃಹದಿಂದ ಜಾಮೀನಿನ ಮೇಲೆ ಶನಿವಾರ ಅವರು ಬಿಡುಗಡೆ-ಗೊಂಡರು. ನಂತರ ಸುದ್ದಿಗಾರ-ರೊಂದಿಗೆ ಮಾತನಾಡಿದರು.

‘ಮುಂದಿನ ಹೋರಾಟ ಕುರಿತು ಆಲೋಚನೆ ಮಾಡಿಲ್ಲ. ಕೆಲವು ಹೋರಾಟದ ಯೋಚನೆ ಇದೆ. ಸ್ನೇಹಿತರು, ಹಿರಿಯರು, ಮಾರ್ಗದರ್ಶಿಗಳೊಂದಿಗೆ ಚರ್ಚೆ ನಡೆಸಿ ಭಾನುವಾರ ಬೆಂಗಳೂರಿನಲ್ಲಿ ನಡೆಯುವ ಪತ್ರಿಕಾಗೋಷ್ಠಿಯಲ್ಲಿ ಹೋರಾಟದ ಹಾದಿ ಸ್ಪಷ್ಟಪಡಿಸಲಾಗುವುದು’ ಎಂದರು.

25 ವರ್ಷಗಳಿಂದ ನಡೆಸಿದ ಹೋರಾಟ ತಪ್ಪಾಗಿದೆ ಅನ್ನಿಸುವುದಿಲ್ಲವೆ ಎಂಬ ಪ್ರಶ್ನೆಗೆ ಉತ್ತರಿಸಿ, ‘ಹೋರಾಟದಲ್ಲಿ ಕೆಲವು ವಿಚಾರಗಳನ್ನು ಕಲಿತ್ತಿದ್ದೇನೆ. 2001ರಲ್ಲಿ ಸರಿಯಾದ ತೀರ್ಮಾನ ಕೈಗೊಳ್ಳಬೇಕಿತ್ತು. ಅಲ್ಲೆ ತಪ್ಪಾಗಿದ್ದು ಅನಿಸುತ್ತೆ’ ಎಂದರು.
ಶಿವಸುಂದರ್ ಇದ್ದರು.

Write A Comment