ಕರ್ನಾಟಕ

ಅಂತರ್ಜಾಲದಲ್ಲಿ ದೇವನೂರ ‘ಸಾಹಿತ್ಯ ಸುಧೆ’

Pinterest LinkedIn Tumblr

de

ಮೈಸೂರು: ನಗರದ ಹೆಸರು ಹೇಳಲು ಇಚ್ಛಿಸದ ಗೆಳೆಯರ ಬಳಗವು ಸಾಹಿತಿ ದೇವನೂರ ಮಹಾದೇವ ಅವರ ಬರಹಗಳನ್ನು www.nammabanavasi.com ಅಂತರ್ಜಾಲ ತಾಣದ ಯೂನಿಕೋಡ್‌ನಲ್ಲಿ ಕಟ್ಟಿಕೊಟ್ಟಿದೆ.

ಈ ಜಾಲತಾಣದಲ್ಲಿ ದೇವನೂರ ಅವರ ಬರಹ, ಅಪರೂಪದ ಛಾಯಾ­ಚಿತ್ರಗಳು, ಭಾಷಣಗಳ ಧ್ವನಿಮುದ್ರಿಕೆ ಇತ್ಯಾದಿಗಳನ್ನು ಅಳವಡಿಸಲಾಗಿದೆ. ಎಲ್ಲ ಮಾಹಿತಿಯನ್ನು ಕನ್ನಡದಲ್ಲಿ ರೂಪಿಸಲಾಗಿದೆ.

ಈ ವೆಬ್‌ಸೈಟ್‌ನಲ್ಲಿ ‘ಅಂಗಳ’, ‘ಹೆಜ್ಜೆಗುರುತು’, ‘ಒಡಲಾಳ’, ‘ಭಾವ-ಪರದೆ’, ‘ಮರುರೂಪಗಳು’, ‘ಕುಸುಮ-ಬಾಲೆ ಕಂಡವರು’, ‘ಜೊತೆಜೊತೆಗೆ’, ‘ಜೋಳಿಗೆ’ ಪುಟಗಳಿವೆ. ‘ಅಂಗಳ’ ಪುಟದಲ್ಲಿ ‘ಈ ಜೀವವೇ… ಆ ಜೀವಕೆ ನಡಿ’ ಮೂಲಕ ಈ ಜಾಲತಾಣದ ಉದ್ದೇಶ-ವನ್ನು ಹೇಳಲಾಗಿದೆ. ಪತ್ರಿಕಾ ವರದಿಗಳು ಈ ಪುಟದಲ್ಲಿ ಇವೆ. ‘ಹೆಜ್ಜೆಗುರುತು’ ಪುಟವು ದೇವನೂರ ಅವರ ಬದುಕು, ಸಾಹಿತ್ಯ ಕೃಷಿ, ಪ್ರಶಸ್ತಿ ಕುರಿತ ಸಂಕ್ಷಿಪ್ತ ಪರಿಚಯವನ್ನು ಒಳಗೊಂಡಿದೆ.

‘ಜೀವತಂತು’ ಪುಟದಲ್ಲಿ ‘ಕುಸಮ­ಬಾಲೆ’, ‘ದ್ಯಾವನೂರ ಹಾಗೂ ಒಡಲಾಳ’ ‘ಎದೆಗೆ ಬಿದ್ದ ಅಕ್ಷರ’ ಹಾಗೂ ‘ದ್ಯಾವನೂರು’ ಕೃತಿಗಳ ಪೂರ್ಣ ಪಠ್ಯ ಮತ್ತು ಇತರ ಬಿಡಿಬರಹಗಳು ಅನಾವರಣಗೊಂಡಿವೆ.
‘ಒಡಲಾಳ’ದಲ್ಲಿ ದ್ಯಾವನೂರ ಅವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಕಿರುನೋಟ ಇದೆ. ‘ಭಾವಪರದೆ’ಯಲ್ಲಿ ಮಹಾ-ದೇವ ಅವರ ಭಾಷಣಗಳ ಧ್ವನಿ-ಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನವನ್ನು ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಿಸಲಾಗಿದೆ. ‘ಮರುರೂಪಗಳು’ ಪುಟದಲ್ಲಿ ಮಹಾದೇವ ಅವರ ಕೃತಿಗಳನ್ನು ತಮ್ಮ ಸಾಮರ್ಥ್ಯದಿಂದ ಅವರ ಸಹ ಪಯಣಿ-ಗರು ಹೊಸರೂಪಗಳಲ್ಲಿ ಸೃಷ್ಟಿಸಿರುವ ವಿವರ ಇದೆ.

ಡಾ.ರಹಮತ್‌ ತರೀಕೆರೆ ಅವರು ಮಹಾದೇವ ಅವರೊಂದಿಗೆ ನಡೆಸಿದ ಸಂದರ್ಶನ, ಡಾ.ಯು.ಆರ್.-ಅನಂತ-ಮೂರ್ತಿ-ಯವರು ‘ಇಲ್‌ಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ’ ಪತ್ರಿಕೆಯಲ್ಲಿ ಕನ್ನಡ ಕಥೆಗಳ ಕುರಿತು 1992ರಲ್ಲಿ ಪ್ರಕಟಿಸಿದ ಇಂಗ್ಲಿಷ್‌ ಲೇಖನದಲ್ಲಿ ದೇವನೂರ ಅವರ ಕಥೆಗಳ ಕುರಿತು ನೀಡಿರುವ ಚಿತ್ರಣವಿದೆ. ಅಂಬೇಡ್ಕರ್‌ ಜನ್ಮದಿನಾ-ಚರಣೆ ಅಂಗವಾಗಿ 2012ರ ಏಪ್ರಿಲ್‌ 14ರಂದು ‘ಪ್ರಜಾವಾಣಿ’ ರೂಪಿ-ಸಿದ ವಿಶೇಷ ಸಂಚಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಮಾಹಿತಿ, ಮಹಾದೇವ ಅವರ ಕುಸುಮಬಾಲೆ ಕಂಡವರಿಗೆ ಕಂಡಷ್ಟು, ದಕ್ಕಿದ್ದಷ್ಟರ ಗುಚ್ಛ ‘ಕುಸುಮಬಾಲೆ’ ಪುಟದಲ್ಲಿದೆ. ‘ಜೊತೆಜೊತೆಗೆ’ ಪುಟವು ಮಹಾದೇವ ಅವರ ಬದುಕು, ಬರಹ, ಹೋರಾಟದ ಪರಿಚಯವನ್ನು ಒಳಗೊಂಡಿದೆ.

ಇದರೊಂದಿಗೆ ಓದುಗರ ಬಳಿ ಇರಬಹುದಾದ ದೇವನೂರ ಕುರಿತ ವಿಶೇಷ ಮಾಹಿತಿಗಳನ್ನು ತುಂಬಿ-ಕೊ-ಳ್ಳಲು ‘ಜೋಳಿಗೆ’ ಪುಟ ಕಾಯುತ್ತಿದೆ. ಓದುಗರು ಅಕ್ಕರೆಯಿಂದ ಅಮೂಲ್ಯವಾದುದನ್ನು nammabanavasi@gmail.comಗೆ ಇ–ಮೇಲ್‌ ಮಾಡಿದರೆ ಬನವಾಸಿಯ ಮೌಲ್ಯ ಹೆಚ್ಚುತ್ತದೆ ಎಂಬ ಒಕ್ಕಣೆಯೂ ಇದೆ. ಈ ‘ವೆಬ್‌ಸೈಟ್‌’ ಕುವೆಂಪು ಜನ್ಮದಿನವಾದ ಡಿ. 29ಕ್ಕೆ ಆರಂಭವಾಗಿದೆ.ಆಸಕ್ತರು  ಜಾಲತಾಣದ ಬಗ್ಗೆ  ಸಲಹೆ ನೀಡಬಹುದು

Write A Comment