ಕರ್ನಾಟಕ

ಉದ್ಯಾನ ನಗರಿಯಲ್ಲಿ ಅವರೆ ಮೇಳ: ನಗರಿಗರ ಬಾಯಿ ನೀರೂರಿಸಿದ ಹತ್ತಾರು ಅವರೆ ತಿಂಡಿ ತಿನಿಸುಗಳು

Pinterest LinkedIn Tumblr

avarekaiಬೆಂಗಳೂರು, ಜ.2: ಚಳಿಗಾಲದ ಮಂಜಿನಲ್ಲಿ ಸಮೃ ದ್ಧವಾಗಿ ಬೆಳೆಯುವ ಅವರೆಕಾಯಿ ಹಳೆ ಮೈಸೂರುಪ್ರಾಂತ್ಯದ ಬಹುಮುಖ್ಯ ಬೆಳೆ. ಅವರೆ ಸೊಗಡನ್ನು ಸವಿದವರೆ ಬಲ್ಲರು. ಈಗ ಬೆಂಗಳೂರಿನ ಜನತೆಗೆ ಅವರೆಯ ಸೊಗಡನ್ನು ಸವಿಯುವಂತಹ ಅವಕಾಶ ವನ್ನು ಕಲ್ಪಿಸಲಾಗಿದ್ದು, ಸಜನ್‌ರಾವ್ ವೃತ್ತದಲ್ಲಿ ‘ಅವರೆ ಬೇಳೆ ಮೇಳ’ವನ್ನು ಆಯೋಜಿಲಾಗಿದೆ.

ಆಧುನಿಕತೆಯ ತೆಕ್ಕೆಯಲ್ಲಿರುವ ಬೆಂಗಳೂರಿನ ಜನತೆ ತಮ್ಮ ಗತ ಇತಿಹಾಸವನ್ನು ಆಗಾಗ ನೆನಪಿಸಿ ಕೊಳ್ಳಲು ಕಡಲೇ ಕಾಯಿ ಪರಿಷೆ, ಕರಗ, ಅಣ್ಣಮ್ಮ ಜಾತ್ರೆ ಹಾಗೂ ಊರಬ್ಬಗಳನ್ನು ಮಾಡುತ್ತಾರೆ. ಅದೇ ರೀತಿಯಲ್ಲಿ ಬೆಂಗಳೂರಿನ ಗ್ರಾಮಾಂತರ ಪ್ರದೇಶದಲ್ಲಿ ಚಳಿಗಾಲದಲ್ಲಿ ಬಹುಮುಖ್ಯವಾಗಿ ಬೆಳೆಯುವ ಅವರೆಕಾಯಿ ಬೆಳೆಯ ಸೊಗಡಿನ ರುಚಿಯನ್ನು ಸವಿಯುವುದಕ್ಕಾಗಿ ‘ಅವರೆ ಬೇಳೆ ಮೇಳ’ವನ್ನು ಆಯೋಜಿಸಲಾಗಿದೆ.

ಅವರೆ ಜಿಲೇಬಿ ವಿಶೇಷ: ಶ್ರೀ ವಾಸವಿ ಕಾಂಡಿಮೆಂ ಟ್ಸ್‌ರವರು ಆಯೋಜಿಸಿರುವ ಅವರೆ ಬೇಳೆ ಮೇಳ ದಲ್ಲಿ ಅವರೆ ಬೇಳೆಯಿಂದಲೆ ತಯಾರಿಸಲ್ಪಟ್ಟ ಸುಮಾರು ಎಪ್ಪತ್ತು ತರಹದ ತಿನಿಸುಗಳನ್ನು ತಯಾರಿಸಿದ್ದು, ‘ಅವರೆ ಜಿಲೇಬಿ’ ಈ ವರ್ಷದ ವಿಶೇಷ ತಿನಿಸಾಗಿದೆ. ಸ್ವಾದಿಷ್ಟ ರುಚಿ ಸವಿಯಲು ಉತ್ತಮವಾದ ಅವಕಾಶ ಇದಾಗಿದೆ.

ಈ ವರ್ಷ ಅವರೆ ಬೇಳೆ ಉತ್ತಮವಾದ ಫಸಲಾಗಿದ್ದು, ಶೇ.70ರಷ್ಟು ಅವರೆಕಾಯಿಯನ್ನು ಮಾಗಡಿ ಯಿಂದ ತರಿಸಲಾಗಿದೆ. ಕಳೆದ ವರ್ಷದ ಮೇಳದಲ್ಲಿ ಸುಮಾರು 5 ಟನ್ ಅವರೆ ಬೇಳೆ ಮಾರಾಟವಾಗಿತ್ತು. ಈ ಬಾರಿ ಸುಮಾರು ಐದರಿಂದ ಆರು ಟನ್‌ಗಳಷ್ಟು ಮಾರಾಟ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ಮಾಲಕರಾದ ಗೀತಾ ಶಿವಕುಮಾರ್ ತಿಳಿಸಿದರು.

ಅವರೆ ಬೇಳೆ ಮೇಳದ ಉದ್ಘಾಟನೆಗೆ ಬಂದು ಅವರೆ ಬೇಳೆ ರುಚಿ ನೋಡಿ ಮಾತನಾಡಿದ ಕೇಂದ್ರ ಸಚಿವ ಅನಂತಕುಮಾರ್, ಅವರೆ ಸೊಗಡನ್ನು ನೆನೆದರೆ ನಾಲಗೆಯಲ್ಲಿ ನೀರುಕ್ಕುತ್ತದೆ. ಆಧುನಿಕ ಜೀವನಶೈಲಿಯತ್ತ ಮನಸೋತಿರುವ ನಗರದ ಜನತೆಗೆ ಅವರೆಯ ಸೊಗಡಿನ ರುಚಿಯ ಗಮ್ಮತ್ತನ್ನು ತಿಳಿಸಿಕೊಟ್ಟರೆ, ಮತ್ತೆಂದಿಗೂ ಪಾಶ್ಚಾತ್ಯ ತಿನಿಸುಗಳತ್ತ ಮುಖ ಮಾಡುವುದಿಲ್ಲವೆಂದು ತಿಳಿಸಿದರು.

ಈ ವೇಳೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತ ನಾಡಿ, ಅವರೆಕಾಯಿ ಪದಾರ್ಥಗಳು ಮೈಸೂರು ಭಾಗದ ಜನತೆಯ ಅತ್ಯಂತ ಪ್ರಿಯವಾದ ಆಹಾರವಾ ಗಿದೆ. ಇದನ್ನು ರಾಗಿ ಬೆಳೆಯ ಜೊತೆ ಒಂದು ಉಪ ಬೆಳೆಯಾಗಿ ಬೆಳೆಯಲಾಗುತ್ತಿತ್ತು. ಆದರೆ, ರಿಯಲ್‌ಎಸ್ಟೇಟ್ ದಂಧೆಯಿಂದಾಗಿ ರಾಗಿ ಜೊತೆಗೆ ಅವರೆ ಕೂಡ ಅಳಿವಿನ ಅಂಚಿಗೆ ಸರಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

Write A Comment