ಕರ್ನಾಟಕ

ಬೆಂಗಳೂರಿನಲ್ಲಿ ರೂ. 1.40 ಕೋಟಿ ವೆಚ್ಚದಲ್ಲಿ ನಿರ್ಮಾಣದ ಅಟಲ್‌ ಕ್ರೀಡಾಂಗಣ ಉದ್ಘಾಟನೆ

Pinterest LinkedIn Tumblr

atal

ಬೆಂಗಳೂರು: ಬಿಬಿಎಂಪಿ ವತಿಯಿಂದ ಯಡಿಯೂರು ವಾರ್ಡಿನ ಕೆರೆ ಮುಂಭಾಗ­ದಲ್ಲಿ ಅಟಲ್ ಬಿಹಾರಿ ವಾಜ­ಪೇಯಿ ಹೊರಾಂಗಣ ಕ್ರೀಡಾಂಗಣವನ್ನು ಶುಕ್ರವಾರ ಉದ್ಘಾಟಿಸಲಾಯಿತು.

‘ಈ ಕ್ರೀಡಾಂಗಣದ ವಿಸ್ತೀರ್ಣ ಎರಡು ಎಕರೆ. ರೂ. 1.40 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಿಸಲಾಗಿದ್ದು, ವಾಲಿಬಾಲ್, ಕೊಕ್ಕೊ, ಕಬಡ್ಡಿ, ಬ್ಯಾಡ್ಮಿಂಟನ್ ಮೈದಾನಗಳು ಇವೆ. ನೆರಳಿಗಾಗಿ 50 ವರ್ಷ ಬಾಳಿಕೆ ಬರುವ ಜರ್ಮನಿಯ ಫೈಬರ್ ಗ್ಲಾಸ್ ಅಳವಡಿಸಲಾಗಿದೆ’ ಎಂದು ಆಡಳಿತ ಪಕ್ಷದ ನಾಯಕ ಎನ್.ಆರ್.ರಮೇಶ್ ಮಾಹಿತಿ ನೀಡಿದರು.

ಮೇಯರ್ ಎಶಾಂತಕುಮಾರಿ ಮಾತನಾಡಿ, ‘ಕೆ.ಆರ್‌.ಪುರ–ಗೊರಗುಂಟೆಪಾಳ್ಯ, ಸಿಲ್ಕ್ ಬೋರ್ಡ್ ಜಂಕ್ಷನ್–ಹೆಬ್ಬಾಳ ಸೇರಿದಂತೆ ನಗರದ ಐದು ಕಡೆಗಳಲ್ಲಿ ಎಲಿವೇಟೆಡ್ ಕಾರಿಡಾರ್‌ಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡಬೇಕು. ಈ ಯೋಜನೆಗಳಿಗೆ ರೂ.15 ಸಾವಿರ ಕೋಟಿ ಆಗಲಿದೆ. ಇದಕ್ಕೆ ಹೆಚ್ಚಿನ ಪ್ರಮಾಣದ ಭೂಸ್ವಾಧೀನ ಮಾಡಬೇಕಿಲ್ಲ. 2050ರ ಸಂಚಾರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಲಾಗಿದೆ’ ಎಂದರು.

ಕೇಂದ್ರ ರಸಗೊಬ್ಬರ ಸಚಿವ ಅನಂತಕುಮಾರ್ ಕ್ರೀಡಾಂಗಣ ಉದ್ಘಾಟಿಸಿ, ‘ನಗರದ ಎಲ್ಲ ವಾರ್ಡ್ ಗಳಿಗೆ ಯಡಿಯೂರು ವಾರ್ಡ್ ಮಾದರಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕರಾದ ಆರ್.ಅಶೋಕ, ಬಿ.ಎನ್‌.ವಿಜಯಕುಮಾರ್, ಎಲ್.ಎ. ರವಿಸುಬ್ರಹ್ಮಣ್ಯ, ಉಪಮೇಯರ್ ರಂಗಣ್ಣ, ಮಾಜಿ ಮೇಯರ್ ಎಸ್.ಕೆ. ನಟರಾಜ್, ಬಿಬಿಎಂಪಿ ಸದಸ್ಯರಾದ ಸುಗುಣ ಬಾಲಕೃಷ್ಣ, ಗೀತಾ ವಿವೇಕಾನಂದ, ಎಲ್.ಶ್ರೀನಿವಾಸ್, ಎ.ಎಚ್.ಬಸವರಾಜ್, ಸೋಮಶೇಖರ್ ಮತ್ತಿತರರು ಹಾಜರಿದ್ದರು.

Write A Comment