ಕರ್ನಾಟಕ

ನೈರುತ್ಯ ರೈಲ್ವೆಯ ಕುಂದುಕೊರತೆ ನಿವಾರಣೆ; ಫೇಸ್‌ಬುಕ್‌, ಟ್ವಿಟರ್‌ ಖಾತೆಗೆ ಚಾಲನೆ

Pinterest LinkedIn Tumblr

face

ಬೆಂಗಳೂರು: ರೈಲು ಪ್ರಯಾಣಿಕರು ಇನ್ನು ಮುಂದೆ  ನಗರ ವಿಭಾಗದ ರೈಲ್ವೆ ಕುರಿತ ಯಾವುದೇ ಕುಂದುಕೊರತೆಗಳು ಮತ್ತು ದೂರುಗಳನ್ನು ಫೇಸ್‌ಬುಕ್‌ ಇಲ್ಲವೇ ಟ್ವಿಟರ್‌ ಮುಖಾಂತರ ದಾಖಲಿಸಬಹುದು.

ನಗರ ಕೇಂದ್ರ ರೈಲು ನಿಲ್ದಾಣದಲ್ಲಿ ಗುರುವಾರ ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ (ಬೆಂಗಳೂರು ವಲಯ) ಅನಿಲ್‌ ಕುಮಾರ್‌ ಅಗರವಾಲ್‌ ಅವರು ‘South Western Railway Bangalore Division’ ಫೇಸ್‌ಬುಕ್‌ ಖಾತೆ ಮತ್ತು ‘@swrbangalore’ ಟ್ವಿಟರ್‌ ಖಾತೆಗೆ ಚಾಲನೆ ನೀಡುವ ಮೂಲಕ ‘ಉತ್ತಮ ಆಡಳಿತ ದಿನ’ವನ್ನು ಆಚರಿಸಿದರು. ರೈಲು ಸಂಚಾರದ ಹೊರಾಂಗಣ ಮಾಹಿತಿ ಫಲಕಕ್ಕೂ ಅವರು ಚಾಲನೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತ­ನಾಡಿದ ಅನಿಲ್‌ ಕುಮಾರ್‌, ‘ಇಲಾಖೆ­ಯನ್ನು ಪ್ರಯಾಣಿಕ ಸ್ನೇಹಿಗೊಳಿಸುವ ನಿಟ್ಟಿನಲ್ಲಿ ಅನೇಕ ಮಾಹಿತಿ ತಂತ್ರ­ಜ್ಞಾನದ ಉಪಕ್ರಮಗಳನ್ನು ಅಳವಡಿಸಿ­ಕೊಂಡಿ­ದ್ದೇವೆ. ಜತೆಗೆ ಆನ್‌ಲೈನ್‌ ಟಿಕೆಟ್ ಕಾಯ್ದಿರಿಸುವ ಐಆರ್‌ಸಿಟಿಸಿ ಜಾಲ­ತಾಣ­ವನ್ನು ಉನ್ನತೀಕರಿಸಿ ವೇಗ­ವನ್ನು ಹೆಚ್ಚಿಸಲಾಗಿದೆ. ಈ ಹಿಂದೆ ಪ್ರತಿದಿನ ಮೂರು ಲಕ್ಷ ಜನರು ಆನ್‌ಲೈನ್‌ ಟಿಕೇಟ್‌ ಕಾಯ್ದಿರಿಸುತ್ತಿ­ದ್ದರು. ಅದರ ಸಂಖ್ಯೆ ಇದೀಗ ಐದು ಲಕ್ಷಕ್ಕೆ ಏರಿಕೆ­ಯಾಗಿದೆ’ ಎಂದರು.

‘ಕಳೆದ ನವೆಂಬರ್‌ನಲ್ಲಿ ನಗರ ಕೇಂದ್ರ ರೈಲು ನಿಲ್ದಾಣದಲ್ಲಿ ‘ವೈಫೈ’ ಸೇವೆಗೆ ಚಾಲನೆ ನೀಡಲಾಗಿದೆ. ಇದೀಗ ಸಾರ್ವ­ಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿ­ನಲ್ಲಿ ನಿಲ್ದಾಣದ ಮುಂಭಾಗದಲ್ಲಿ ರೈಲು ಸಂಚಾರದ ಹೊರಾಂಗಣ ಮಾಹಿತಿ ಫಲಕವನ್ನು ಸ್ಥಾಪಿಸಲಾಗಿದೆ. ಸಾರ್ವ­ಜನಿ­ಕರು ತಮ್ಮ ಕುಂದುಕೊರತೆ­ಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಇಲಾಖೆಗೆ ತಲುಪಿಸಿ ಪರಿ­ಹಾರ ಪಡೆ­ಯಲಿ ಎನ್ನುವ ಉದ್ದೇಶ­ದಿಂದ ಇದೀಗ ಫೇಸ್‌ಬುಕ್‌ ಮತ್ತು ಟ್ವಿಟರ್‌ ಖಾತೆ­ಗಳನ್ನು ತೆರೆಯಲಾಗಿದೆ’ ಎಂದರು.

‘ನಗರ ರೈಲು ನಿಲ್ದಾಣದಲ್ಲಿ ಸುಧಾ­ರಿತ ಟಿಕೆಟ್ ಕಾಯ್ದಿರಿಸುವ ಸೇವೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಈ ವ್ಯವಸ್ಥೆಯಲ್ಲಿ ಗ್ರಾಹಕರು ವಿವಿಧ ರೈಲು­ಗಳಲ್ಲಿ ಮುಂದಿನ 60 ದಿನಗಳಲ್ಲಿ ಖಾಲಿ ಇರುವ ಸೀಟುಗಳ ಮಾಹಿತಿ­ಯನ್ನು ಪರಿ­ಶೀಲಿಸಬಹುದಾಗಿದೆ’ ಎಂದು ತಿಳಿಸಿದರು.
‘ಸ್ವಚ್ಛ ಭಾರತ ಅಭಿಯಾನದಡಿ ರೈಲು ನಿಲ್ದಾಣ­ಗಳಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಶೌಚಾ­ಲಯ, ಕಸದ ಡಬ್ಬಿ­ಗಳು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಸುಧಾರಿಸಲಾ­ಗಿದೆ’ ಎಂದು ಹೇಳಿದರು.

Write A Comment