ಕರ್ನಾಟಕ

ಮೊದಲ ದಿನವೇ ಕುಸಿದ ಟ್ಯಾಂಕ್‌: ಕೊಪ್ಪಳದಲ್ಲಿ ದುರಂತ: ಇಬ್ಬರು ಕಾರ್ಮಿಕರ ಸಾವು

Pinterest LinkedIn Tumblr

pvec261214kpl01

ಕೊಪ್ಪಳ: ನಿರ್ಮಾಣ ಹಂತದಲ್ಲಿದ್ದ ನೀರಿನ ಬೃಹತ್‌ ಟ್ಯಾಂಕ್‌ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟು, ಐವರು ಗಾಯಗೊಂಡಿರುವ ಘಟನೆ ಇಲ್ಲಿನ ಕಿನ್ನಾಳ ರಸ್ತೆ ಶಿಕ್ಷಕರ ಕಾಲೊನಿ ಬಳಿ ಗುರುವಾರ ನಡೆದಿದೆ.

ಪಶ್ಚಿಮ ಬಂಗಾಳ ಮೂಲದ ಕುರ್ಮಾನ್‌ ಅಲಿ (20), ಬೈತ್‌­ಉಲ್ಲಾ (21) ಮೃತಪಟ್ಟವರು. ಜುಲ್ಫೀಕರ್‌ ಶೇಖ್‌, ಅಯಾತುಲ್ಲಾ ಶೇಖ್‌, ಮಿಖಾ­ಯಿಲ್‌, ಅಬೀಬ, ರಬೀವುಲ್ಲಾ ಶೇಖ್‌ ಗಾಯಗೊಂಡಿ­ದ್ದಾರೆ ಎಂದು ಕಾರ್ಮಿ­ಕರ ಜತೆಗಿದ್ದ ಅಹದುಲ್ಲಾ ಶೇಖ್‌ ಮಾಹಿತಿ ನೀಡಿದರು. ಗಂಭೀರ­ವಾಗಿ ಗಾಯಗೊಂ­ಡಿ­ರುವ ಮಿಖಾ­ಯಿಲ್‌ ಅವ­ರನ್ನು ಹೆಚ್ಚಿನ ಚಿಕಿತ್ಸೆ­ಗಾಗಿ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ಒಯ್ಯಲಾಗಿದೆ.

ಟ್ಯಾಂಕ್‌ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿತ್ತು. ಇಂದು ಪ್ರಾಯೋ­ಗಿಕವಾಗಿ ನೀರು ತುಂಬಲಾ­ಗು­ತ್ತಿತ್ತು. ಅದರ ಕೆಳಭಾಗ ಕೆಲವು ಕಾರ್ಮಿಕರು ಬಣ್ಣ ಬಳಿಯುತ್ತಿದ್ದರು. ಸಂಜೆ ಸುಮಾರು 4 ಗಂಟೆ ಟ್ಯಾಂಕ್‌ ಕುಸಿದಿದೆ. ‘ಸ್ಫೋಟದಂಥ ಸದ್ದು ಕೇಳಿ­ಸಿತು. ಹೊರಬಂದಾಗ ದಟ್ಟ ದೂಳಿನ ನಡುವೆ ಟ್ಯಾಂಕ್‌ ಕುಸಿದುಬಿತ್ತು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಕರ್ನಾಟಕ ಜಲಮಂಡಳಿ ನಗರಕ್ಕೆ 24 ಗಂಟೆ ಕುಡಿಯುವ ನೀರು ಪೂರೈ­ಸುವ ಯೋಜನೆ ಅಡಿ ಇಲ್ಲಿ ಟ್ಯಾಂಕ್‌ ನಿರ್ಮಿಸುತ್ತಿತ್ತು. ಇದಕ್ಕೆ ಅಂದಾಜು ₨ 9 ಕೋಟಿ ವೆಚ್ಚವಾಗಿದೆ. ಆಂಧ್ರಪ್ರದೇಶ ಮೂಲದ ಮೆಗಾ ಕನ್‌ಸ್ಟ್ರಕ್ಷನ್‌ ಕಂಪೆನಿ ಕಾಮಗಾರಿ ನಡೆ­ಸು­ತ್ತಿತ್ತು. ಕಳಪೆ ಕಾಮ­ಗಾರಿಯಿಂದ ಟ್ಯಾಂಕ್‌ ನೆಲ­ಕಚ್ಚಿದೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ದೂರಿದರು.

Write A Comment