ಕರ್ನಾಟಕ

ಜನ ನಿಮಗೆ ಮಂಗಳಾರತಿ ಎತ್ತುತ್ತಾರೆ; ಬಿಜೆಪಿಯನ್ನು ಮೂದಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Pinterest LinkedIn Tumblr

sidduu

ಸುವರ್ಣ ವಿಧಾನಸೌಧ (ಬೆಳಗಾವಿ):  ‘ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಕಾಳಜಿ ತೋರಿಸದ ಮತ್ತು ಸದನದಲ್ಲಿ ಗಂಭೀರ ಚರ್ಚೆಗೆ ಅವಕಾಶ ಕೊಡದ ನಿಮಗೆ ಜನ ಮಂಗಳಾರತಿ ಎತ್ತುತ್ತಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯರನ್ನು ಲೇವಡಿ ಮಾಡಿದರು.

ಅಧಿವೇಶನದ ಕೊನೆಯ ದಿನ ಬಿಜೆಪಿ ಸದಸ್ಯರ ಧರಣಿ ಮತ್ತು ಗದ್ದಲದ ನಡುವೆಯೇ ಉತ್ತರ ಕರ್ನಾಟಕದ ಅಭಿವೃದ್ಧಿ ವಿಷಯದ ಕುರಿತ ಚರ್ಚೆಗೆ ಉತ್ತರ ನೀಡಿದ ಅವರು, ‘ಐದು ವರ್ಷಗಳ ಆಡಳಿತದಲ್ಲಿ ರಾಜ್ಯವನ್ನು ಹಗಲು ದರೋಡೆ ಮಾಡಿದ, ಒಂದು ಲಕ್ಷ ಕೋಟಿ ರೂಪಾಯಿ ಕೊಳ್ಳೆ ಹೊಡೆದ ನಿಮಗೆ ನಾಚಿಕೆಯಾಗಬೇಕು’ ಎಂದು ವಾಗ್ದಾಳಿ ನಡೆಸಿದರು.

ಹೊಣೆಗೇಡಿಗಳು: ‘ಉತ್ತರ ಕರ್ನಾ­ಟಕದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್‌ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಿದೆ. ಪರಿಷತ್ತಿನಲ್ಲಿ ಈ ವಿಷಯದ ಮೇಲಿನ ಚರ್ಚೆಯಲ್ಲಿ ಪ್ರತಿಪಕ್ಷಗಳ ಪರವಾಗಿ ಕೆ.ಎಸ್‌. ಈಶ್ವರಪ್ಪ ಒಬ್ಬರೇ ಮಾತನಾಡಿದ್ದಾರೆ, ನಮ್ಮಲ್ಲಿ ಇಬ್ಬರು ಮಾತನಾಡಿದ್ದಾರೆ. ನಿಮಗೇನಾದರೂ ಜವಾಬ್ದಾರಿ ಏನಾದರೂ ಇದೆಯೇ? ಪ್ರಚಾರಕ್ಕೋಸ್ಕರ ನಾಟಕ ಆಡ್ತಾ ಇದ್ದಾರೆ. ಇಲ್ಲಿ ಭಜನೆ ಮಾಡ್ತಾ ಇದ್ದಾರೆ’ ಎಂದು ಗೇಲಿ ಮಾಡಿದರು.

‘ಅಧಿಕಾರದಲ್ಲಿದ್ದಾಗ ಉತ್ತರ ಕರ್ನಾ­ಟಕದ ಅಭಿವೃದ್ಧಿಗೆ ಕ್ರಮ ಕೈಗೊ­ಳ್ಳದ ಉಮೇಶ್‌ ಕತ್ತಿ, ಈಗ ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.

sadadna

ರೈತ ವಿರೋಧಿ ಮೋದಿ: ಇದೇ ಸಂದರ್ಭದಲ್ಲಿ ಅವರು ಕೇಂದ್ರ ಸರ್ಕಾ­ರದ ವಿರುದ್ಧವೂ ಹರಿಹಾಯ್ದರು. ‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತ ವಿರೋಧಿ. ರಾಜ್ಯದಲ್ಲಿ ಮೆಕ್ಕೆಜೋಳ ಖರೀದಿಸಲು ಹಿಂದೇಟು ಹಾಕುತ್ತಿದೆ’ ಎಂದು ದೂರಿದರು.

ಹೈದರಾಬಾದ್‌ -ಕರ್ನಾಟಕಕ್ಕೆ ವಿಶೇಷ ಮೀಸಲಾತಿ ಕಲ್ಪಿಸುವ ಸಂವಿಧಾ­ನದ ಕಲಂ 371 (ಜೆ) ತಿದ್ದುಪಡಿಗೆ ಹಿಂದಿನ ಎನ್‌ಡಿಎ ಸರ್ಕಾರದಲ್ಲಿ ಗೃಹ ಮಂತ್ರಿಯಾಗಿದ್ದ ಎಲ್‌.ಕೆ. ಅಡ್ವಾಣಿ ನಿರಾಕರಿಸಿದ್ದರು. ಆದರೆ ನಂತರದ ಯುಪಿಎ ಸರ್ಕಾರ ಈ ಮಹತ್ವದ ಕೆಲಸ ಮಾಡಿತು ಎಂದು ನೆನಪಿಸಿದರು.

Write A Comment