ಕರ್ನಾಟಕ

ಉತ್ತರ ಕರ್ನಾಟಕಕ್ಕೆ ಅನ್ಯಾಯ: ಆರೋಪಿಯೇ ಇಲ್ಲದೆ ಎಫ್.ಐ.ಆರ್!

Pinterest LinkedIn Tumblr

DB4A788E-F04A-432C-9860-C96

ಸುವರ್ಣ ವಿಧಾನಸೌಧ (ಬೆಳಗಾವಿ): ‘ಇಲ್ಲೊಂದು ಪ್ರಥಮ ಮಾಹಿತಿ ವರದಿ (ಎಫ್.ಐ.ಆರ್) ಇದೆ. ಆದರೆ ಇದರಲ್ಲಿ ಆರೋಪಿಯ ಹೆಸರೇ ಇಲ್ಲ. ಶಿಕ್ಷೆ ವಿಧಿಸುವುದು ಯಾರಿಗೆ? ಇಷ್ಟು ದಿನ ಈ ಸದನದಲ್ಲಿ ಮಾತನಾಡಿದ ಎಲ್ಲರೂ ಉತ್ತರ ಕರ್ನಾಟಕಕ್ಕೆ ಅಭಿವೃದ್ಧಿ ವಿಚಾರದಲ್ಲಿ ಅನ್ಯಾಯವಾಗಿದೆ ಎಂದಿದ್ದಾರೆ. ಆದರೆ ಅನ್ಯಾಯ ಎಸಗಿದವರು ಯಾರು ಎಂಬುದನ್ನು ಯಾರೂ ಹೇಳಿಲ್ಲ…’ ಈ ಮಾತು ಹೇಳಿದ್ದು ಕಾಂಗ್ರೆಸ್‌ನ ರಮೇಶಕುಮಾರ್.

ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ವಿಧಾನಸಭೆಯಲ್ಲಿ ಬುಧವಾರ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ‘ಲಂಚ ಪಡೆಯುವ ವಿಚಾರದಲ್ಲಿ ನಾವೆಲ್ಲ ಒಂದೇ ಆಗಿದ್ದೇವೆ. ಉತ್ತರ ಕರ್ನಾಟಕ ಭಾಗಕ್ಕೆ ಅಧಿಕಾರಿಗಳ ವರ್ಗಾವಣೆ ಆದರೆ ಅದನ್ನು ರದ್ದು ಮಾಡಿ ಎಂದು ನಾವೇ ಪತ್ರ ಬರೆಯುತ್ತೇವೆ. ಬಹುಶಃ ಆರೋಪಿಗಳ ಸ್ಥಾನದಲ್ಲಿ ನಾವೇ ನಿಂತಿದ್ದೇವೆ’ ಎಂದು ವಿಶ್ಲೇಷಿಸಿದರು.

‘ಕಲಬುರ್ಗಿಯಲ್ಲಿ ಸರ್ಕಾರಿ ಕಾಲೇಜು ಇಲ್ಲ ಎಂಬುದು ನಿಜ. ಆದರೆ ಅಲ್ಲಿ ಖಾಸಗಿ ಕಾಲೇಜುಗಳು ಇವೆ. ಈ ಸದನದಲ್ಲಿ ಇರುವವರ ಶಿಕ್ಷಣ ಸಂಸ್ಥೆಗಳೂ ಅಲ್ಲಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳದ್ದು ಒಂದು ಮಾಫಿಯಾ. ಅವರಿಗೆ ತಲೆಬಾಗಬಾರದು’ ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.

‘ಸರ್ಕಾರಿ ಸೇವೆಗೆ ಹೊಸದಾಗಿ ನೇಮಕ ಆಗುವವರನ್ನು ಉತ್ತರ ಕರ್ನಾಟಕದ ಕಡೆಗೂ ಕಳುಹಿಸಿ. ಅಲ್ಲಿಗೆ ಹೋಗಲು ಮನಸ್ಸು ಇಲ್ಲದವರ ನೇಮಕಾತಿ ರದ್ದು ಮಾಡಿ. ವರ್ಗಾವಣೆ ಸಂದರ್ಭದಲ್ಲಿ ಸರ್ಕಾರಿ ನೌಕರರನ್ನು ಹಾಲಿ ಜಿಲ್ಲೆಗಳಿಂದ ಎರಡು ಜಿಲ್ಲೆ ದೂರಕ್ಕೆ ವರ್ಗ ಮಾಡಿ. ಅವರೇ ನಾದರೂ ಅಲ್ಲೇ ಸತ್ತು ಹೋದರೆ, ಹೆಚ್ಚಿನ ಪರಿಹಾರ ಕೊಡೋಣ’ ಎಂದು ಆಕ್ರೋಶ ಭರಿತರಾಗಿ ಹೇಳಿದರು.
ಮಂತ್ರಿ, ಜಾತಿ:  ಹಿಂದಿನಿಂದ ಇಲ್ಲಿಯವರೆಗೆ ಮಂತ್ರಿಗಳಾದ ಹಳೆ ಮೈಸೂರು ಭಾಗದ ಎಷ್ಟು ಜನ ಉತ್ತರ ಕರ್ನಾಟಕದ ಪ್ರವಾಸ ಮಾಡಿದ್ದಾರೆ? ಹೀಗೆ ಟೀಕಿಸಿದವರು ಕೆ.ಆರ್. ರಮೇಶಕುಮಾರ್ ಅವರು.

ಅದೇ ರೀತಿ, ಉತ್ತರ ಕರ್ನಾಟಕದ ಎಷ್ಟು ಜನ ಹಳೆ ಮೈಸೂರು ಭಾಗದಲ್ಲಿ ಪ್ರವಾಸ ಕೈಗೊಂಡಿದ್ದಾರೆ? ಮಂತ್ರಿಗಳು ಊರು ಬಿಟ್ಟು ಕದಲುವುದೇ ಇಲ್ಲ. ಮಂತ್ರಿಗಳ ಕಚೇರಿಗೆ ಹೋದರೆ ಅಲ್ಲಿನ ಸಿಬ್ಬಂದಿ, ಅಲ್ಲಿಗೆ ಭೇಟಿ ಕೊಡು ವವರೆಲ್ಲರೂ ಮಂತ್ರಿಯ ಜಾತಿಗೆ ಸೇರಿದವರೇ ಆಗಿರುತ್ತಾರೆ ಎಂಬುದು ತಿಳಿಯುತ್ತದೆ. ತಮ್ಮ ಜಾತಿಯ ಸಚಿವ ಇಲ್ಲದ ಜನ ತಿರುಪತಿಗೇ ಹೋಗಬೇಕು. ಹೇಗಿದ್ದರೂ ಎರಡೂ ಕಡೆ ಆಗುವುದು ಕೇಶಮುಂಡನವೇ ಅಲ್ಲವೇ! ಮೂರ್ಖ ಮನಸ್ಸು ಇರುವವರು, ಸ್ಕಿಜೋಫ್ರೇನಿ ಯಾದಿಂದ ಬಳಲು ತ್ತಿರುವವರು ಮಾತ್ರ ರಾಜ್ಯ ಒಡೆಯುವ ಮಾತು ಆಡುತ್ತಾರೆ ಎಂದರು.

Write A Comment