ತೀರ್ಥಹಳ್ಳಿ: ಶಾಲಾ ವಿದ್ಯಾರ್ಥಿನಿ ನಂದಿತಾ ಸಾವಿನ ಪ್ರಕರಣ ಈಗ ಭೂಗತ ನಂಟಿನೊಂದಿಗೆ ಬೆಸೆಯು ವಂತಾಗಿದೆ. ಪಟ್ಟಣ ಪಂಚಾಯ್ತಿ ಸದಸ್ಯ ಪಿ.ಸಿ.ಸತೀಶ್ ಶೆಟ್ಟಿ ಅವರಿಗೆ ಭೂಗತ ಪಾತಕಿ ರವಿ ಪೂಜಾರಿ ಹೆಸರಲ್ಲಿ ಸೋಮವಾರ ಜೀವ ಬೆದರಿಕೆ ಕರೆ ಬಂದಿರುವುದು ಇದಕ್ಕೆ ಕಾರಣವಾಗಿದೆ.
ರವಿ ಪೂಜಾರಿ ಹೆಸರಿನಲ್ಲಿ ಆತನ ಸಹಚರ ಬೆದರಿಕೆ ಕರೆ ಮಾಡಿರುವುದಾಗಿ ಸತೀಶ್ ಶೆಟ್ಟಿ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ದಾಖಲಿಸಿದ್ದಾರೆ. ವಿಷಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೂ ತಂದಿದ್ದಾರೆ.
ಸ್ಥಳೀಯ ಪತ್ರಿಕೆಗಳಲ್ಲಿ ನಂದಿತಾ ಸಾವಿನ ಕುರಿತು ಸತೀಶ್ ಶೆಟ್ಟಿ ನೀಡಿರುವ ಹೇಳಿಕೆ ಬೆನ್ನಲ್ಲೇ ಹೇಳಿಕೆ ಯನ್ನು ಹಿಂದೆ ಪಡೆದು ಪ್ರತಿ ಹೇಳಿಕೆ ನೀಡಬೇಕು ಎಂಬ ಬೆದರಿಕೆ ಕರೆಯ ದೂರು ಪೊಲೀಸರ ನಿದ್ದೆಗೆ ಡಿಸಿದೆ. ನಂದಿತಾ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟ ಸಂದ ರ್ಭದಲ್ಲಿ ಸತೀಶ್ ಶೆಟ್ಟಿ ಮಣಿಪಾಲದಲ್ಲಿಯೇ ಇದ್ದು ಚಿಕಿತ್ಸೆಗೆ ಸಹಕರಿಸಿದ್ದರು.
ನಂದಿತಾ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿರುವ ದೂರಿನಲ್ಲಿ ಪ್ರಚೋದನಕಾರಿ ಅಂಶಗಳು ಸೇರಿವೆ ಎಂದು ಸತೀಶ್ ಶೆಟ್ಟಿ ಸ್ಥಳೀಯ ಪತ್ರಿಕೆಗಳಿಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಹಿಂದೆ ಪಡೆಯಬೇಕು ಎಂದು ಡಿ.15 ರಂದು ಬೆಳಿಗ್ಗೆ 11 ಗಂಟೆ 5 ನಿಮಿಷಕ್ಕೆ ಭೂಗತ ಪಾತಕಿ ರವಿ ಪೂಜಾರಿ ಹೆಸರಿನಲ್ಲಿ ಜೀವ ಬೆದರಿಕೆ ಕರೆ ಬಂದಿದ್ದು, ಸತೀಶ್ ಶೆಟ್ಟಿ ಕುಟುಂಬದಲ್ಲಿ ಆತಂಕ ಮೂಡಿಸಲು ಕಾರಣವಾಗಿದೆ.
‘ರವಿ ಪೂಜಾರಿ ಕಡೆಯವರು ಎಂದು ಹೇಳಿ ತುಳು ಭಾಷೆಯಲ್ಲಿ ಮಾತನಾಡಿ, ನಂದಿತಾ ಸಾವಿನ ಪ್ರಕರಣದಲ್ಲಿ ನೀನು ಹೇಳಿರುವ ಹೇಳಿಕೆಯನ್ನು ಒಂದು ವಾರದ ಒಳಗೆ ಹಿಂದಕ್ಕೆ ಪಡೆದು ಪ್ರತಿ ಹೇಳಿಕೆ ನೀಡಬೇಕು. ಇಲ್ಲವಾದರೆ ನಿನ್ನ ಹಾಗೂ ನಿನ್ನ ಕುಟುಂಬವನ್ನು ಮುಗಿಸಿಬಿಡುತ್ತೇವೆ ’ಎಂಬ ಬೆದರಿಕೆ ಕರೆ +9062934797 ಎಂಬ ಮೊಬೈಲ್ ಸಂಖ್ಯೆ ಯಿಂದ ಬಂದಿರುವುದಾಗಿ ಸತೀಶ್ ಶೆಟ್ಟಿ ಪತ್ರಿಕೆಗೆ ತಿಳಿಸಿ ದ್ದಾರೆ. ಸತೀಶ್ ಶೆಟ್ಟಿ ನೀಡಿರುವ ದೂರನ್ನು ದಾಖಲಿ ಸಿಕೊಂಡು ತನಿಖೆಗೆ ಮುಂದಾಗಿರುವುದಾಗಿ ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ಓಂಕಾರ ನಾಯ್ಕ ತಿಳಿಸಿದ್ದಾರೆ.