ಕರ್ನಾಟಕ

ರಾಷ್ಟ್ರೀಯ ಸೇನಾ ಸ್ಮಾರಕದಲ್ಲಿ ಮಂಗಳವಾರ ‘ವಿಜಯ ದಿವಸ್‌’ ಆಚರಣೆ

Pinterest LinkedIn Tumblr

vijay

ಬೆಂಗಳೂರು: ನಗರದ ಚೌಡಯ್ಯ ರಸ್ತೆಯಲ್ಲಿರುವ ರಾಷ್ಟ್ರೀಯ ಸೇನಾ ಸ್ಮಾರಕದಲ್ಲಿ ಮಂಗಳವಾರ ‘ವಿಜಯ ದಿವಸ್‌’ ಆಚರಿಸಲಾಯಿತು.

ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಆಯೋಜಿಸಿದ್ದ ಕಾರ್ಯ­ಕ್ರಮ­ದಲ್ಲಿ ಕರ್ನಾಟಕ ಮತ್ತು ಕೇರಳ ಸೇನಾ ಉಪ ವಿಭಾಗದ ಜನರಲ್ ಆಫೀಸರ್ ಕಮಾಂಡಿಂಗ್ (ಜಿಓಸಿ) ಮೇಜರ್ ಜನರಲ್ ಎ.ಕೆ.ಸಿಂಗ್, ವಾಯು­ಪಡೆಯ ತರಬೇತಿ ಮತ್ತು ಕಮಾಂಡ್‌ ಮುಖ್ಯ ಕಚೇರಿಯ ಹಿರಿಯ ಅಧಿಕಾರಿ ಏರ್‌ ಮಾರ್ಷಲ್‌ ಎಸ್‌.ಆರ್‌.ಕೆ.­ನಾಯರ್‌, ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಗೃಹ ಇಲಾಖೆ  ಪ್ರಧಾನ ಕಾರ್ಯದರ್ಶಿ ಪ್ರವೀಣ್ ಸೂದ್ ಸೇರಿದಂತೆ ಸೇನೆಯ ಅಧಿಕಾರಿಗಳು, ಎನ್‌ಸಿಸಿ ಕೆಡೆಟ್‌ಗಳು ಮತ್ತು ಸ್ಕೌಟ್‌ ಮತ್ತು ಗೈಡ್ಸ್  ವಿದ್ಯಾರ್ಥಿ­ಗಳು ಭಾಗವಹಿಸಿ ಸೈನಿಕ ಸ್ಮಾರಕಕ್ಕೆ ಗೌರವ ಸಲ್ಲಿಸಿದರು.

ಜೆ.ಪಿ.ನಗರ ವರದಿ: ಜೆ.ಪಿ.ನಗರದಲ್ಲಿರುವ ಧನ್ವಂತರಿ ಉದ್ಯಾನದಲ್ಲಿ ಮಂಗಳವಾರ ನಡಿಗೆ­ದಾರರ ಕೂಟದ ಸದಸ್ಯರು ಮತ್ತು ಹಿರಿಯ ನಾಗರಿಕರು ಸೇರಿ ‘ವಿಜಯ ದಿವಸ್‌’ ಆಚರಿಸಿದರು.

ಕಾರ್ಯಕ್ರಮದಲ್ಲಿ ಜೆ.ಪಿ.ನಗರ ನಿವಾಸಿಗಳ ಸಂಘದ ಎ.ರಾಮ ರಾವ್‌ ಮಾತನಾಡಿ, ‘ಬಾಂಗ್ಲಾದೇಶ ವಿಮೋಚನೆ­ಗಾಗಿ 1971ರಲ್ಲಿ ನಡೆದ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಯೋಧರ ಸ್ಮರಣಾರ್ಥ ಈ ದಿವಸವನ್ನು ಆಚರಿಸಲಾಗುತ್ತದೆ.  ಆ ಯುದ್ಧದಲ್ಲಿ ಅತ್ಯಂತ ಕಠಿಣವಾದ ಪರಿಸ್ಥಿತಿಯನ್ನು ನಾಜೂಕಿನಿಂದ ನಿಭಾಯಿ­ಸಿದ  ಲೆಫ್ಟಿನೆಂಟ್ ಜನರಲ್‌ ಜಗಜಿತ್ ಸಿಂಗ್ ಅರೋರಾ ಪಾಕಿಸ್ತಾನ ಸೇನೆಯನ್ನು ಶರಣಾಗುವಂತೆ ಮಾಡಿ­ದರು’ ಎಂದು ಹೇಳಿದರು.

ಕ್ಯಾಪ್ಟನ್‌ ಹರೀಶ್‌, ವಿಂಗ್‌ ಕಮಾಂಡರ್‌ ಶ್ರೀಧರ್, ಮಾಜಿ ಮೇಯರ್‌ ಎಸ್‌.ಕೆ.ನಟರಾಜ್‌, ಬಸವ­ನ­ಗುಡಿಯ ನ್ಯಾಷನಲ್‌ ಕೋ ಆಪ­ರೇಟಿವ್ ಬ್ಯಾಂಕ್‌ ಅಧ್ಯಕ್ಷ ಎಚ್‌.ಆರ್.­ಸುರೇಶ್‌, ನಿರ್ದೇಶಕ ಛಾಯಾಪತಿ, ಕ್ರಿಕೆಟ್‌ ಸಂಖ್ಯಾಶಾಸ್ತ್ರಜ್ಞ ಎಚ್‌.ಆರ್.­ಗೋಪಾಲ ಕೃಷ್ಣನ್‌, ಮಹಿಳಾ ಕ್ರಿಕೆಟ್ ಪಟು ರೂಪಲೇಖಾ ಮತ್ತಿತರರು ಉಪಸ್ಥಿತರಿದ್ದರು.

Write A Comment