ಕರ್ನಾಟಕ

ಕನ್ನಡ ಸಾಹಿತ್ಯಕ್ಕೆ ತುಳು ಕೊಡುಗೆ ಅಪಾರ: ವಿಮರ್ಶಕ ಡಾ. ಬಸವರಾಜ ಕಲ್ಗುಡಿ

Pinterest LinkedIn Tumblr

tulu

ಬೆಂಗಳೂರು: ‘ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಚಹರೆಗಳನ್ನು ಉಳಿಸುವಲ್ಲಿ ತುಳು ಭಾಷೆಯ ಕೊಡುಗೆ ಅಪಾರ ವಾಗಿದೆ’ ಎಂದು ವಿಮರ್ಶಕ ಡಾ. ಬಸವರಾಜ ಕಲ್ಗುಡಿ ಅವರು ಅಭಿಪ್ರಾಯಪಟ್ಟರು.

ತುಳುಕೂಟವು ನಗರದ ನಯನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ತುಳು– ಕನ್ನಡ ಭಾಷಾ ಬಾಂಧವ್ಯ’ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ದರು. ‘ಜಾನಪದ ಸಾಂಪ್ರದಾಯಿಕ  ಆಚರಣೆಗಳಿಂದ ತುಳು ಸಂಸ್ಕೃತಿ ಇನ್ನೂ ಜನಮಾನಸದಲ್ಲಿ ಉಳಿದುಕೊಂಡಿದೆ ಎಂದ ಅವರು, ಮೂಲ ಡ್ರಾವಿಡ ಭಾಷೆಗಳಿಂದ ಪ್ರತ್ಯೇಕಗೊಂಡ ತುಳು, ಡ್ರಾವಿಡರ ಮುಖ್ಯ ಪದಗಳು ತುಳು ಭಾಷೆಯಲ್ಲಿದೆ. ತುಳು ಭಾಷೆಯ ಮೌಖಿಕ ಪ್ರಪಂಚದೊಳಗೆ ಮಾತಿನ ಮತ್ತು ವ್ಯಾಕರಣ ಅವಶೇಷಗಳ ಮಹತ್ವವನ್ನು ಕಡೆಗಣಿಸಲಾಗಿದೆ. ಆದ್ದರಿಂದ ತುಳುವನ್ನು ಮುಖ್ಯ ಭಾಷೆಯಾಗಿ ಪರಿಗಣಿಸಬೇಕು’ ಎಂದು ಹೇಳಿದರು.

‘19ನೇ ಶತಮಾನದ ಕಾಲಘಟ್ಟದಲ್ಲಿ ಮೌಖಿಕ ಭಾಷೆಯಾದ ತುಳು,  ಶೈಕ್ಷಣಿಕ ಪರಂಪರೆಗೆ ತರುವಲ್ಲಿ ಹಲವಾರು ವಿದ್ವಾಂಸರು ಹೋರಾಟಕ್ಕೆ ನಾಂದಿ ಹಾಡಿದ್ದರು.  ಕ್ರೈಸ್ತ ಮಿಷನರಿಗಳು ಇದಕ್ಕೆ ಪೂರಕವಾಗಿ ಕೆಲಸ ಮಾಡಿದ್ದವು. ಆದರೆ, ಇದನ್ನು 20ನೇ ಶತಮಾನದಲ್ಲಿ ಶೈಕ್ಷಣಿಕ ಪರಂಪರೆಯ ಹೋರಾಟವನ್ನು ಮುಂದುವರಿಸದ ಪರಿಣಾಮವಾಗಿ ಭಾಷೆಯ ಹಿನ್ನೆಡೆಗೆ ಕಾರಣವಾಯಿತು’ ಎಂದು  ವಿಶ್ಲೇಷಿಸಿದರು.

‘ಕನ್ನಡ ಸಂಶೋಧನೆಗೆ ತುಳು ಭಾಷೆಯ ವಿದ್ವಾಂಸರಾದ ಗೋವಿಂದ ಪೈ, ವಿವೇಕ್ ರೈ, ಸುಬ್ರಹ್ಮಣ್ಯ ಶಾಸ್ತ್ರಿ, ಕಯ್ಯಾರ ಕಿಞ್ಞಣ್ಣ ರೈ ಮೊದಲಾದವರು ನೀಡಿರುವ ಕೊಡುಗೆ ಅನನ್ಯವಾಗಿದೆ’ ಎಂದು ನುಡಿದರು. ‘ಮುಂಬೈಯಲ್ಲಿ ಇಂದು ಕನ್ನಡ ಭಾಷೆ ಉಳಿದಿದ್ದರೆ ಅದು ತುಳು ಕೂಟದಿಂದ ಮಾತ್ರ. ಕನ್ನಡ ಸಂಸ್ಕೃತಿಯ ಚಹರೆಯನ್ನು ಕಟ್ಟುವಲ್ಲಿ ತುಳು ಭಾಷಿಕರು  ಮುಂದಾಗಿರುವುದು ಹೆಮ್ಮೆ ಯ ವಿಷಯವಾಗಿದೆ.  ಆದ್ದರಿಂದ ತುಳು ಭಾಷೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು’ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಜಾನಪದ ತಜ್ಞ ಡಾ.ಗಣನಾಥ ಎಕ್ಕಾರು ಮಾತನಾಡಿ, ‘ಕನ್ನಡ ಮತ್ತು ಇಂಗ್ಗಿಷ್ ಭಾಷೆಗಳ ಸಂಬಂಧದೊಂದಿಗೆ ತುಳು ಭಾಷೆಯನ್ನು ಬೆಳೆಸಬೇಕಿದೆ.    ಅವೈದಿಕ, ಕೃಷಿ ಪದ್ಧತಿ ಮತ್ತು ಮಾತೃ ಸಂಸ್ಕತಿಗಳ ಹಿನ್ನೆಲೆಯಲ್ಲಿ ತುಳು  ಸಂಸ್ಕೃತಿಯನ್ನು  ಅರ್ಥ ಮಾಡಿ ಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ತುಳು ಭಾಷಿಕರ ಜ್ಞಾನದ ಸಂಪತ್ತು, ಗ್ರಾಂಥಿಕ ಪರಂಪರೆ ಮತ್ತು ಆಧುನಿಕ ಸಾಹಿತ್ಯವು ತುಳುನಾಡಿನ ಪ್ರತಿನಿಧಿಗಳು  ಸರಿಯಾಗಿ ಗ್ರಹಿಸುವುದರಲ್ಲಿ ವಿಫಲ ರಾಗಿದ್ದಾರೆ. ಭಾಷೆಯನ್ನು ಶೈಕ್ಷಣಿಕ ವಲಯದಲ್ಲಿ ಇನ್ನಷ್ಟು ಸಶಕ್ತಗೊಳಿಸುವ ಅಗತ್ಯವಿದೆ’ ಎಂದು ಅಭಿಪ್ರಾಯ ಪಟ್ಟರು.

Write A Comment