ಕರ್ನಾಟಕ

ಪ್ರೀತಿಗೆ ಮನೆಯವರ ವಿರೋಧದಿಂದ ನೊಂದ ಪ್ರೇಮಿಗಳು : ಪ್ರೇಮಿಗಳು ನೇಣಿಗೆ ಶರಣು

Pinterest LinkedIn Tumblr

Lovers-commit

ಹುಬ್ಬಳ್ಳಿ, ಡಿ.4: ಪ್ರೀತಿಗೆ ಮನೆಯವರ ವಿರೋಧದಿಂದ ನೊಂದ ಪ್ರೇಮಿಗಳು ಮನೆ ಬಿಟ್ಟು ಹೊರಬಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿ ಹೊರವಲಯದ ಕುಸುಗಲ್ ರಸ್ತೆಯಲ್ಲಿ ನಡೆದಿದೆ. ರಾಘು ಹನುಮಂತಬೋವಿ (18), ಮಮತಾ ಕಲಭಾಗ್ (18) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು.

ಶಿರಸಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಓದುತ್ತಿದ್ದ ಈ ಇಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದ್ದು, ಈ ವಿಷಯ ತಿಳಿದು ಹುಡುಗಿಯ ಮನೆಯವರು ಮಮತಾಳಿಗೆ ಬುದ್ಧಿವಾದ ಹೇಳಿ ಹುಡುಗನ ಮನೆಯವರಿಗೂ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ನಂತರ ಹುಡುಗನ ಮನೆಯವರು ಹನುಮಂತಬೋವಿಗೆ ಬುದ್ಧಿ ಹೇಳಿ ಓದುವ ಕಡೆ ಗಮನ ಹರಿಸುವಂತೆ ತಿಳಿಸಿ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು.

ಇದರಿಂದ ನೊಂದ ಈ ಇಬ್ಬರು ಪ್ರೇಮಿಗಳು ನಿನ್ನೆ ರಾತ್ರಿ ಮನೆಬಿಟ್ಟು ಹೊರಬಂದು ನಮ್ಮ ಪ್ರೀತಿಗೆ ನೀವು ವಿರೋಧ ವ್ಯಕ್ತಪಡಿಸಿದ್ದರಿಂದ ನಾವು ಸಾಯುತ್ತಿದ್ದೇವೆ ಎಂದು ದೂರವಾಣಿ ಕರೆ ಮಾಡಿ ಹೇಳಿದ್ದಾರೆ.

ತದನಂತರ ಈ ಇಬ್ಬರು ಕುಸುಗಲ್ ರಸ್ತೆಗೆ ಬಂದು ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಮತಾ ಮನೆಯವರು ದೂರವಾಣಿ ಕರೆಯಿಂದ ಗಾಬರಿಯಾಗಿ ತಕ್ಷಣ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಾಗ ಕುಸುಗಲ್ ರಸ್ತೆಯಲ್ಲಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ದೌಡಾಯಿಸಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರೇಮಿಗಳು ಎಂಬುದು ಗೊತ್ತಾಗಿದೆ. ಕೇಶ್ವಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ತನಿಖೆ ಮುಂದುವರಿಸಿದ್ದಾರೆ.

Write A Comment