ಕರ್ನಾಟಕ

ಹೆಜ್ಜೇನುಗಳ ದಾಳಿಗೆ ಇಬ್ಬರು ಬಲಿ: ದೇವನಹಳ್ಳಿ ಶಾಸಕ ಪಿಳ್ಳ ಮುನಿಶಾಮಪ್ಪ ಸಂತಾಪ

Pinterest LinkedIn Tumblr

HEJJENU

ದೇವನಹಳ್ಳಿ: ಹೆಜ್ಜೇನುಗಳ ದಾಳಿಗೆ ಇಬ್ಬರು ಬಲಿಯಾದ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ನಡೆದಿದೆ. ಒಮ್ಮೆಲೆ ಎರಗಿದ ಈ ಹೆಜ್ಜೇನುಗಳು 10 ನಿಮಷಗಳಲ್ಲಿ ಇಬ್ಬರ ಜೀವವನ್ನು ಬಲಿ ತೆಗೆದುಕೊಂಡಿದೆ. ದೇವನಹಳ್ಳಿಯ ಶಿವಾರೆಡ್ಡಿ ಮತ್ತು ಶಂಕರ್ ಮೃತ ದುರ್ದೈವಿಗಳಾಗಿದ್ದಾರೆ.

ದೇವನಹಳ್ಳಿಯಲ್ಲಿ ಇಂದು ಸಂತೆ ದಿನವಾಗಿದ್ದು, ಎಂದಿನಂತೆ ಜನ ಜಂಗುಳಿಯಿಂದ ಕೂಡಿತ್ತು. ಸಂತೆ ಸಮೀಪವಿದ್ದ ನೀರಿನ ಟ್ಯಾಂಕ್ ಮೇಲೆ ಕಟ್ಟಿದ್ದ ಹೆಜ್ಜೇನುಗಳು ಏಕಾಏಕಿ ಸಂತೆಯಲ್ಲಿದ್ದ ಜನರ ಮೇಲೆ ದಾಳಿ ನಡೆಸಿದೆ.

ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹತ್ತಕ್ಕೂ ಹೆಚ್ಚು ಮಂದಿ ಗಾಯಾಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಇಂದು ಮಧ್ಯಾಹ್ನ ಸುಮಾರು 1 ಘಂಟೆಯ ವೇಳೆ ಘಟನೆ ಸಂಭವಿಸಿದೆ. ವೆಂಕಟಗಿರಿ ಕೋಟೆಯವರಾದ ಶಿವಾರೆಡ್ಡಿ ಎಂದಿನಂತೆ ಸಂತೆಯಲ್ಲಿ ಬುಟ್ಟಿ ಮಾರಾಟ ಮಾಡುತ್ತಿದ್ದರು. ಈ ವೇಳೆ ಹೆಜ್ಜೇನುಗಳು ಏಕಾಏಕಿ ದಾಳಿ ನಡೆಸಲು ಮುಂದಾಯಿತು. ಇದನ್ನು ನೋಡಿದ ಸಂತೆಗೆ ಆಗಮಿಸಿದ್ದ ಚಾಲಕ ಶಂಕರ್ ರಕ್ಷಣೆಗಾಗಿ ದೌಡಾಯಿಸಿದರು. ಈ ವೇಳೆ ಶಂಕರ್ ಮೇಲೂ ಹೆಜ್ಜೇನುಗಳು ದಾಳಿ ನಡೆಸಿ ಬಲಿ ತೆಗೆದುಕೊಂಡಿದೆ.

ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ದೇವನಹಳ್ಳಿ ಶಾಸಕ ಪಿಳ್ಳ ಮುನಿಶಾಮಪ್ಪ ಸಂತಾಪ ವ್ಯಕ್ತಪಡಿಸಿದರಲ್ಲದೆ, ಮೃತರ ಕುಟುಂಬಕ್ಕೆ ತಲಾ 10 ಸಾವಿರ ರೂ. ಪರಿಹಾರ ನೀಡುವ ಭರವಸೆ ನೀಡಿದರು.

Write A Comment