ಕರ್ನಾಟಕ

ಕರಡಿ ದಾಳಿಗೆ ರೈತ ಬಲಿ

Pinterest LinkedIn Tumblr

pvec031214ask4

ಅರಸೀಕೆರೆ (ಹಾಸನ ಜಿಲ್ಲೆ): ಕರಡಿ ದಾಳಿಯಿಂದ ರೈತರೊಬ್ಬರು ಸ್ಥಳ ದಲ್ಲಿಯೇ ಮೃತಪಟ್ಟು, ಮತ್ತೊ­ಬ್ಬರು ಗಾಯಗೊಂಡಿರುವ ಘಟನೆ ತಾಲ್ಲೂಕಿನ ಕಣಕಟ್ಟೆ ಹೋಬಳಿ ಹಿರೀಸಾದರಳ್ಳಿ ಗ್ರಾಮದ ಬಳಿ ಮಂಗಳವಾರ ನಡೆದಿದೆ.

ಹಿರೀಸಾದರಳ್ಳಿ ಗ್ರಾಮದ ಶೇಖರಪ್ಪ (58) ಮೃತಪಟ್ಟವರು. ಅದೇ ಗ್ರಾಮದ ಕಲ್ಲೇಶಪ್ಪ (70) ಗಾಯಗೊಂಡು ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಗಳವಾರ ಬೆಳಿಗ್ಗೆ 10ಗಂಟೆಗೆ ಶೇಖರಪ್ಪ ಹಾಗೂ ಕಲ್ಲೇಶಪ್ಪ ಅವರು ತೋಟದ ಕಡೆ ಹೋಗುತ್ತಿದ್ದರು. ರಸ್ತೆ ಬದಿಯ ಪೊದೆಯೊಂದರಲ್ಲಿ ಎರಡು ಮರಿಗಳೊಂದಿಗೆ ಕುಳಿತಿದ್ದ ಕರಡಿ ಇವರ ಮೇಲೆ ದಾಳಿ ನಡೆಸಿದೆ. ಶೇಖರಪ್ಪ ಅವರ ಮೇಲೆ ಎರಗಿದ ಕರಡಿಯು ತಲೆ, ಕಣ್ಣು ಮತ್ತು ಎದೆಯ ಭಾಗವನ್ನು ಗಾಯ ಗೊಳಿಸಿದೆ.

‘ದೊಡ್ಡ ಕರಡಿ ಶೇಖರಪ್ಪ ಅವರ ಮೇಲೆ ದಾಳಿ ನಡೆಸಿದರೆ, ಎರಡು ಕರಡಿ ಮರಿಗಳು ನನ್ನ ಮೇಲೆ ದಾಳಿ ನಡೆಸಿದವು’ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಲ್ಲೇಶಪ್ಪ ತಿಳಿಸಿದರು.

ರೂ. 2 ಲಕ್ಷ ಪರಿಹಾರ: ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಗಣೇಶ ಭಟ್‌ ಸ್ಥಳಕ್ಕೆ ಭೇಟಿ ನೀಡಿ, ಶೇಖರಪ್ಪ ಅವರ ಕುಟುಂಬದವರಿಗೆ ತಾತ್ಕಾಲಿಕವಾಗಿ ರೂ. 2 ಲಕ್ಷ ಪರಿಹಾರದ ಚೆಕ್‌ ವಿತರಿಸಿದರು. ಮರಣೋತ್ತರ ಪರೀಕ್ಷೆ ನಂತರ ಉಳಿದ ರೂ. 3 ಲಕ್ಷ ಪರಿಹಾರ ನೀಡುವುದಾಗಿ ಅವರು ತಿಳಿಸಿದರು.

Write A Comment