ಕರ್ನಾಟಕ

ಅಕ್ಕನ ಮಗಳನ್ನು ಕೊಲೆಗೈದ ಸೋದರ ಮಾವ

Pinterest LinkedIn Tumblr

murder1

ಬೆಂಗಳೂರು, ಅ.1: ಪ್ರೀತಿಸಿ ವಿವಾಹ ವಾದ ಅಕ್ಕನ ಮಗಳನ್ನು ಆಕೆಯ ಗಂಡನ ಮನೆಯಲ್ಲಿ ಕತ್ತು ಹಿಸುಕಿ ಕೊಲೆಗೈದ ಸೋದರಮಾವ ಪರಾರಿಯಾಗಿರುವ ದಾರುಣ ಘಟನೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಕ್ಕನ ಮಗಳು ಲತಾ(25)ಳನ್ನು ಮಾತನಾಡಿಸುವ ನೆಪದಲ್ಲಿ ಮುನಿಯಪ್ಪ ಲೇಔಟ್‌ನ ಓಣಿರಸ್ತೆಯ ಆಕೆಯ ಮನೆಗೆ ಮಂಗಳವಾರ ರಾತ್ರಿ ಬಂದ ಸೋದರ ಮಾವ ಗಣೇಶ್(35) ಕೊಲೆಗೈದು ಪರಾರಿಯಾಗಿದ್ದಾನೆ.

ಕನಕಪುರ ತಾಲೂಕಿನ ಮರಳ ವಾಡಿಯ ಮೈಕ್‌ಸೆಟ್ ಶಿವಣ್ಣ ಅವರ ಪುತ್ರಿ ಲತಾಳನ್ನು ವಿವಾಹವಾಗಿದ್ದ ಮಲ್ಲೇಶ್ ಆಕೆಯನ್ನು ಬಿಟ್ಟು ಬೇರೊಬ್ಬ ಳನ್ನು ಮದುವೆಯಾಗಿದ್ದರಿಂದ ಬೇಸರ ಗೊಂಡು ಹೊಂಗಸಂದ್ರದಲ್ಲಿ ಮನೆ ಮಾಡಿಕೊಂಡು ಫೋರಂಮಾಲ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. ಕೆಲಸದ ವೇಳೆ ಆಕೆಗೆ ಕೆಜಿಎಫ್‌ನ ಕ್ಯಾಸಂಬಳ್ಳಿಯ ಚಾಲಕ ಪ್ರಕಾಶ್‌ನ ಪರಿ ಚಯವಾಗಿ ಪ್ರೀತಿಸಿ 2009ರಲ್ಲಿ ಚನ್ನ ರಾಯಪಟ್ಟಣದ ಶಿವನ ದೇವಾಲಯ ದಲ್ಲಿ ಇಬ್ಬರು ವಿವಾಹ ಮಾಡಿ ಕೊಂಡರು. ಆದರೆ, ಇವರಿಬ್ಬರ ವಿವಾಹ ಲತಾ ತಂದೆ ಶಿವಣ್ಣ, ಅಣ್ಣ ಮಾದೇವ ಹಾಗೂ ಸೋದರಮಾವ ಗಣೇಶ್‌ನಿಗೆ ಇಷ್ಟವಿರಲಿಲ್ಲ. ಆಗಾಗ ಈ ಮೂವರು ಇದೆ ವಿಚಾರವಾಗಿ ಲತಾ ಹಾಗೂ ಪ್ರಕಾಶ್‌ನೊಂದಿಗೆ ಜಗಳ ಮಾಡುತ್ತಿದ್ದರು.

ಗಣೇಶ್ ಲತಾಳ ಚಿಕ್ಕಮ್ಮನ ಮಗಳಾದ ಪುಷ್ಪಾಳನ್ನು ವಿವಾಹವಾಗಿದ್ದು, ಆಕೆ ಗಂಡ ನೊಂದಿಗೆ ಜಗಳ ಮಾಡಿಕೊಂಡು, ಹೊಂಗಸಂದ್ರಕ್ಕೆ ಬಂದು ಗಾರ್ಮೆಂಟ್ಸ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಮನೆ ಸಿಗದೆ ಪರಿತಪಿಸುತ್ತಿದ್ದ ಪುಷ್ಪಾ ಳನ್ನು ಲತಾ ಪ್ರಕಾಶನನ್ನು ಒಪ್ಪಿಸಿ ತನ್ನ ಮನೆಯಲ್ಲೆ ತಂದಿಟ್ಟುಕೊಂಡಳು. ಸ್ವಲ್ಪ ದಿನಗಳ ನಂತರ ಕೆಲಸ ಬಿಟ್ಟ ಪುಷ್ಪಾ ಕನಕಪುರಕ್ಕೆ ಹೋಗಿ ಅಲ್ಲಿ ಕೆಲಸಕ್ಕೆ ಸೇರಿ ಕೊಂಡು ಬೇರೊಬ್ಬನನ್ನು ವಿವಾಹ ಮಾಡಿಕೊಂಡಳು. ಲತಾಳ ಕುಮ್ಮಕ್ಕಿ ನಿಂದಲೆ ಪುಷ್ಪಾ ಬೇರೊಬ್ಬನನ್ನು ವಿವಾಹ ವಾಗಿದ್ದಾಳೆ ಎಂದು ಆಕೆಯೊಂದಿಗೆ ಗಣೇಶ್ ಜಗಳ ಮಾಡಿಕೊಂಡಿದ್ದ. ಈ ನಡುವೆ ಲತಾಳಿಗೆ ವಿವಾಹವಾಗಿ ನಾಲ್ಕೈದು ವರ್ಷಗಳು ಕಳೆದರೂ ಮಕ್ಕ ಳಾಗದಿದ್ದರಿಂದ ಕಳೆದ 6 ತಿಂಗಳ ಹಿಂದೆ ಪುಷ್ಪಾಳ ತಂಗಿ ಆಶಾಳನ್ನು ತನ್ನ ಪತಿ ಪ್ರಕಾಶನೊಂದಿಗೆ ಮತ್ತೊಂದು ವಿವಾಹ ಮಾಡಿಸಿದ್ದಳು. ಈ ಹಿನ್ನೆಲೆಯಲ್ಲಿ ಗಣೇಶ್ ಲತಾಳನ್ನು ಕೊಲೆ ಮಾಡಿರ ಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಮೊಕದ್ದಮೆಯನ್ನು ದಾಖಲಿಸಿಕೊಂಡಿ ರುವ ಮಡಿವಾಳ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Write A Comment