ಕರ್ನಾಟಕ

ಭೂಗಳ್ಳರಿಂದ ವಶಪಡಿಸಿಕೊಂಡ ಆಸ್ತಿ ವಿವರ ಬಹಿರಂಗಪಡಿಸುವಂತೆ ಸಿಎಂಗೆ ದೊರೆಸ್ವಾಮಿ ಪತ್ರ

Pinterest LinkedIn Tumblr

Doreswamy- CM sidd

ಬೆಂಗಳೂರು, ಸೆ. 21: ರಾಜ್ಯಲ್ಲಿ ಸರಕಾರಿ ಭೂಮಿ ವಶಪಡಿಸಿಕೊ ಳ್ಳಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಈ ಭೂಮಿಯನ್ನು ಯಾರಿಂದ ವಶಪಡಿಸಿಕೊಳ್ಳಲಾಗಿದೆ ಎಂಬುದರ ಸಂಬಂಧ ಸಂಪೂರ್ಣ ಅಂಕಿ ಅಂಶಗಳನ್ನು ಪ್ರಕಟಿಸುವಂತೆ ಹಿರಿ ಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಸಿಎಂ ಸಿದ್ದರಾಮಯ್ಯಗಳಿಗೆ ಬಹಿರಂಗ ಪತ್ರ ಬರೆದಿದ್ದಾರೆ

ಭೂಗಳ್ಳರನ್ನು ಶಿಕ್ಷಿಸಿ ರಾಜ್ಯದಲ್ಲಿ ಒತ್ತುವರಿಯಾಗಿರುವ ಸರಕಾರಿ ಭೂಮಿಯನ್ನು ವಶಪಡಿಸಿಕೊಳ್ಳಬೇಕು ಎಂದು ನಗರದ ಪುರಭವನದ ಮುಂದೆ ಭೂ ಕಬಳಿಕೆ ವಿರೋಧಿ ಸಮಿತಿವತಿಯಿಂದ ನಡೆಯುತ್ತಿರುವ ಪ್ರತಿಭಟನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿರುವ ಅವರು, ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಬೃಹತ್ ಹಗರಣಗಳ ನಡೆದಿದ್ದರೂ, ಅದರ ತಂಟೆಗೇ ಹೋಗದ ನೀವು ಸತ್ಯಾಗ್ರಹವನ್ನು ಹಿಂಪಡೆ ಯುವಂತೆ ಕೇಳಲು ನಿಮ್ಮ ಆತ್ಮವಾದರೂ ಹೇಗೆ ಒಪ್ಪೀತು ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಎ.ಟಿ.ರಾಮಸ್ವಾಮಿ ಸಮಿತಿಯ ವರದಿಯಲ್ಲಿ ಗುರುತಿಸಿ ರುವ ಎಲ್ಲ ಭೂಗಳ್ಳರಿಂದಲೂ ಭೂಮಿ ವಶಪಡಿಸಿಕೊಂಡಿದ್ದು, ಕೇವಲ 5000 ಎಕರೆ ಮಾತ್ರ ಬಾಕಿ ಇದೆ ಎಂದು ತಿಳಿಸಿದ್ದೀರಿ. ಎಲ್ಲ ಭೂಮಿಯನ್ನೂ ಹಿಂಪಡೆದಿದ್ದರೆ ಯಾರಿಂದ ಪಡೆಯಲಾಗಿದೆ ಅವರ ಹೆಸ ರು, ಹಿಂಪಡೆದ ಜಮೀನಿನ ವಿವರ, ಹೀಗೆ ಭೂಹಗರಣ ನಡೆಸಿದವರಿಗೆ ಆಗಿರುವ ಶಿಕ್ಷೆ, ಅವರಿಗೆ ನೆರವಾದ ಅಧಿಕಾರಿಗಳು, ಶಾಸಕರು ಮತ್ತು ಇತರರಿಗೆ ಏನು ಶಿಕ್ಷೆ ವಿಧಿಸಲಾಗಿದೆ ಎಂಬುದರ ವಿವರಗಳನ್ನು ಕೂಡಲೇ ಪತ್ರಿಕೆಗಳಿಗೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ದಯವಿಟ್ಟು ಸತ್ಯಕ್ಕೆ ದೂರವಾದ ಹೇಳಿಕೆಗಳನ್ನು ನೀಡಿ ಜನರನ್ನು ಮರುಳುಗೊಳಿಸುವುದನ್ನು ಬಿಡಿ. ಅದರ ಬದಲಿಗೆ ನೈಜ ಸ್ಥಿತಿ ಜನತೆಗೆ ತಿಳಿಸಿ. ಪಟ್ಟಭದ್ರ ಭೂಗಳ್ಳರನ್ನು ರಕ್ಷಿಸುವ ಬದಲು,ಅವರ ಕೃತ್ಯಗಳನ್ನು ಬಯಲುಗೊಳಿಸಿರುವ ಎ.ಟಿ. ರಾಮಸ್ವಾ ಮಿ ವರದಿ, ಬಾಲಸುಬ್ರಹ್ಮಣ್ಯಂ ವರದಿಗಳನ್ನು ವಸ್ತುನಿಷ್ಠವಾಗಿ ನೋಡಿ. ಭೂಮಿಯ ಮೇಲೆ ನಡೆದಿರುವ ಎಲ್ಲ ಅತ್ಯಾಚಾರಗ ಳನ್ನೂ ಗಮನಿಸಿ ಆ ಅತ್ಯಾಚಾರಿಗಳನ್ನು ಶಿಕ್ಷೆಗೆ ಗುರಿಪಡಿಸುವು ದಲ್ಲದೆ, ಅವರು ದೋಚಿರುವ ಸರಕಾರಿ ಭೂಮಿಯನ್ನು ಹಿಂ ಪಡೆದು ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳಿ ಎಂದು ತಮ್ಮ ಪತ್ರದಲ್ಲಿ ಅವರು ಆಗ್ರಹಿಸಿದ್ದಾರೆ. ಭೂ ಗಳ್ಳರನ್ನು ಶಿಕ್ಷೆಗೆ ಗುರಿ ಪಡಿಸಿ ಎಂದು ಪ್ರತಿಭಟನೆ ನಡೆಯುತ್ತಿದ್ದರೆ, ಭೂ ಗಳ್ಳರ ತಂಟೆಗೆ ಹೋಗದೆ ಪ್ರತಿಭಟನೆ ಹೂಡಿರುವ ಸತ್ಯಾಗ್ರಹವನ್ನು ಹಿಂಪಡೆಯಲು ಕೇಳಲು ನಿಮ್ಮ ಆತ್ಮವಾದರೂ ಹೇಗೆ ಒಪ್ಪಿಕೊಂಡಿತೂ ಎಂದು ದೊರೆಸ್ವಾಮಿ ಪ್ರಶ್ನಿಸಿದ್ದಾರೆ.

ನಿಮ್ಹಾನ್ಸ್ ಸಂಸ್ಥೆಗೆ ಸೇರಿದ ಜಮೀನಿನಲ್ಲಿ ಬಹುಮಹಡಿ ಕಟ್ಟಡ ಕಟ್ಟಿಕೊಂಡವರು ಸರಕಾರಿ ಕೆರೆಗಳನ್ನು ಅಡವಿಟ್ಟು ಬ್ಯಾಂಕಿನಿಂದ ಸಾಲಪಡೆದಿದ್ದಾರೆ. ಸಾಲ ನೀಡಿದ ಬ್ಯಾಂಕ್ ಕೆರೆ ಅಂಗಳವನ್ನೇ ಹರಾಜಿಗೆ ಇಟ್ಟಿದ್ದಾರೆ. ಭೂ ಗಳ್ಳನಿಗೆ ಕೆರೆ ಜಾಗದ ಮೇಲೆ ಸಾಲ ನೀಡಿದ ಮೂರ್ಖಬ್ಯಾಂಕ್ ಹಾಗೂ ಈ ಪ್ರಕರಣದಲ್ಲಿ ಆ ಭೂಗಳ್ಳರಿಗೆ ನೆರವಾದ ಅಧಿಕಾ ರಿಗಳಿಗೆ ಎಂಜಿನಿಯರ್ ಏನು ಶಿಕ್ಷೆ ವಿಧಿಸಿದ್ದೀರಿ? ಅವರನ್ನು ಸೆರೆಮನೆಗೆ ಅಟ್ಟಿದ್ದೀರಾ ಎಂದು ಅವರು ಪ್ರಶ್ನಿಸಿದ್ದಾರೆ.

ಇಂತಹ ನೂರೆಂಟು ಪ್ರಕರಣಗಳನ್ನು ನಮ್ಮ ಮುಂದೆ ಇವೆ. ಇವರೆಲ್ಲರಿಗೂ ನೀವು ರಕ್ಷಣೆ ನೀಡಲು ಬಯಸಿದ್ದೀರಾ? ಜನರನ್ನು ಮರುಳು ಮಾಡುವ ತಂತ್ರ ಬಳಸುವುದು ನಿಮ್ಮ ಘನತೆಗೆ ಧಕ್ಕೆ ತರುವುದಿಲ್ಲವೇ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಅವರು ಶೀಘ್ರದಲ್ಲಿ ಸಕಾರಾತ್ಮಾಕ ಉತ್ತರ ನೀಡುವಂತೆ ಕೋರಿದ್ದಾರೆ.

Write A Comment