ಕರ್ನಾಟಕ

ಪ್ರಧಾನಿ ಮೋದಿ ಆಗಮನದ ಹಿಂದೆ ರಾಜಕೀಯವಿಲ್ಲ; ಸದಾನಂದಗೌಡ ಸ್ಪಷ್ಟಣೆ

Pinterest LinkedIn Tumblr

Sadananda Gowda

ಬೆಂಗಳೂರು, ಸೆ. 21: ಪ್ರಧಾನಮಂತ್ರಿ ನರೇಂದ್ರ ಮೋದಿ ಯವರು ತುಮಕೂರಿನಲ್ಲಿ ಫುಡ್ ಪಾರ್ಕ್ ಉದ್ಘಾಟನೆ ಸಮಾರಂಭಕ್ಕೆ ಆಗಮಿಸುತ್ತಿರುವುದರ ಹಿಂದೆ ಯಾವುದೇ ರಾಜಕೀಯ ಹಿತಾಸಕ್ತಿಯಿಲ್ಲ ಎಂದು ರೈಲ್ವೆ ಸಚಿವ ಡಿ.ವಿ.ಸದಾನಂದಗೌಡ ಸ್ಪಷ್ಟಣೆ ನೀಡಿದ್ದಾರೆ.

ರವಿವಾರ ಇಲ್ಲಿನ ಯಲಹಂಕ ದಲ್ಲಿನ ಪಾವಗಡ ಸೌಹಾರ್ದಮಲ್ಟಿ ಪರ್ಪಸ್ ಕೋ ಆಪರೇಟಿ ವ್ ಸೋಸೈಟಿ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ದೇಶ ಮ ತ್ತು ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಿ ನಿಂದ ಶ್ರಮಿಸಬೇಕಿದೆ ಎಂದು ಹೇಳಿದರು.

ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಮುಖ್ಯಮಂತ್ರಿ ಮುಖ್ಯವಾಗಿರುವಂತೆಯೇ ದೇಶದ ಸಾಮಾಜಿಕ ಮತ್ತು ಆರ್ಥಿಕಾಭಿವೃದ್ಧಿಗೆ ಪ್ರಧಾನ ಮಂತ್ರಿಗಳ ಪಾತ್ರವೂ ಅತ್ಯಂತ ಮುಖ್ಯ. ಆ ಹಿನ್ನೆಲೆಯಲ್ಲಿ ಎಲ್ಲರೂ ಅಭಿವೃದ್ಧಿ ಗೆ ಪೂರಕವಾಗಿ ಕೆಲಸ ಮಾಡಬೇಕು ಎಂದು ಸದಾನಂದ ಗೌಡ ಹೇಳಿದರು.

ಸಹಕಾರಿ ಕ್ಷೇತ್ರದಲ್ಲಿ ಸ್ವಯಂ ಉದ್ಯೋಗಗಳು ಹೆಚ್ಚಾಗಿಸೃಷ್ಟಿಯಾಗಬೇಕು. ಮುಂದಿನ ದಿನಗಳಲ್ಲಿ ರೈಲ್ವೆ ಇಲಾಖೆಯಿಂದ 14 ಲಕ್ಷ ಉದ್ಯೋಗಿಗಳಿಂದ ರೈಲ್ವೆ ಸ್ವಚ್ಛತಾ ಆಂದೋಲನ ಕೈಗೊಳ್ಳಲಾಗಿದೆ ಎಂದ ಅವರು, ಕೌಶಲ್ಯ ಅಭಿವೃದ್ಧಿ ಮತ್ತು ತರಬೇತಿ ರೈಲ್ವೆ ಇಲಾಖೆಯಿಂದಲೇ ಸಂಸ್ಥೆಯೊಂದನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಸೆ.24ರಂದು ತುಮಕೂರಿನಲ್ಲಿ ಫುಡ್‌ಪಾರ್ಕ್ ಉದ್ಘಾಟಿಸಲಿರುವ ಪ್ರಧಾನಿ ನರೇಂದ್ರ ಮೋದಿ ಆಗಮಿ ಸುತ್ತಿರುವುದರ ಹಿಂದೆ ಯಾವುದೇ ರಾಜಕೀಯ ಹಿತವಿಲ್ಲ ಎಂದು ಮತ್ತೊಮ್ಮೆ ಪುನರುಚ್ಚರಿಸಿದ ಅವರು, ಕೆಲ ವರ್ಷಗಳ ಹಿಂದೆ ಆರ್ಥಿಕ ಹಿಂಜರಿತ ದೇಶದಲ್ಲಷ್ಟೆ ಅಲ್ಲ ವಿಶ್ವಕ್ಕೆ ಆತಂಕ ಸೃಷ್ಟಿಸಿತ್ತು. ಆದರೆ, ಇಂದು ಭಾರತ ಈ ಆತಂಕದಿಂದ ಮುಕ್ತವಾಗಿದೆ.

ಇದಕ್ಕೆ ಮುಖ್ಯ ಕಾರಣ ನಮ್ಮ ದೇಶದ ಸಹಕಾರಿ ಸಂಘಗಳು ಮತ್ತು ರೈತರ ಸಹಕಾರಿ ಮನೋಭಾವ ಎಂದ ಅವರು, ಮನೆ ಮನೆಗಳಲ್ಲಿನ ಸಹಕಾರದಿಂದಾಗಿ ದೇಶ ಯಾವ ಆರ್ಥಿಕ ಮುಗ್ಗಟ್ಟು ಅನುಭವಿಸಲು ಸಾಧ್ಯವಾ ಗಲಿಲ್ಲ ಎಂದು ಇದೇ ಸಂದರ್ಭದಲ್ಲಿ ಘೋಷಿಸಿದರು.

ದೇಶದಲ್ಲಿ ಎರಡು ರೀತಿಯ ಬ್ಯಾಂಕಿಂಗ್ ವ್ಯವಸ್ಥೆಯಿದೆ. ರಾಷ್ಟ್ರೀಯ ಬ್ಯಾಂಕ್‌ಗಳು ತಮ್ಮ ಆರ್ಥಿಕ ಪರಿಸ್ಥಿತಿ ಉತ್ತಮಗೊಳಿಸುವತ್ತ ಗಮನ ಹರಿಸಿದರೆ.ಸಹಕಾರಿ ಬ್ಯಾಂಕ್‌ಗಳು ದೇಶದ ಆರ್ಥಿಕ ನಿರ್ವಹಣೆ ಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಅವರು ತಿಳಿಸಿದರು.

Write A Comment