ಕರ್ನಾಟಕ

ಬೆಂಗಳೂರು ಮೂಲದ ಈ ಬಾಲಕನ ಎತ್ತರ 5 ವರ್ಷಕ್ಕೆ 6 ಅಡಿ; ವಿಶ್ವದ ಅತಿ ಎತ್ತರದ ಬಾಲಕ ..!

Pinterest LinkedIn Tumblr

karan-sibng

ಮೀರತ್, ಸೆ.18: ಈ ಬಾಲಕನಿಗೆ ಈಗ 5 ವರ್ಷ ಕೆ.ಜಿ.ತರಗತಿಯ (ಪ್ರಾಥಮಿಕ ಪೂರ್ವ)ಲ್ಲಿ ಓದುತ್ತಿದ್ದಾನೆ. ಇವನ ಎತ್ತರ ಎಷ್ಟುಗೊತ್ತೇ..? ಬರೋಬ್ಬರಿ 5.9 ಅಡಿ ಅಂದರೆ ಐದೂ ಮುಕ್ಕಾಲು ಅಡಿ. ವಿಶ್ವದ ಅತಿ ಎತ್ತರದ ಬಾಲಕ ಇವ. ಇವನನ್ನು ಶಾಲೆಗೆ ಸೇರಿಸಿದಾಗ ಎಲ್ಲರಿಗೂ ತಮಾಷೆ ವಸ್ತುವಾಗಿದ್ದನಂತೆ. ಆದರೆ ಈಗ ಎಲ್ಲರೂ ಅವನಿಗೆ ಗೆಳೆಯರಾಗಿದ್ದಾರಂತೆ ಈ ಬಾಲಕನ ಹೆಸರು ಕರಣ್ ಸಿಂಗ್ ತಂದೆ ಸಂಜಯ್ ಸಿಂಗ್, ತಾಯಿ 25ವರ್ಷದ ಶ್ವೇತ್ಲಾನಾಸಿಂಗ್ ಕೂಡ ಕಮ್ಮಿ ಏನಿಲ್ಲ. ಆಕೆಯೂ ಬರೋಬ್ಬರಿ 7.3 ಅಡಿ (ಏಳೂ ಕಾಲು ಅಡಿ) ಮಗ ಈಗ ವಿಶ್ವದಾಖಲೆ (ಗಿನ್ನಿಸ್) ಸೇರಿದ್ದರೆ, ತಾಯಿ ಶ್ವೇತ್ಲಾನಾಸಿಂಗ್ ಈ ಮೊದಲೇ ಗಿನ್ನೀಸ್ ದಾಖಲೆ ಸೇರಿದ್ದಾಳಂತೆ. ಇನ್ನೊಂದು ವಿಶೇಷ ಏನಂದ್ರೆ ಈಕೆ ಬೆಂಗಳೂರಿನವಳು.

ಸಂಜಯ್ ಸಿಂಗ್ ಕೂಡ ಬೆಂಗಳೂರಿನಲ್ಲಿ ಓದುತ್ತಿದ್ದ, ಆಗ ಇಬ್ಬರಿಗೂ ಲವ್ ಆಗಿತ್ತಂತೆ. ಅಚ್ಚರಿಯೆಂದರೆ, ತಾಯಿ ಶ್ವೇತ್ಲಾನಾ 25 ವರ್ಷಾವಾದರೂ ಇನ್ನೂ ಬೆಳೆಯುತ್ತಲೇ ಇದ್ದಾಳಂತೆ. ಕಳೆದ ನಾಲ್ಕು ವರ್ಷಗಳಲ್ಲಿ 2 ಇಂಚು ಬೆಳೆದಿದ್ದಾಳಂತೆ. ಕಾಲೇಜ್‍ನಲ್ಲಿ ಲವ್ವ ಆಗಿ 2007ರಲ್ಲಿ ವಿವಾಹವಾಗಿದ್ದರಂತೆ, ಆಗ ಆಕೆ 6.6 ಅಡಿ ಎತ್ತರವಿದ್ದಳಂತೆ ಈ ಪತಿ-ಪತ್ನಿ ಇಬ್ಬರೂ ಮೇಡ್ ಫಾರ್ ಈಚ್ ಅದರ್ ಆಗಿದ್ದಾರೆ. ಆದರೆ ಮಗನ ಬೆಳವಣಿಗೆ ಸಮಸ್ಸೆಯಾದೀತೇ ಎಂಬ ಭೀತಿ ಇವರದ್ದು, ಒಟ್ಟಾರೆ ಹಾಲಿ ಈಗ ತಾಯಿ-ಮಗ ಇಬ್ಬರೂ ಆರೋಗ್ಯದಿಂದಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

Write A Comment