ಕರ್ನಾಟಕ

ಕೌಟುಂಬಿಕ ಕಲಹ: ಪ್ರಾಧ್ಯಾಪಕಿ ಆತ್ಮಹತ್ಯೆ

Pinterest LinkedIn Tumblr

suicide_hanging_youthhang

ಬೆಂಗಳೂರು, ಸೆ. 14: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸಹಾಯಕ ಪ್ರಾಧ್ಯಾಪಕಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಲ್ಲಿನ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಗೌಡನಪಾಳ್ಯದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಸಹಾಯಕ ಪ್ರಾಧ್ಯಾಪಕಿಯನ್ನು ಗೌಡನಪಾಳ್ಯದ ನಿವಾಸಿ ವತ್ಸಲಾ (26) ಎಂದು ಗುರುತಿಸಲಾಗಿದೆ. ಎಂಟೆಕ್ ವ್ಯಾಸಂಗ ಮಾಡಿರುವ ವತ್ಸಲಾ, ಕಳೆದ ಕೆಲ ದಿನಗಳಿಂದ ಕೆಲಸಕ್ಕೆ ತೆರಳದೆ ಮನೆಯಲ್ಲಿ ಇದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಮಧ್ಯೆ ವತ್ಸಲಾ ಅವರ ಪತಿ ಡಾ.ನರಸಿಂಹನ್ (30) ತಮ್ಮ ತಾಯಿಯ ಮನೆಯಲ್ಲಿ ನೆಲೆಸಿದ್ದರು. ನಿನ್ನೆ ಬೆಳಗ್ಗೆ ಎಂದಿನಂತೆಯೆ ಇದ್ದ ವತ್ಸಲಾ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯಲ್ಲಿನ ಫ್ಯಾನ್‌ಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಹೇಳಲಾಗಿದೆ.

ವತ್ಸಲಾ ಅವರ ಆತ್ಮಹತ್ಯೆಗೆ ನಿಖರವಾದ ಕಾರಣ ಸದ್ಯಕ್ಕೆ ತಿಳಿದು ಬಂದಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಯನ್ನು ಇಲ್ಲಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಸಿ ಕುಟುಂಬದ ವಾರಸುದಾರರಿಗೆ ಒಪ್ಪಿಸಲಾಗಿದೆ. ಈ ಸಂಬಂಧ ಸುಬ್ರಮಣ್ಯಪುರ ಠಾಣಾ ಪೊಲೀಸರು ಮೊಕದ್ದಮೆ ದಾಖಲು ಮಾಡಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.

Write A Comment