ಕರ್ನಾಟಕ

ಕಬ್ಬನ್ ಪಾರ್ಕ್ ಪ್ರವೇಶ ದರ ವಿಧಿಸುವ ಚಿಂತನೆ: ಕತ್ತೆಗಳ ಜೊತೆ ವಾಕಿಂಗ್ ಮಾಡಿದ ವಾಟಾಳ್

Pinterest LinkedIn Tumblr

Vatala11

ಬೆಂಗಳೂರು , ಸೆ.14: ಬೆಂಗಳೂರಿನ ಕಬ್ಬನ್ ಪಾರ್ಕ್‌ನ್ನು ಖಾಸಗೀಕರಣ ಹಾಗೂ ಪ್ರವೇಶ ದರ ವಿಧಿಸುವ ಸರಕಾರದ ಚಿಂತನೆಯ ಧೋರಣೆ ವಿರೋಧಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಕತ್ತೆಗಳ ಜೊತೆ ವಾಕಿಂಗ್ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಆ ನಂತರ ಮಾತನಾಡಿದರು ಅವರು, ಬೆಂಗಳೂರಿನಲ್ಲಿ ಉಸಿರಾ ಡಲು ಇರುವ ಎರಡು ಉದ್ಯಾನ ಗಳೆಂಂದರೆ ಕಬ್ಬನ್ ಪಾರ್ಕ್ ಮತ್ತು ಲಾಲ್ಬಾಗ್ ಇವುಗಳಿಗೆ ಸರಕಾರ ಪ್ರವೇಶ ಶುಲ್ಕ ವಿಧಿಸಲು ಹೊರ ಟಿರುವುದು ಖಂಡನಾರ್ಹ ಎಂದು ಹೇಳಿದರು. ಬೆಂಗಳೂರಿನ ಅಭಿವೃದ್ಧಿ ಮಾಡುವ ಹೆಸರಿನಲ್ಲಿ ಕೆಲವು ಖಾಸಗಿ ವ್ಯಕ್ತಿಗಳು ಸರಕಾರದ ಮುಂದೆ ಹಲವು ಪ್ರಸ್ತಾವೆನೆ ಬೇಡಿಕೆಗಳು ಇಡುವ ಮೂಲಕ ಹಣ ಲೂಟಿ ಹೊಡೆಯುವ ಸಂಚು ರೂಪಿಸುತ್ತಿದ್ದಾರೆ. ಇದಕ್ಕೆ ಸರಕಾರ ಯಾವುದೇ ಕಾರಣಕ್ಕೂ ಮಣಿಯಬಾರದು ಎಂದು ವಾಟಾಳ್ ಸರಕಾರವನ್ನು ಒತ್ತಾಯಿಸಿದರು.

ನಗರದಲ್ಲಿನ ಲಾಲ್‌ಬಾಗ್ ಮತ್ತು ಕಬ್ಬನ್ ಪಾರ್ಕ್‌ನಲ್ಲಿ ಸಾರ್ವಜನಿಕರಿಗೆ ಉಚಿತ ಪ್ರವೇಶವನ್ನು ಕಲ್ಪಿಸಬೇಕು. ಪ್ರವೇಶ ದರ ವಿಧಿಸುವ ಮೂಲಕ ಸಾರ್ವಜನಿಕ ವಿರೋಧಿ ಧೋರಣೆಯಾಗುತ್ತದೆ. ಇದನ್ನು ಮೊದಲಿನಿಂದಲೂ ಖಂಡಿ ಸುತ್ತಾ ಬಂದಿದ್ದೇವೆ. ಮುಂದೆಯೂ ಖಂಡಿಸುತ್ತೇವೆ ಎಂದು ಹೇಳಿದರು.

ಕಬ್ಬನ್ ಪಾರ್ಕ್‌ನ್ನು ತೋಟ ಗಾರಿಕಾ ಇಲಾಖೆ ಉತ್ತಮ ವಾಗಿ ನಿರ್ವಹಣೆ ಮಾಡುತ್ತಿದೆ. ಆದರೆ, ಸರಕಾರ ಇದನ್ನು ಪ್ರಾಧಿಕಾರಕ್ಕೆ ವಹಿಸುವ ಮೂಲಕ ಹಾಳು ಮಾಡುವ ಹುನ್ನಾರಕ್ಕೆ ಸರಕಾರ ವ್ಯವಸ್ಥಿ ತವಾಗಿ ಮುಂದಾಗುತ್ತಿದೆ ಎಂದು ಅವರು ಹೇಳಿದರು.

ಸರಕಾರದ ಈ ಜನ ವಿರೋಧಿ ನೀತಿಯನ್ನು ವಾಟಾಳ್ ಪಕ್ಷ ಸಹಿಸು ವುದಿಲ್ಲ.ಇದೇ ರೀತಿ ಮುಂದುವರಿದರೆ ಉಗ್ರಹೋರಾಟಕ್ಕೆ ಮುಂದಾ ಗಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು. ಇಂಗ್ಲಿಷ್ ನಾಯಕರ ಪ್ರತಿಮೆ ತೆರವಿಗೆ ಒತ್ತಾಯ: ಕಬ್ಬನ್ ಉದ್ಯಾನದಲ್ಲಿ ವಿಕ್ಟೋರಿಯಾ ರಾಣಿ ಸೇರಿದಂತೆ ಹಲವು ಇಂಗ್ಲಿಷ್ ನಾಯಕರ ಪ್ರತಿಮೆಗಳಿವೆ. ಇದು ಗುಲಾ ಮಗಿರಿಯ ಸಂಕೇತವನ್ನು ಪ್ರದರ್ಶಿಸುತ್ತಿದೆ. ಹೀಗಿದ್ದರೂ ಈ ಪ್ರತಿಮೆಗಳ ನವೀಕರಣಕ್ಕೆ ಸರಕಾರ ಮುಂದಾಗಿದೆ. ಅದಕ್ಕೆ ಬದಲಾಗಿ ಅವುಗಳನ್ನು ತೆರವುಗೊಳಿಸಿ ಮ್ಯೂಸಿಯಂನಲ್ಲಿ ಇಡಲಿ ಎಂದು ಸಲಹೆ ನೀಡಿದರು.

Write A Comment